ದ್ರೌಪದಿ ಮುರ್ಮುಗೆ ಶಿವಸೇನೆ ಬೆಂಬಲ-ಉದ್ಧವ್ ಠಾಕ್ರೆ ಘೋಷಣೆ
ಮುಂಬೈ, ಜು. ೧೨: ತಾ. ೧೮ ರಂದು ನಡೆಯಲಿರುವ ರಾಷ್ಟçಪತಿ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸಲು ಶಿವಸೇನೆ ತೀರ್ಮಾನಿಸಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಪಕ್ಷದ ಅಧ್ಯಕ್ಷ ಉದ್ಧವ್ ಠಾಕ್ರೆ, ಯಾವುದೇ ಒತ್ತಡವಿಲ್ಲದೆ ಮುರ್ಮು ಅವರನ್ನು ಬೆಂಬಲಿಸಲು ಶಿವಸೇನೆ ನಿರ್ಧರಿಸಿರುವುದಾಗಿ ತಿಳಿಸಿದರು. ಶಿವಸೇನಾ ಸಂಸದರ ಸಭೆಯಲ್ಲಿ ಯಾರೂ ಕೂಡಾ ನನಗೆ ಒತ್ತಡ ಹಾಕಲಿಲ್ಲ ಎಂದು ಅವರು ಹೇಳಿದರು. ಇದೇ ಮೊದಲ ಬಾರಿಗೆ ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರು ರಾಷ್ಟçಪತಿಯಾಗುವ ಅವಕಾಶವಿರುವುದಾಗಿ ಪಕ್ಷದ ಬುಡಕಟ್ಟು ಮುಖಂಡರು ಹೇಳಿರುವುದಾಗಿ ತಿಳಿಸಿದರು. ಪ್ರಸ್ತುತ ನಡೆಯುತ್ತಿರುವ ರಾಜಕೀಯ ಪರಿಸ್ಥಿತಿಯಲ್ಲಿ ನಾನು ಮುರ್ಮು ಅವರನ್ನು ಬೆಂಬಲಿಸಬಾರದು. ಆದರೆ, ನಾವು ಸಣ್ಣ ಮನಸ್ಥಿತಿ ಹೊಂದಿಲ್ಲ ಎಂದರು.
ರಾಷ್ಟç ಲಾಂಛನದಲ್ಲಿ ಉಗ್ರಾವತರಾದ ಸಿಂಹಗಳು: ಪ್ರತಿಪಕ್ಷಗಳು, ಸಾಮಾಜಿಕ ಹೋರಾಟಗಾರ ಆಕ್ಷೇಪ
ನವದೆಹಲಿ, ಜು. ೧೨: ಆಕರ್ಷಕ ಮತ್ತು ವಿಶ್ವಾಸದ ಮುಖದಿಂದ ಕೂಡಿರುವ ಅಶೋಕನ ಸಿಂಹದ ಬದಲಿಗೆ ಭಯಾನಕ ಹಾಗೂ ಉಗ್ರವತಾರದ ಸಿಂಹದ ಭಂಗಿ ಹೊಂದಿರುವ ಲಾಂಛನವನ್ನು ಬದಲಾಯಿಸುವ ಮೂಲಕ ದೇಶದ ರಾಷ್ಟç ಲಾಂಛನವನ್ನು ವಿರೂಪಗೊಳಿಸಲಾಗಿದೆ ಎಂದು ಕಾಂಗ್ರೆಸ್ ಹಾಗೂ ಸಾಮಾಜಿಕ ಹೋರಾಟಗಾರರು ಆಕ್ಷೇಪಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ದಯವಿಟ್ಟು ಸಿಂಹದ ಮುಖವನ್ನು ಬದಲಾವಣೆ ಮಾಡಿ. ಇದನ್ನು ಪರಿಶೀಲಿಸಿ, ಇಲ್ಲವಾದರೆ, ಅದನ್ನೇ ದುರಸ್ತಿ ಮಾಡಿ ಎಂದು ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಟ್ವೀಟ್ ಮಾಡಿದ್ದಾರೆ. ಹೊಸ ಪಾರ್ಲಿಮೆಂಟ್ ಕಟ್ಟಡದ ಮೇಲಿನ ರಾಷ್ಟç ಲಾಂಛನವನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ರಾಜ್ಯಸಭಾ ಉಪ ಸಭಾಪತಿ ಹರಿವಂಶ್ ಅವರ ಸಮ್ಮುಖದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅನಾವರಣಗೊಳಿಸಿದ್ದರು. ಈ ಕಾರ್ಯಕ್ರಮಕ್ಕೆ ವಿಪಕ್ಷ ನಾಯಕರನ್ನು ಆಹ್ವಾನಿಸದೆ ಪ್ರಧಾನಿ ನರೇಂದ್ರ ಮೋದಿ ಸಾಂವಿಧಾನಿಕ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಪ್ರತಿಪಕ್ಷಗಳು ವಾಗ್ದಾಳಿ ನಡೆಸುತ್ತಿವೆ.
