ಮಡಿಕೇರಿ, ಜು. ೧೦: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಂಗ ಸಂಸ್ಥೆಯಾದ ಜನರಲ್ ತಿಮ್ಮಯ್ಯ ರಾಷ್ಟಿçÃಯ ಸಾಹಸ ಅಕಾಡೆಮಿ ವತಿಯಿಂದ ಈ ಬಾರಿ ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ೧೬ ರಿಂದ ೨೯ ವರ್ಷದ ದೈಹಿಕವಾಗಿ ಸದೃಢವಾಗಿರುವ ಯುವಕ-ಯುವತಿಯರಿಗೆ ಬೇಸಿಕ್ ಮತ್ತು ಅಡ್ವಾನ್ಸ್ ಜಲಸಾಹಸ ಮತ್ತು ಭೂಸಾಹಸ ತರಬೇತಿ ಶಿಬಿರಗಳನ್ನು ಆಯೋಜಿಸಲಾಗಿದೆ. ತರಬೇತಿಗೆ ನೋಂದಾಯಿಸುವ ಯುವಕ, ಯುವತಿಯರು ಬೇಸಿಕ್ ತರಬೇತಿಯಲ್ಲಿ ‘ಎ’ ಗ್ರೇಡ್ ಪಡೆದಿರಬೇಕು. ಶಿಬಿರಕ್ಕೆ ಅರ್ಹವಾಗಿರುವ ಶಿಬಿರಾರ್ಥಿಗಳು ದೈಹಿಕ/ ವೈದ್ಯಕೀಯ ಪರೀಕ್ಷೆಗೆ ನೀಡಿದ ನಿಗದಿತ ದಿನಾಂಕದAದು ಬೆಂಗಳೂರು ನಗರಕ್ಕೆ ಹಾಜರಾಗಬೇಕು.
ಆಸಕ್ತಿಯುಳ್ಳ ಅಭ್ಯರ್ಥಿಗಳು ತಾ. ೧೨ ರೊಳಗೆ ಅರ್ಜಿಯನ್ನು ಸಲ್ಲಿಸತಕ್ಕದ್ದು, ಅರ್ಜಿಯನ್ನು ಆನ್ಲೈನ್ ಮೂಲಕ ಅಕಾಡೆಮಿಯ ವೆಬ್ಸೈಟ್ ತಿತಿತಿ.ಜಥಿes.ಞಚಿಡಿಟಿಚಿಣಚಿಞಚಿ.gov.iಟಿ ಇಲ್ಲಿ ಸಲ್ಲಿಸತಕ್ಕದ್ದು ಅಥವಾ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ತುಂಬಿದ ಅರ್ಜಿ ನಮೂನೆಯ ಜೊತೆಗೆ ಜಾತಿ ಪ್ರಮಾಣ ಪತ್ರ ಹಾಗೂ ಆಧಾರ ಪ್ರತಿಯನ್ನು ಕೇಂದ್ರ ಕಚೇರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಚೇತನಾ, ರಾಜ್ಯ ಯುವ ಕೇಂದ್ರ ೩ನೇ ಮಹಡಿ, ನೃಪತುಂಗ ರಸ್ತೆ, ಬೆಂಗಳೂರು ೦೮೦-೨೨೨೧೦೪೫೪, ಸಹಾಯಕ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಡಿಕೇರಿ ಇವರನ್ನು ಸಂಪರ್ಕಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶೇಖರ್ ತಿಳಿಸಿದ್ದಾರೆ.