ಮಡಿಕೇರಿ, ಜು.೧೧: ಕುಶಾಲನಗರದ ಶ್ರೀ ಶಿರಡಿ ಸಾಯಿ ಟ್ರಸ್ಟ್ ವತಿಯಿಂದ ಜು.೧೩ ರಂದು ಶ್ರೀ ಶಿರಡಿ ಸಾಯಿ ಮಂದಿರದಲ್ಲಿ ಗುರು ಪೂರ್ಣಿಮೆಯ ವಿಶೇಷ ಪೂಜೆ ನಡೆಯಲಿದೆ.
ಅಂದು ಬೆಳಗ್ಗೆ ೬ ಗಂಟೆಗೆ ಕಾಕಡ ಆರತಿ, ೬.೩೦ಕ್ಕೆ ಗಣಪತಿ ಹೋಮ, ೭ ಗಂಟೆಗೆ ಪಂಚಾಮೃತ ಅಭಿಷೇಕ ಜರುಗಲಿದ್ದು, ಬೆಳಗ್ಗೆ ೮.೩೦ ಕ್ಕೆ ಮಹಾಮಂಗಳಾರತಿ ಹಾಗೂ ೯ ಗಂಟೆಗೆ ಸಾಮೂಹಿಕ ಸತ್ಯನಾರಾಯಣ ಪೂಜೆ ನೆರವೇರಲಿದೆ. ಬಾಬಾ ಅವರ ಬೃಹತ್ ಮೂರ್ತಿಗೆ ಅಭಿಷೇಕ ಮಾಡಲು ಈ ಬಾರಿ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಶ್ರೀ ಶಿರಡಿ ಸಾಯಿ ಟ್ರಸ್ಟ್ನ ಪ್ರಮುಖರು ಹಾಗೂ ಪದಾಧಿಕಾರಿಗಳು ತಿಳಿಸಿದ್ದಾರೆ.