ಈದ್ಗಾ ಮೈದಾನ ವಿವಾದ: ಚಾಮರಾಜಪೇಟೆ ಬಂದ್ ಬಹುತೇಕ ಯಶಸ್ವಿ
ಬೆಂಗಳೂರು, ಜು. ೧೨: ಚಾಮರಾಜಪೇಟೆಯ ಈದ್ಗಾ ಮೈದಾನ ವಿವಾದದ ಒಡೆತನಕ್ಕೆ ಸಂಬAಧಿಸಿದAತೆ ಹಿಂದೂಪರ ಸಂಘಟನೆಗಳು ಮಂಗಳವಾರ ಕರೆ ನೀಡಿದ್ದ ಚಾಮರಾಜಪೇಟೆ ಬಂದ್ಗೆ ವ್ಯಾಪಕ ಬೆಂಬಲ ಸಿಕ್ಕಿದ್ದು ಬಹುತೇಕ ಯಶಸ್ವಿಯಾಗಿದೆ. ಬಹುತೇಕ ಮಂದಿ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಬಂದ್ಗೆ ಬೆಂಬಲ ಸೂಚಿಸಿದ್ದಾರೆ. ಜನಸಂಚಾರ, ವಾಹನ ಸಂಚಾರ ವಿರಳವಾಗಿತ್ತು. ಚಾಮರಾಜಪೇಟೆ ಸುತ್ತಮುತ್ತ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಆಜಾದ್ ನಗರ, ಗೋರಿಪಾಳ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡುಬAದಿದೆ. ಹಾಲು, ಮೆಡಿಕಲ್ ನಂತಹ ಅಗತ್ಯ ಸೇವೆಗಳು ಮಾತ್ರ ಬೆಳಿಗ್ಗೆ ತೆರೆದಿದ್ದವು. ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಸ್ಥಳದಲ್ಲಿ ೪೫೭ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಚಾಮರಾಜಪೇಟೆ ಮತ್ತು ಸುತ್ತಮುತ್ತಲಿನ ಖಾಸಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಹಿಂದೂಪರ ಸಂಘಟನೆಗಳ ಸದಸ್ಯರು ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್ ಖಾನ್ ಕಚೇರಿಗೆ ತೆರಳಿ ಬಂದ್ಗೆ ಬೆಂಬಲ ಕೋರಿದರು. ಜಮೀರ್ ಮನೆಯಲ್ಲಿ ಇಲ್ಲದ ಕಾರಣ ಆಪ್ತ ಸಹಾಯಕರಿಗೆ ಕರಪತ್ರ ನೀಡಲಾಗಿದೆ ಎಂದು ಸದಸ್ಯರು ತಿಳಿಸಿದರು.
ವಿಮಾನದಲ್ಲಿ ಪ್ರಯಾಣಿಸುವ "ಮಿಸ್ಟರ್ ಬ್ಯಾಲಟ್ ಬಾಕ್ಸ್"
ನವದೆಹಲಿ, ಜು. ೧೨: ಶೀರ್ಷಿಕೆ ನೋಡಿ ಇದ್ಯಾರಪ್ಪ ರಾಷ್ಟ್ರಪತಿಗಳ ಚುನಾವಣೆಯಲ್ಲಿ ಅಭ್ಯರ್ಥಿಗಳಂತೆಯೇ ಎಲ್ಲಾ ರಾಜ್ಯಗಳಿಗೂ ಭೇಟಿ ನೀಡುವ ವ್ಯಕ್ತಿ ಎಂದು ಗೊಂದಲಕ್ಕೀಡಾಗಬೇಡಿ. ಈ ಮಿಸ್ಟರ್ ಬ್ಯಾಲಟ್ ಬಾಕ್ಸ್ ಎಂಬುದು ೫೩ ವರ್ಷಗಳ ಸಂಪ್ರದಾಯವಾಗಿದ್ದು, ಈ ರೀತಿ ರಾಜ್ಯಗಳಿಗೆ ಪ್ರಯಾಣಿಕರೊಂದಿಗೆ ವಿಮಾನಗಳಲ್ಲಿ ಪ್ರಯಾಣಿಸುವದು ಒಂದು ವಸ್ತುವಾಗಿದೆ. ತಾ. ೧೮ ರಂದು ವಿವಿಧ ರಾಜ್ಯಗಳಿಗೆ ವೋಟ್ ಕಂಟೇನರ್ಗಳನ್ನು ಕಳಿಸುವುದಕ್ಕಾಗಿ, ಮಂಗಳವಾರ ಹಾಗೂ ಬುಧವಾರ ಚುನಾವಣಾ ಆಯೋಗ ಮಿಸ್ಟರ್ ಬ್ಯಾಲಟ್ ಬಾಕ್ಸ್ಗೆ ಟಿಕೆಟ್ ಬುಕ್ ಮಾಡಿದೆ. ಚುನಾವಣಾ ಆಯೋಗದ ಮಾಹಿತಿಯ ಪ್ರಕಾರ ಮಿಸ್ಟರ್ ಬ್ಯಾಲಟ್ ಬಾಕ್ಸ್ ಹೆಸರಿನಲ್ಲಿಯೇ ಪ್ರತ್ಯೇಕವಾದ ವಿಮಾನ ಟಿಕೆಟ್ನ್ನು ಕಾಯ್ದಿರಿಸಲಾಗುತ್ತದೆ. ಈ ರೀತಿ ಕಾಯ್ದಿರಿಸಲಾದ ಟಿಕೆಟ್ ಮೂಲಕ ಮಿ. ಬ್ಯಾಲಟ್ ಬಾಕ್ಸ್ನ್ನು ವಿಮಾನದ ಮೊದಲ ಸಾಲಿನಲ್ಲಿರಿಸಿ ಸಾಗಿಸಲಾಗುತ್ತದೆ. ಇದರ ಪಕ್ಕದಲ್ಲೇ ಅಸಿಸ್ಟೆಂಟ್ ರಿಟರ್ನಿಂಗ್ ಆಫೀಸರ್(ಎಆರ್ಒ)ಗಳು ಕುಳಿತು ಪ್ರಯಾಣಿಸಲಿದ್ದಾರೆ. ಈ ಬಾಕ್ಸ್ನ ಮೇಲ್ವಿಚಾರಣೆಯನ್ನು ಸ್ವತಃ ಅಧಿಕಾರಿ ವಹಿಸಿಕೊಳ್ಳಲಿದ್ದಾರೆ. ಚುನಾವಣೆಯ ನಂತರ ಈ ಬಾಕ್ಸ್ಗಳು ಮತ್ತೆ ವಿಮಾನಗಳ ಮೂಲಕವೇ ದೆಹಲಿ ತಲುಪಲಿವೆ ಎಂದು ಚುನಾವಣಾ ಆಯೋಗ ಹೇಳಿದೆ.
ಪ್ರವಾಹ ಪೀಡಿತ ಪ್ರದೇಶಕ್ಕೆ ಮಂತ್ರಿಗಳಿAದ ನೆಪ ಮಾತ್ರದ ಭೇಟಿ: ಡಿ.ಕೆ.ಶಿ.
ಬೆಂಗಳೂರು, ಜು. ೧೨: ಪ್ರವಾಹ ಪೀಡಿತ ಪ್ರದೇಶಗಳಿಗೆ ಮಂತ್ರಿಗಳು, ಶಾಸಕರು ಹಾಗೂ ನಾಯಕರು ನೆಪ ಮಾತ್ರಕ್ಕೆ ಭೇಟಿ ನೀಡುತ್ತಿದ್ದಾರೆಯೇ ಹೊರತು ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವ ಉದ್ದೇಶದಿಂದಲ್ಲ ಎಂದು ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪ ಮಾಡಿದ್ದಾರೆ. ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಪ್ರವಾಹ ಪೀಡಿತ ಪ್ರದೇಶಗಳಿಗೆ ಹೋಗುವಂತೆ ಮುಖ್ಯ ಮಂತ್ರಿಗಳ ಬಳಿ ಮನವಿ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಯಾವುದೇ ಮಂತ್ರಿಗಳು ತಮ್ಮ ಜವಾಬ್ದಾರಿಗೆ ಅನುಗುಣವಾಗಿ ಕೆಲಸ ಮಾಡುತ್ತಿಲ್ಲ ಎಂದರು. ಅಧಿಕಾರಿಗಳು ಕೂಡಾ ಕೆಲಸ ಮಾಡಿಲ್ಲ. ನೆಪ ಮಾತ್ರಕ್ಕೆ ಬೆರಳೆಣಿಕೆ ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ. ಜನರಿಗೆ ಸಹಾಯ ಮಾಡುವ ಯಾವುದೇ ಕೆಲಸವನ್ನು ಈ ಸರ್ಕಾರ ಮಾಡುತ್ತಿಲ್ಲ ಎಂದು ಅವರು ಹರಿಹಾಯ್ದರು. ಇನ್ನು ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಈ ಹಿಂದಿನಿAದ ಚಾಮರಾಜಪೇಟೆ ಮೈದಾನವನ್ನು ಯಾವ ರೀತಿ ಇತಿಹಾಸವಿದೆಯೋ ಅದೇ ರೀತಿ ಮುಂದುವರೆಸಬೇಕು. ಹೊಸದಾಗಿ ಬದಲಾವಣೆ ಮಾಡಿ ಜನರಲ್ಲಿ ಅನಗತ್ಯ ಗೊಂದಲಮೂಡಿಸುವ ಕೆಲಸ ಮಾಡಬಾರದು. ಈ ಮೈದಾನದ ದಾಖಲೆಗಳಲ್ಲಿ ಏನಿದೆ. ಸಾರ್ವಜನಿಕರ ಗಮನದಲ್ಲಿ ಏನಿದೆ ಎಂದು ಎಲ್ಲರಿಗೂ ತಿಳಿದಿದೆ. ಬಿಜೆಪಿ ಮತ್ತು ಇತರೆ ಸಂಘಟನೆಗಳು ಆಶಾಂತಿ ಮೂಡಿಸುವ ಕೆಲಸ ಮಾಡಬಾರದು ಎಂದು ಅವರು ಹೇಳಿದರು.