ಶನಿವಾರಸಂತೆ, ಜು. ೧೧: ಶನಿವಾರಸಂತೆ ಪಟ್ಟಣದ ತ್ಯಾಗರಾಜ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಪುಂಡರ ಗುಂಪೊAದು ಮದ್ಯಪಾನ ಮಾಡುತ್ತಾ ಕುಳಿತಿದ್ದುದನ್ನು ಗಮನಿಸಿ ಪ್ರಶ್ನಿಸಿದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್.ಟಿ. ಮೋಹನ್ ಅವರ ಮೇಲೆ ಪುಂಡರ ಗುಂಪು ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ ಘಟನೆ ಭಾನುವಾರ ಸಂಜೆ ನಡೆದಿದೆ.

ಆರೋಪಿಗಳಾದ ಪ್ರವೀಣ್, ಅಜಯ್, ರಜಾಕ್, ಇತರ ಮೂವರು ಏಕಾಏಕಿ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದು, ಗಾಯಗೊಂಡ ಮೋಹನ್ ಕಿರುಚಿಕೊಂಡಾಗ ವಿನೋದ್ ಮತ್ತು ಅಜೀಜ್ ಖಾನ್ ಎಂಬವರುಗಳು ಬಂದು ಜಗಳ ಬಿಡಿಸಿ ಸಮಾಧಾನಪಡಿಸಿ, ಗಾಯಾಳುವನ್ನು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮೋಹನ್ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.