ಮಡಿಕೇರಿ, ಜು. ೧೧: ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ ಸಮಸ್ಯೆಗೆ ಒಳಗಾದ ಸಂತ್ರಸ್ತರ ಸಮಸ್ಯೆ ಪರಿಹರಿಸುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ. ಕೊಡಗಿನ ಬಗ್ಗೆ ಜನಪ್ರತಿನಿಧಿಗಳಿಗೆ ಹಾಗೂ ಸರಕಾರಕ್ಕೆ ಕಾಳಜಿ ಇಲ್ಲ. ಜನರ ಆತಂಕ ದೂರ ಮಾಡುವ ನಿಟ್ಟಿನಲ್ಲಿ ಸರಕಾರದಿಂದ ಸ್ಥೆöÊರ್ಯ ತುಂಬುವ ಕೆಲಸವಾಗ ಬೇಕೆಂದು ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ಒತ್ತಾಯಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಳೆದ ೧೫ ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಪರಿಣಾಮ ಹಲವೆಡೆ ಮನೆ, ಮೂಲಭೂತ ಸೌಕರ್ಯಕ್ಕೆ ಹಾನಿ ಸಂಭವಿಸಿದೆ. ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ೨೦೧೮ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ಮನೆ ಕಳೆದುಕೊಂಡ ನೆರೆಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿ ಜನರ ಸಂಕಷ್ಟಕ್ಕೆ ಪರಿಹಾರಕ್ಕೆ ಸರಕಾರ ಪ್ರಾಮಾಣಿಕ ಪ್ರಯತ್ನ ನಡೆಸಿತ್ತು. ಆದರೆ, ಪ್ರಸ್ತುತ ಬಿಜೆಪಿ ಸರಕಾರ ಕೊಡಗನ್ನು ನಿರ್ಲಕ್ಷಿö್ಯಸಿದೆ. ಜನರು ಮಳೆಗಾಲದಿಂದ ಸಮಸ್ಯೆ ಅನುಭವಿಸುತ್ತಿದÀÆ್ರ ಕಣ್ಣೀರೊರೆಸುವ ಕೆಲಸ ಮಾಡುತ್ತಿಲ್ಲ. ನೆಲ್ಲಿಹುದಿಕೇರಿ,

(ಮೊದಲ ಪುಟದಿಂದ) ಸಿದ್ದಾಪುರ ವ್ಯಾಪ್ತಿಯ ನೆರೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಇದುವರೆಗೂ ಕೊಡಗಿನ ಶಾಸಕರಿಗಾಗಲಿ, ಸರಕಾರಕ್ಕಾಗಲಿ ಸಾಧ್ಯವಾಗದಿರಲು ಕಾರಣವೇನು? ಎಂದು ಪ್ರಶ್ನಿಸಿದರು.

ನೆರೆಯಿಂದ ಮನೆ ಕಳೆದುಕೊಂಡವರಿಗೆ ಖಾಸಗಿ ಜಾಗ ಖರೀದಿಸಿ ನೀಡುತ್ತೇವೆ ಎಂಬ ಭರವಸೆ, ಭರವಸೆ ಆಗಿಯೇ ಉಳಿದಿದೆ. ಸರಕಾರದ ಖಜಾನೆಯಲ್ಲಿ ಹಣವಿದೆ ಎಂದು ಹೇಳುವ ಸರಕಾರ ಕೊಡಗಿನ ಸಮಸ್ಯೆಗಳಿಗೆ ಯಾಕೆ ಹಣ ನೀಡುವುದಿಲ್ಲ. ಉಸ್ತುವಾರಿ ಸಚಿವರು ಕೊಡಗನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಹೊರಜಿಲ್ಲೆ ಅವರಿಗೆ ಉಸ್ತುವಾರಿ ಸಚಿವ ಸ್ಥಾನ ನೀಡಿದ ಪರಿಣಾಮ ಜಿಲ್ಲೆ ಅನಾಥವಾಗಿದೆ. ಕೊಡಗಿನ ಶಾಸಕರು ಒತ್ತಡ ಹೇರಿ ಸಚಿವ ಸ್ಥಾನವನ್ನು ಪಡೆದುಕೊಳ್ಳುವುದಿಲ್ಲ. ಇದರಿಂದ ಜಿಲ್ಲೆ ಸರಕಾರದ ದಿವ್ಯನಿರ್ಲಕ್ಷö್ಯಕ್ಕೆ ಒಳಗಾಗಿದೆ. ಶಾಸಕರು ಮೊದಲು ಮೃಧು ಧೋರಣೆ ಬಿಡಬೇಕು. ಕೊಡಗು ಜಿಲ್ಲೆಯ ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗಳಿಗೆ ತಾನು ಪತ್ರ ಬರೆಯುತ್ತೇನೆ ಎಂದು ಇದೇ ಸಂದರ್ಭ ವೀಣಾ ಅಚ್ಚಯ್ಯ ಮಾಹಿತಿ ನೀಡಿದರು.

