ಬೃಹತ್ ರಾಷ್ಟçಲಾಂಛನ ಅನಾವರಣ

ದೆಹಲಿ, ಜು. ೧೧: ನೂತನ ಸಂಸತ್ ಭವನದ ಮೇಲೆ ಬೃಹತ್ ರಾಷ್ಟç ಲಾಂಛನವನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಲಿದ್ದಾರೆ. ಈ ಬೃಹತ್ ರಾಷ್ಟಿçÃಯ ಲಾಂಛನವನ್ನು ಪರಿಶುದ್ಧ ಕಂಚಿನಿAದ ಮಾಡಲಾಗಿದ್ದು, ಒಟ್ಟು ೯,೫೦೦ ಕೆ.ಜಿ. ತೂಕ ಮತ್ತು ೬.೫ ಮೀ. ಎತ್ತರವಿದೆ. ದೇಶದ ವಿವಿಧ ಭಾಗಗಳಿಂದ ೧೦೦ಕ್ಕಿಂತಲೂ ಹೆಚ್ಚು ಕಲಾವಿದರು ಈ ವಿನ್ಯಾಸ, ಕರಕುಶಲತೆ ಮತ್ತು ಲಾಂಛನವನ್ನು ನಿರ್ಮಿಸುವುದಕ್ಕೆ ಕೈ ಜೋಡಿಸಿದ್ದು, ೬ ತಿಂಗಳುಗಳಿಗಿAತಲೂ ಹೆಚ್ಚು ಕಾಲ ಇದಕ್ಕಾಗಿ ಶ್ರಮವಹಿಸಿದ್ದಾರೆ. ಈ ಲಾಂಛನವನ್ನು ನೆಲಭಾಗದಿಂದ ೩೨ ಮೀಟರ್ ಎತ್ತರದಲ್ಲಿರಿಸಲಾಗಿದೆ.

ಶಿವಸೇನೆಯ ೧೩ ಸಂಸದರ ಸಭೆ: ಮುರ್ಮುಗೆ ಹೆಚ್ಚು ಸದಸ್ಯರ ಬೆಂಬಲ

ಮುಂಬೈ, ಜು. ೧೧: ರಾಷ್ಟçಪತಿ ಚುನಾವಣೆ ವಿಷಯವಾಗಿ ಶಿವಸೇನೆಯ ೧೮ ಸಂಸದರ ಪೈಕಿ ೧೩ ಮಂದಿ ಮಹಾರಾಷ್ಟ್ರದಲ್ಲಿ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಭಾಗವಹಿಸಿದ್ದವರ ಪೈಕಿ ಹೆಚ್ಚಿನ ಸದಸ್ಯರು ಎನ್ ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸಬೇಕೆAಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಪಕ್ಷದ ನಾಯಕ ಗಜಾನನ್ ಕಿರಿತ್ಕರ್ ಹೇಳಿದ್ದಾರೆ. ಆದರೆ ಪಕ್ಷದ ಸಂಸದರೂ ಆಗಿರುವ ಮುಖ್ಯ ವಕ್ತಾರ ಸಂಜಯ್ ರೌತ್, ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯದ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲಿಲ್ಲ. ಮಹಾರಾಷ್ಟ್ರವಲ್ಲದೇ ಶಿವಸೇನೆ ಸಂಸದರು ಕೇಂದ್ರಾಡಳಿತ ಪ್ರದೇಶಗಳಾದ ದಾದ್ರಾ ನಗರ್ ಹವೇಲಿ, ದಾಮನ್ ಹಾಗೂ ಡಿಯುಗಳಲ್ಲೂ ಇದ್ದಾರೆ. ೧೩ ಸಂಸದರಷ್ಟೇ ಭಾಗಿಯಾದರೂ ಸಭೆಗೆ ಹಾಜರಾಗದೇ ಇದ್ದ ಉಳಿದ ಸಂಸದರ ಪೈಕಿ ಸಂಜಯ್ ಜಾದವ್, ಸಂಜಯ್ ಮಂಡಲಿಕ್, ಹೇಮಂತ್ ಪಾಟೀಲ್ ಸಭೆಗೆ ಬರಲು ಸಾಧ್ಯವಾಗದೇ ಇದ್ದರೂ ಅವರ ಬೆಂಬಲವನ್ನು ನಾಯಕತ್ವಕ್ಕೆ ವ್ಯಕ್ತಪಡಿಸಿದ್ದಾರೆ ಎಂದು ಕಿರಿತ್ಕರ್ ಹೇಳಿದ್ದಾರೆ.

