ಗೋಣಿಕೊಪ್ಪಲು, ಜು. ೧೧: ದ.ಕೊಡಗಿನ ಪೊನ್ನಂಪೇಟೆ, ಹುದಿಕೇರಿ, ಶ್ರೀಮಂಗಲ ಹಾಗೂ ಬಾಳೆಲೆ ವ್ಯಾಪ್ತಿಯ ಗ್ರಾಮಗಳಲ್ಲಿ ಮಳೆಯ ಅಬ್ಬರ ಅಧಿಕಗೊಂಡಿದ್ದು ಲಕ್ಷö್ಮಣತೀರ್ಥ ನದಿಯ ನೀರಿನ ಮಟ್ಟ ಹಂತ ಹಂತವಾಗಿ ಏರಿಕೆಯಾಗುತ್ತಿದೆ. ಬಿಡುವಿಲ್ಲದೆ ಸುರಿಯುತ್ತಿರುವ ಮಳೆ ಹಾಗೂ ಗಾಳಿಯಿಂದಾಗಿ ಕಾರ್ಮಿಕರು ತಮ್ಮ ದೈನಂದಿನ ಕೂಲಿ ಕೆಲಸಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ. ಕಾಫಿ ತೋಟದಲ್ಲಿ ಕೆಲಸ ನಿರ್ವಹಿಸಲು ಹಲವೆಡೆ ಕಾರ್ಮಿಕರಿಗೆ ಮಾಲೀಕರು ತಾತ್ಕಾಲಿಕ ರಜೆ ನೀಡಿದ್ದಾರೆ.
ಧಾರಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ದ.ಕೊಡಗಿನ ಕೆರೆ ಕಟ್ಟೆಗಳು, ಸೇರಿದಂತೆ ಲಕ್ಷö್ಮಣ ತೀರ್ಥನದಿಯ ನೀರಿನ ಮಟ್ಟ ಹೆಚ್ಚಾಗಿದೆ. ಮಳೆ ಹೆಚ್ಚಾದ ಕಾರಣ ನಿಟ್ಟೂರು ಸಮೀಪದ ಲಕ್ಷö್ಮಣ ತೀರ್ಥ ನದಿಯ ಹಳೆ ಸೇತುವೆ ಮೇಲೆ ನೀರು ತುಂಬಿ ಹರಿಯುತ್ತಿದೆ. ಮಳೆಯ ಹಿನ್ನೆಲೆಯಲ್ಲಿ ನೀರಿನ ರಭಸಕ್ಕೆ ಸಿಲುಕಿದ ಹಸು ವೊಂದು ಮೃತಪಟ್ಟು ಸೇತುವೆಯ ಮೇಲ್ಭಾಗದಲ್ಲಿ ಅದರ ಮೃತದೇಹ ಕಂಡು ಬಂದಿದೆ.ಮಳೆಯಿAದಾಗಿ ಕೆಲವು ಮರಗಳು ಅಲ್ಲಲ್ಲಿ ವಿದ್ಯುತ್ ಕಂಬಗಳ ಮೇಲೆ ಉರುಳಿ ಬೀಳುತ್ತಿರುವುದ ರಿಂದ ಸೆಸ್ಕ್ ಸಿಬ್ಬಂದಿ ತಂಡೋಪ ತಂಡವಾಗಿ ಮಳೆಯನ್ನು ಲೆಕ್ಕಿಸದೆ ಕೆಲಸ ನಿರ್ವಹಿಸುತ್ತಿದ್ದಾರೆ. ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.
ಮಳೆಯಿAದಾಗಿ ಕೆಲವು ಮರಗಳು ಅಲ್ಲಲ್ಲಿ ವಿದ್ಯುತ್ ಕಂಬಗಳ ಮೇಲೆ ಉರುಳಿ ಬೀಳುತ್ತಿರುವುದ ರಿಂದ ಸೆಸ್ಕ್ ಸಿಬ್ಬಂದಿ ತಂಡೋಪ ತಂಡವಾಗಿ ಮಳೆಯನ್ನು ಲೆಕ್ಕಿಸದೆ ಕೆಲಸ ನಿರ್ವಹಿಸುತ್ತಿದ್ದಾರೆ. ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.