ಭಾಗಮಂಡಲದ ಮೇಲ್ಸೇತುವೆ ಅವೈಜ್ಞಾನಿಕವಾಗಿ ಕೂಡಿದೆ. ೪ ಕೋಟಿಯ ಜಿಲ್ಲಾಧಿಕಾರಿ ಭವನಕ್ಕೆ ೭ ಕೋಟಿಯ ತಡೆಗೋಡೆ ನಿರ್ಮಿಸಲಾಗಿದೆ. ಇದರಿಂದ ಜನರ ತೆರಿಗೆ ಹಣ ಪೋಲಾಗುತ್ತಿದೆ ಎಂದು ಆರೋಪಿಸಿದರು.

ಸಂಸದ ಪ್ರತಾಪ್ ಸಿಂಹ ಅವರು ಕೊಡಗಿಗೆ ನೀಡಿರುವ ಕೊಡುಗೆ ಏನು ಎಂದು ಪ್ರಶ್ನಿಸಿದ ವೀಣಾ ಅಚ್ಚಯ್ಯ, ಧರ್ಮದ ಹೆಸರಿನಲ್ಲಿ ಕಂದಕ ಸೃಷ್ಟಿಸುವುದು ಮಾತ್ರ ಅವರ ಕೆಲಸವಾಗಿದೆ. ಅಭಿವೃದ್ಧಿ ಕಾರ್ಯಕ್ಕೆ ಅವರ ಕೊಡುಗೆ ಶೂನ್ಯ ಎಂದು ಟೀಕಿಸಿದರು.

೪ ಪಥದ ರಸ್ತೆ, ರೈಲು ತರುತ್ತೇನೆ ಎಂದು ಹೇಳುವ ಪ್ರತಾಪ್ ಸಿಂಹ ಮೊದಲು ಇರುವ ರಸ್ತೆಗಳನ್ನು ಸರಿಪಡಿಸಲಿ ಎಂದು ಆಗ್ರಹಿಸಿದರು.

ಖಂಡನೆ: ಸಾಮಾಜಿಕ ಜಾಲತಾಣದಲ್ಲಿ ಕೊಡವರ ಹಾಗೂ ಕಾವೇರಿ ಮಾತೆಯ ವಿರುದ್ಧ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿದ ವೀಣಾ, ತಪ್ಪಿತಸ್ಥನನ್ನು ಪತ್ತೆಹಚ್ಚಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು. ಕಾವೇರಿ ಎಲ್ಲರಿಗೂ ಪವಿತ್ರ ಕ್ಷೇತ್ರವಾಗಿದೆ. ಈ ಬಗ್ಗೆ ಯಾರು ಮಾತನಾಡದಿರುವುದು ಸಮಂಜಸವಲ್ಲ. ಕೆಲವು ಸಂಘಟನೆಗಳು ಕೊಡಗು ಬಂದ್‌ಗೆ ಎಚ್ಚರಿಕೆ ನೀಡಿದ್ದು, ಇದಕ್ಕೆ ನಮ್ಮ ಬೆಂಬಲ ಇದೆ ಎಂದು ತಿಳಿಸಿದರು. ಜೊತೆಗೆ ಈ ಘಟನೆ ಹಿಂದೆ ಕಾಣದ ಕೈಗಳು ಅಡಗಿವೆ ಎಂದು ಸಂಶಯ ವ್ಯಕ್ತಪಡಿಸಿದರು.

ಶಾಲಾ-ಕಾಲೇಜಿಗಳಿಗೆ ರಜೆ ಘೋಷಣೆ ಆದೇಶ ತಿದ್ದುಪಡಿ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದರಿಂದ ಗೊಂದಲ ಉಂಟಾಗುತ್ತಿದೆ. ಈ ರೀತಿ ಮಾಡುವ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ ಮಾತನಾಡಿ, ಕೊಡಗಿನ ಸಮಸ್ಯೆಗಳಿಗೆ ಸರಕಾರ ಸ್ಪಂದಿಸಬೇಕು ಎಂದು ಆಗ್ರಹಿಸಿದÀರು. ಕೊಡವರ ಹಾಗೂ ಕಾವೇರಿ ವಿರುದ್ಧ ಅವಹೇಳನಕಾರಿ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟವನನ್ನು ಬಂಧಿಸಲು ತಡವಾಗುತ್ತಿರಲು ಕಾರಣವೇನು ಎಂದು ಪ್ರಶ್ನಿಸಿದರು.

ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೊಲ್ಯದ ಗಿರೀಶ್, ಹಿಂದುಳಿದ ವರ್ಗಗಳ ಘಟಕದ ಜಿಲ್ಲಾಧ್ಯಕ್ಷ ಬಾನಂಡ ಪೃಥ್ಯು, ಪದಾಧಿಕಾರಿ ಮುಕ್ಕಾಟೀರ ಸಂದೀಪ್ ಹಾಜರಿದ್ದರು.