ವಿಚಾರಣೆಗೆ ಬರುವಂತೆ ಸೋನಿಯಾ ಗಾಂಧಿಗೆ ಇಡಿ ಹೊಸ ಸಮನ್ಸ್

ನವದೆಹಲಿ, ಜು. ೧೧: ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬAಧಿಸಿದ ಆಪಾದಿತ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜುಲೈ ೨೧ರಂದು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಸೋನಿಯಾ ಗಾಂಧಿ ಅವರಿಗೆ ಸಮನ್ಸ್ ಜಾರಿ ಮಾಡಿದೆ. ಈ ಮೂಲಕ ಹೆಚ್ಚಿನ ಕಾಲಾವಕಾಶ ಕೋರಿದ್ದ ಸೋನಿಯಾ ಗಾಂಧಿ ಅವರಿಗೆ ಹೊಸದಾಗಿ ಸಮನ್ಸ್ ಜಾರಿ ಮಾಡಿದೆ. ಕೋವಿಡ್ ದೃಢಪಟ್ಟ ನಂತರ ೭೫ ವರ್ಷದ ಸೋನಿಯಾ ಗಾಂಧಿ ಇಡಿ ವಿಚಾರಣೆಗೆ ಹಾಜರಾಗಿರಲಿಲ್ಲ. ಹಲವು ಬಾರಿ ಸಮನ್ಸ್ ನೀಡಿದರೂ ಕೋವಿಡ್ ಸೋಂಕು, ಕೋವಿಡ್ ನಂತರದ ಆರೋಗ್ಯ ಸಮಸ್ಯೆಗಳಿಂದ ಆಸ್ಪತ್ರೆ ಸೇರಿದ್ದರು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ಏಜೆನ್ಸಿಯ ಮುಂದೆ ಹಾಜರಾಗಲು ಹೆಚ್ಚಿನ ಸಮಯವನ್ನು ಕೇಳಿದ್ದರು. ಸೋನಿಯಾ ಗಾಂಧಿಯವರ ಪುತ್ರ ರಾಹುಲ್ ಗಾಂಧಿ ಅವರು ಇದೇ ಪ್ರಕರಣದಲ್ಲಿ ಕೇಂದ್ರ ತನಿಖಾ ಸಂಸ್ಥೆ ಎದುರು ಐದು ದಿನಗಳ ಕಾಲ ಸರಣಿ ವಿಚಾರಣೆ ಎದುರಿಸಿದ್ದಾರೆ. ಇದಕ್ಕೂ ಮುನ್ನ ಇಡಿ ತನಿಖೆಯ ಭಾಗವಾಗಿ ಹಿರಿಯ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಪವನ್ ಬನ್ಸಾಲ್ ಅವರನ್ನು ವಿಚಾರಣೆಗೆ ಒಳಪಡಿಸಿತ್ತು.

