ಮಡಿಕೇರಿ, ಜು. ೧೧: ಬೆಟ್ಟ, ಗುಡ್ಡಪ್ರದೇಶ ಮತ್ತು ಸೂಕ್ತವಲ್ಲದ ಜಾಗ ಹೊರತುಪಡಿಸಿ ಇತರ ಜಾಗದಲ್ಲಿ ಜಿಲ್ಲಾಡಳಿತ ಭೂಪರಿವರ್ತನೆಗೆ ಅವಕಾಶ ಮಾಡಿಕೊಡುವುದರ ಜತೆಗೆ ಕೊಡಗಿನ ಜನರ ಹಿತಾಸಕ್ತಿ ಕಾಪಾಡುವಲ್ಲಿ ಸ್ಪಂದಿಸಬೇಕು ಎಂದು ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎಂ.ಬಿ.ದೇವಯ್ಯ ಮನವಿ ಮಾಡಿದರು.

ಇತ್ತೀಚಿನ ದಿವಸಗಳಲ್ಲಿ ಭೂ ಪರಿವರ್ತನೆಗೆ ಕೆಲವರು ಅಡೆತಡೆ ಮಾಡಿ ಜಿಲ್ಲೆಯ ಜನರಿಗೆ ನಿರ್ಬಂಧ ಹೇರುತ್ತಿರುವುದು ಸರಿಯಲ್ಲ. ಭೂಪರಿವರ್ತನೆ ಮಾಡುವ ಸ್ಥಳಗಳನ್ನು ಕಂದಾಯ ಇಲಾಖೆಯವರು ಖುದ್ದಾಗಿ ವೀಕ್ಷಿಸಿ ಸೂಕ್ತವಾದ ಸ್ಥಳದಲ್ಲಿ ಮಾತ್ರ ಭೂ ಪರಿವರ್ತನೆಗೆ ಅವಕಾಶ ಮಾಡುವುದು ಸೂಕ್ತ ಎಂದ ಅವರು, ಕೊಡಗಿನ ಕಾಳಜಿ ಇಲ್ಲದ ಕೆಲವರು ಭೂ ಪರಿವರ್ತನೆ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈಗಾಗಲೇ ಕೆಲವು ಜನರು ಭೂ ಪರಿವರ್ತನೆ

(ಮೊದಲ ಪುಟದಿಂದ) ಮಾಡಿ ಸಣ್ಣ ಪುಟ್ಟ ಉದ್ದಿಮೆ ನಡೆಸಿಕೊಂಡು ಅವರ ಜೀವನೋಪಾಯವನ್ನು ಕಂಡುಕೊAಡಿದ್ದಾರೆ. ಆದ್ದರಿಂದ ಬೆಟ್ಟ, ಗುಡ್ಡಪ್ರದೇಶ ಮತ್ತು ಸೂಕ್ತವಲ್ಲದ ಜಾಗ ಹೊರತುಪಡಿಸಿ ಬೇರೆ ಸ್ಥಳಗಳಲ್ಲಿ ಭೂಪರಿವರ್ತನೆಗೆ ಅವಕಾಶ ಮಾಡಿಕೊಡಬೇಕು. ಜಿಲ್ಲಾಧಿಕಾರಿಯ ಅಧೀನದಲ್ಲಿ ಇರುವ ಭೂಪರಿವರ್ತನಾ ಸಮಿತಿಯವರು ಈ ಬಗ್ಗೆ ಸೂಕ್ತ ಸಲಹೆಗಳನ್ನು ನೀಡಿ ಭೂಪರಿವರ್ತನೆ ಕಡತಗಳಲ್ಲಿ ಸೂಕ್ತವೆನಿಸಿದ ಕಡತಗಳನ್ನು ವಿಲೇವಾರಿ ಮಾಡಬೇಕು ಎಂದು ಆಗ್ರಹಿಸಿದರು.

ಜು ೧೬, ೧೭ ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ಪ್ರಹ್ಲಾದ್ ಜೋಶಿ ಸೇರಿದಂತೆ ಮುಖ್ಯಮಂತ್ರಿಗಳು, ಇತರರು ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭ ಜಿಲ್ಲೆಯಿಂದ ೧೦ ಜನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜಿಲ್ಲೆಯ ಸಮಸ್ಯೆಗಳ ಬಗ್ಗೆ ವಿವರಿಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ಅಂಬೆಕಲ್, ಮಾಜಿ ಅಧ್ಯಕ್ಷರು ಮತ್ತು ಎಸ್.ಕೆ.ಸಿ.ಸಿ.ಐ.ಯ ರಾಜ್ಯ ನಿರ್ದೇಶಕ ಕೆ.ಬಿ. ಗಿರೀಶ್ ಗಣಪತಿ, ಸಂಘಟನಾ ಕಾರ್ಯದರ್ಶಿ ಬಿ.ಆರ್.ಪ್ರಮೋದ್ ಇದ್ದರು.