ಜನಸಂಖ್ಯೆ ಹೆಚ್ಚಳದಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ. ಆರೋಗ್ಯಕರ ಜೀವನ ಮತ್ತು ಸಣ್ಣ ಕುಟುಂಬಗಳ ಪ್ರಾಮುಖ್ಯತೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು, ಜನಸಂಖ್ಯಾ ಸ್ಫೋಟದಿಂದಾಗುವ ಅಪಾಯಗಳು, ಕುಟುಂಬ ಯೋಜನೆಗೆ ಆದ್ಯತೆ, ಲಿಂಗ ಅಸಮಾನತೆ, ಬಡತನ, ಶಿಶು ಮರಣ, ಮಾನವ ಹಕ್ಕುಗಳು ಮತ್ತಿತರ ಸಂಗತಿಗಳಲ್ಲಿ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ.

ಹೆಚ್ಚುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸುವುದು ಪ್ರಸ್ತುತ ದಿನಗಳಲ್ಲಿ ಅತಿ ದೊಡ್ಡ ಸವಾಲಾಗಿದೆ. ಜನಸಂಖ್ಯೆ ಹೆಚ್ಚಳ ದಿಂದ ಉಂಟಾ ಗುವ ಬಡತನ, ನಿರುದ್ಯೋಗ, ಹಸಿವು ಮುಂತಾದ ಸಮಸ್ಯೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಈ ವಿಶ್ವ ಜನಸಂಖ್ಯಾ ದಿನದ ಉದ್ದೇಶವಾಗಿದೆ.

ವಿಶ್ವ ಜನಸಂಖ್ಯಾ ದಿನದಂದು ಅಧಿಕ ಜನಸಂಖ್ಯೆಯಿAದ ಉಂಟಾಗುವ ತೊಂದರೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಮತ್ತು ಅಧಿಕ ಜನಸಂಖ್ಯೆಯು ಪರಿಸರ ವ್ಯವಸ್ಥೆಗೆ ಹೇಗೆ ಹಾನಿಯಾಗಬಹುದು ಎಂಬ ಬಗ್ಗೆ ಜಾಗೃತಿ ಮೂಡಿಸುವ ಗುರಿಯೊಂದಿಗೆ ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಗುತ್ತದೆ.

ಜನಸಂಖ್ಯೆ ಏರಿಕೆಗೆ ಕಾರಣ ಕುಟುಂಬ ಯೋಜನೆ ಇಲ್ಲದೆ ಇರುವುದು. ಲಿಂಗ ಅಸಮಾನತೆ, ಬಾಲ್ಯವಿವಾಹ, ಮಾನವ ಹಕ್ಕುಗಳು, ಆರೋಗ್ಯದ ಹಕ್ಕು, ಮಗುವಿನ ಆರೋಗ್ಯ ಇತ್ಯಾದಿ. ಜನರಲ್ಲಿ ಲೈಂಗಿಕತೆ, ಸಂತಾನೋತ್ಪತ್ತಿ ಹಾಗೂ ಆರೋಗ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಾದುದು ಅನಿವಾರ್ಯವಾಗಿದೆ. ಜನಸಂಖ್ಯಾ ಹೆಚ್ಚಳದಿಂದಾಗಿ ಉಂಟಾಗುತ್ತಿರುವ ಜಾಗತಿಕ ಹಾಗೂ ಆರ್ಥಿಕ ಸಮಸ್ಯೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ.

ಲಿಂಗ ಅಸಮಾನತೆ, ಲೈಂಗಿಕ ಶಿಕ್ಷಣದ ಕೊರತೆ, ಆರೋಗ್ಯಕ್ಕಾಗಿ ಹಕ್ಕು, ಹುಟ್ಟಲಿರುವ ಮಗುವಿನ ಲಿಂಗಪತ್ತೆ, ಗರ್ಭನಿರೋಧಕ ವಸ್ತುಗಳ ಬಳಕೆ ಇವುಗಳ ಕುರಿತು ಈ ದಿನ ಬೆಳಕು ಚೆಲ್ಲಲಾಗುವುದು. ಹೆಚ್ಚುತ್ತಿರುವ ಜನಸಂಖ್ಯೆ ಇದರಿಂದ ಭವಿಷ್ಯದಲ್ಲಿ ಉಂಟಾಗಬಹುದಾದ ತೊಂದರೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವಸಂಸ್ಥೆ ಈ ದಿನವನ್ನು ಆಚರಿಸತೊಡಗಿದೆ. ಈ ರೀತಿ ಜನಸಂಖ್ಯೆ ಹೆಚ್ಚುತ್ತಾ ಹೋದರೆ ಇದರಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯು ತನ್ನ ಅಂಗ ಸಂಸ್ಥೆಯಾದ ‘ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮ (ಯು.ಎನ್.ಡಿ.ಪಿ.)’ ಮಂಡಳಿಯ ಮೂಲಕ ೧೯೮೯ ಜುಲೈ ೧೧ ರಂದು ಮೊದಲ ಬಾರಿ ಜನಸಂಖ್ಯಾ ದಿನವನ್ನು ಆಚರಿಸಿತು.

ಆಚರಣೆಯ ಪ್ರಯೋಜನಗಳು

ಹೆಣ್ಣು ಮತ್ತು ಗಂಡು ಇಬ್ಬರಲ್ಲೂ ಜನಸಂಖ್ಯಾ ಸ್ಫೋಟ ಹಾಗೂ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು. ಲಿಂಗ ಅಸಮಾನತೆ ಹೋಗಲಾಡಿಸುವುದು. ಜನರಿಗೆ ಆರೋಗ್ಯ ಸೌಲಭ್ಯ ದೊರೆಯಲು ಅನೇಕ ಯೋಜನೆಗಳನ್ನು ರೂಪಿಸುವುದು. ಲೈಂಗಿಕ ಶಿಕ್ಷಣ ನೀಡುವುದು ಹಾಗೂ ಲೈಂಗಿಕ ಕಾಯಿಲೆ ಕುರಿತು ಅರಿವು ಮೂಡಿಸುವುದು. ಹೆಣ್ಣು ಮಗುವಿನ ಆರೋಗ್ಯ ಹಾಗೂ ಆಕೆಯ ಹಕ್ಕುಗಳನ್ನು ರಕ್ಷಿಸುವುದು ಇತ್ಯಾದಿ. - ಮುಕ್ಕಾಟಿ ಹರಿಣಿ ಗಿರೀಶ್, ಮರಗೋಡು.