ಮೋದಿ ಪ್ರಧಾನಿ ಆದ ಮೇಲೆ ಯುವಕರಿಗೆ ಕೆಲಸ ಇಲ್ಲ: ಸಿದ್ದರಾಮಯ್ಯ

ಬೆಂಗಳೂರು, ಜು. ೧೧: ನರೇಂದ್ರ ಮೋದಿ ಅವರು ಪ್ರಧಾನಿ ಆದ್ಮೇಲೆ ಯುವಕರಿಗೆ ಕೆಲಸ ಇಲ್ಲ. ನಿರುದ್ಯೋಗ ತಾಂಡವಾಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸೋಮವಾರ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರಮನೆ ಮೈದಾನದಲ್ಲಿ ಯುವ ಜನೋತ್ಸವ ವಿಸ್ತೃತ ಕಾರ್ಯಕಾರಿ ಸಭೆಯಲ್ಲಿ ಭಾಷಣ ಮಾಡಿದ ಸಿದ್ದರಾಮಯ್ಯ, ರಾಜ್ಯ ಯುವ ಕಾಂಗ್ರೆಸ್ ವತಿಯಿಂದ ಯುವ ಗರ್ಜನೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ದೇಶದ ಯುವಕರ ಮೇಲೆ ದೊಡ್ಡ ಜವಾಬ್ದಾರಿ ಇದೆ. ಈ ದೇಶದ ಯುವಕರಿಗೆ ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಬದಲಾವಣೆ ತರುವ ಶಕ್ತಿ ಇದೆ ಎಂದರು. ದೇಶದ ಜನಸಂಖ್ಯೆಯಲ್ಲಿ ೩೦ ವರ್ಷದ ಒಳಗಿನ ಯುವಕ ಯುವತಿಯರು ಶೇ. ೬೦ ರಷ್ಟು ಇದ್ದಾರೆ. ಭಾರತದಲ್ಲಿ ೧೦೭ ಕೋಟಿ ಜನರಿಗೆ ಕೆಲಸ ಮಾಡುವ ಶಕ್ತಿ ಇದೆ. ಆದರೆ ೧೦೭ ಕೋಟಿಯಲ್ಲಿ ಶೇ. ೪೦ಕ್ಕಿಂತ ಕಡಿಮೆ ಜನರಿಗೆ ಮಾತ್ರ ಕೆಲಸ ಇದೆ. ಜಗತ್ತಿನಲ್ಲಿ ಯಾವುದೇ ದೇಶದಲ್ಲಿ ಇಷ್ಟೊಂದು ಯುವ ಶಕ್ತಿ ಇಲ್ಲ. ನಮ್ಮ ದೇಶದಲ್ಲಿ ಮಾತ್ರ ಇಷ್ಟೊಂದು ಯುವ ಶಕ್ತಿ ಇದೆ. ಆದರೆ, ಮೋದಿ ಅವರು ಪ್ರಧಾನಿ ಆದ್ಮೇಲೆ ಯುವಕರಿಗೆ ಕೆಲಸ ಇಲ್ಲ. ಯುವ ಶಕ್ತಿ ಇರುವ ನಮ್ಮ ದೇಶದಲ್ಲಿ ನಿರುದ್ಯೋಗ ತಾಂಡವಾಡುತ್ತಿದೆ. ನಗರ ಪ್ರದೇಶದಲ್ಲಿ ಶೇ. ೯ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಶೇ. ೬ ರಷ್ಟು ನಿರುದ್ಯೋಗ ಸಮಸ್ಯೆ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸುಬ್ರಹ್ಮಣ್ಯ ಸ್ವಾಮಿ ಯಾರು? ಅವ್ರು ಬಿಜೆಪಿ ನಾಯಕ. ಖುದ್ದಾಗಿ ಅವ್ರೇ ಟ್ವೀಟ್ ಮಾಡಿದ್ದಾರೆ. ೨೦೧೧ ರಲ್ಲಿ ವಿಶ್ವದ ಆರ್ಥಿಕತೆಯಲ್ಲಿ ಭಾರತ ೩ನೇ ಸ್ಥಾನದಲ್ಲಿತ್ತು. ಇವಾಗ ಮೋದಿ ಪ್ರಧಾನಿ ಆದ್ಮೆಲೆ ವಿಶ್ವದ ಆರ್ಥಿಕತೆಯಲ್ಲಿ ಭಾರತ ೧೬೪ ಸ್ಥಾನ ಪಡೆದಿದೆ. ಯುವಕರಿಗೆ ದೊಡ್ಡ ಅವಮಾನ ಯಾರಾದ್ರು ಮಾಡಿದ್ರೆ ಅದು ಪ್ರಧಾನಿ ಮೋದಿ ಎಂದು ಹೇಳಿದ್ದಾರೆ ಎಂದರು. ಕೇಂದ್ರ ಸರ್ಕಾರ ಅಗ್ನಿ ಪಥ್ ಎಂಬ ಯೋಜನೆ ತಂದಿದೆ. ಡಿಫೆನ್ಸ್ ನಲ್ಲಿ ಯುವಕರಿಗೆ ನಾಲ್ಕು ವರ್ಷ ಕೆಲಸ ಕೊಡ್ತಾರಂತ್ತೆ. ನಾಲ್ಕು ವರ್ಷ ಮುಗಿದ ಮೇಲೆ ಯುವಕರು ಏನ ಮಾಡಬೇಕು..? ೧೭ನೇ ವಯಸ್ಸಿಗೇ ಡಿಫೆನ್ಸ್ ಗೆ ಸೇರಿ ಯುವಕರು ನಾಲ್ಕು ವರ್ಷ ಆದ್ಮೇಲೆ ಅಲ್ಲಿಂದ ಹೊರಗಡೆ ಬಂದ ಮೇಲೆ ಆ ಯುವಕರು ಏನು ಮಾಡಬೇಕು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಮೊನ್ನೆ ಪ್ರಧಾನಿ ಮೋದಿ ಬೆಂಗಳೂರು ಮತ್ತು ಮೈಸೂರಿಗೆ ಬಂದಿದ್ರು. ಎಲ್ಲೂ ಕೂಡ ಮೋದಿ ಉದ್ಯೋಗ, ರೈತರ ಬಗ್ಗೆ ಮಾತಾಡಿಲ್ಲ. ಯುವಕರು ಉದ್ಯೋಗ ಬೇಡಿದ್ರೆ ಪಕೋಡಾ ಮಾರಿ ಎಂದು ಪ್ರಧಾನಿ ಹೇಳುತ್ತಾರೆ ಎಂದು ಕಿಡಿಕಾರಿದರು.

ಶಿರಾಡಿ ಘಾಟ್ ರಸ್ತೆ ಬಂದ್ ಮಾಡುವುದಿಲ್ಲ ಸಚಿವ ಸಿ. ಸಿ. ಪಾಟೀಲರ ಸ್ಪಷ್ಟನೆ

ಬೆಂಗಳೂರು, ಜು. ೧೧: ಬೆಂಗಳೂರು ಮತ್ತು ಮಂಗಳೂರು ನಡುವಿನ ಪ್ರಮುಖ ಸಂಪರ್ಕ ಮಾರ್ಗವಾಗಿರುವ ಶಿರಾಡಿಘಾಟ್ ದುರಸ್ತಿಯ ನಿಮಿತ್ತವಾಗಿ ಈ ಮಳೆಗಾಲದಲ್ಲಿ ವಾಹನ ಸಂಚಾರ ನಿಷೇಧ ಮಾಡುವುದಿಲ್ಲ. ಬೆಂಗಳೂರು ಮತ್ತು ಶಿರಾಡಿಘಾಟ್ ನಡುವಿನ ಹೆದ್ದಾರಿ ಇತರ ಸೇತುವೆಗಳ ಕಾಮಗಾರಿ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಸಕಲೇಶಪುರ ಹಾಗೂ ಶಿರಾಡಿ ಘಾಟ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿರಾಡಿಘಾಟ್ ಮೂಲಕ ಪ್ರತಿನಿತ್ಯ ಸರಾಸರಿ ೩೦ ಸಾವಿರ ವಾಹನಗಳು ಸಂಚರಿಸುತ್ತವೆ. ಒಂದು ವೇಳೆ ರಸ್ತೆ ಬಂದ್ ಮಾಡಿದರೆ ಸಾರ್ವಜನಿಕರಿಗೆ ತೀವ್ರ ಸಮಸ್ಯೆಯಾಗುತ್ತದೆ. ಆದ್ದರಿಂದ ಒಂದು ಭಾಗದಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟು, ಮತ್ತೊಂದು ಭಾಗದಲ್ಲಿ ದುರಸ್ತಿ ಕಾಮಗಾರಿಗಳಿಗೆ ಅವಕಾಶ ಮಾಡಿಕೊಡಲಾಗುವುದು, ತೀರಾ ಅನಿವಾರ್ಯವಾದರೆ ಮಾತ್ರ ಏಕಮುಖ ಸಂಚಾರಕ್ಕೆ ಅವಕಾಶ ನೀಡುವ ಬಗ್ಗೆ ಪರಿಶೀಲಿಸಲಾಗುವುದು. ಸದ್ಯಕ್ಕಂತೂ ಶಿರಾಡಿಘಾಟ್‌ನಲ್ಲಿ ವಾಹನ ಸಂಚಾರಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ ಎಂದು ಹೇಳಿದರು. ಮಳೆ ಮತ್ತಿತರ ನೈಸರ್ಗಿಕ ಪ್ರಕೋಪಗಳಿಂದ ರಸ್ತೆಗಳು ಅಥವಾ ಸೇತುವೆಗಳು ಹಾನಿಗೊಳಗಾದರೆ ದುರಸ್ತಿ ಕಾಮಗಾರಿ ನಡೆಸುವುದಕ್ಕೆ ಯಾವುದೇ ಹಣಕಾಸು ತೊಂದರೆ ಇಲ್ಲ. ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಕೈಗೊಳ್ಳಲಾಗುವುದು ಎಂದು ವಿವರಿಸಿದರು.