ಮಡಿಕೇರಿ, ಜು. ೧೦: ಕೊಡಗು ಜಿಲ್ಲೆಯ ೫೪೪ ಮತಗಟ್ಟೆ ಸಮಿತಿ ಅಧ್ಯಕ್ಷರನ್ನು ಹಾಗೂ ಪ್ರತಿ ಮತಗಟ್ಟೆಗೆ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಎಐಸಿಸಿ ನಿರ್ದೇಶನದ ಮೇರೆಗೆ ಅಂತ್ಯಗೊಳಿಸುವAತೆ ಪಕ್ಷದ ಸಾಂಸ್ಥಿಕ ಚುನಾವಣೆಯ ಸಹಾಯಕ ಚುನಾವಣಾಧಿಕಾರಿ ಜಾನ್ಸನ್ ಅಬ್ರಹಂ ಸೂಚಿಸಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪಕ್ಷದ ಪ್ರಮುಖರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಮತ್ತು ಮುಂಚೂಣಿ ಘಟಕ ಅಧ್ಯಕ್ಷರುಗಳ ಸಭೆಯಲ್ಲಿ ಅವರು ಮಾತನಾಡಿದರು. ರಾಷ್ಟçಮಟ್ಟದಿಂದ ಜಿಲ್ಲಾಮಟ್ಟದವರೆಗೆ ಕಾಂಗ್ರೆಸ್ ಕಾರ್ಯಕರ್ತರನ್ನು ಯಾವ ರೀತಿಯಲ್ಲಿ ಸಂಘಟಿಸಬೇಕೆAದು ಸಲಹೆ ನೀಡಿದ ಅವರು, ಬೂತ್ ಸಮತಿ ಅಧ್ಯಕ್ಷರು ಮತ್ತು ಪ್ರತಿನಿಧಿಗಳ ಆಯ್ಕೆ ನಂತರ ಕೆಪಿಸಿಸಿಗೆ ಪ್ರತಿ ಬ್ಲಾಕ್ನಿಂದ ಓರ್ವ ಕೆಪಿಸಿಸಿ ಸದಸ್ಯರನ್ನು ಹಾಗೂ ಆರು ಜನ ಡಿಸಿಸಿ ಸದಸ್ಯರನ್ನು ಆರಿಸಲಾಗುವುದೆಂದು ಜಾನ್ಸನ್ ಅಬ್ರಹಂ ಹೇಳಿದರು.
ಬೂತ್ ಅಧ್ಯಕ್ಷರನ್ನು ಹಾಗೂ ಪದಾಧಿಕಾರಿಗಳನ್ನು ಆರಿಸುವಾಗ ಎಲ್ಲಾ ವರ್ಗಕ್ಕೆ ಪ್ರಾಮುಖ್ಯತೆ ನೀಡುವಂತೆ ತಿಳಿಸಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ತಿತೀರ ಧರ್ಮಜ ಉತ್ತಪ್ಪ ಮಾತನಾಡಿ, ಜಿಲ್ಲೆಗೆ ಆಗಮಿಸಿದ್ದ ಜಿಲ್ಲಾ ಚುನಾವಣಾಧಿಕಾರಿ ಬಾಬು ರಾಜು ಅವರ ಸೂಚನೆಯಂತೆ ಜಿಲ್ಲೆಯ ೬ ಬ್ಲಾಕ್ ಕಾಂಗ್ರೆಸ್ ಮಟ್ಟದಲ್ಲಿ ಶೇ. ೮೦ ಬೂತ್ ಅಧ್ಯಕ್ಷರನ್ನು ಹಾಗೂ ಪ್ರತಿನಿಧಿಗಳನ್ನು ಆಯ್ಕೆ ಮಾಡಿರುವುದಾಗಿ ಮಾಹಿತಿ ನೀಡಿದರು. ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಕೆಪಿಸಿಸಿ ಸಂವಹನಾ ಸದಸ್ಯ ಟಿ.ಪಿ. ರಮೇಶ್ ಮಾತನಾಡಿದರು.
ಸಭೆಯಲ್ಲಿ ಬ್ಲಾಕ್ ಅಧ್ಯಕ್ಷರುಗಳಾದ ಬಿ.ಬಿ. ಸತೀಶ್, ಮಿದೇರಿರ ನವೀನ್, ನಗರ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಜಿಲ್ಲಾ ಕಾಂಗ್ರೆಸ್ ಗೌರವ ಕಾರ್ಯದರ್ಶಿ ವಿ.ಪಿ. ಸುರೇಶ್, ಸುರಾಜ್ ಹೊಸೂರು, ಕಾನೆಹಿತ್ಲು ಮೊಣ್ಣಪ್ಪ, ತೆನ್ನಿರಾ ಮೈನಾ, ಕೆ.ಎ. ಯಾಕುಬ್, ಬಾಬು, ಯಶೋಧರ, ಪ್ರಭು ರೈ, ಎಂ.ಎ. ಉಸ್ಮಾನ್, ಸುರಯ್ಯ ಅಬ್ರಾರ್, ಫ್ಯಾನ್ಸಿ ಪಾರ್ವತಿ, ಆರ್.ಪಿ. ಚಂದ್ರಶೇಖರ್, ಎಂ.ಎA.ಯಾಕುಬ್, ರವೂಫ್, ಪ್ರಕಾಶ್ ಆಚಾರ್ಯ, ಹೆಚ್.ಎಂ. ಮಹಾದೇವ, ಜಿ.ಸಿ. ಜಗದೀಶ್, ಮುದ್ದುರಾಜ್, ಶೌಕತ್ ಆಲಿ, ಜಫ್ರುಲ್ಲಾ, ಪೆರುಮಾಳು, ರೋಶನ್ ಗಣಪತಿ, ಲಿಯಾಕತ್ ಆಲಿ, ಮಿನಾಜ್ ಮತ್ತಿತರರು ಹಾಜರಿದ್ದರು. ಡಿಸಿಸಿ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮ್ಮದ್ ಸ್ವಾಗತಿಸಿ, ಉಪಾಧ್ಯಕ್ಷ ಸುಜು ತಿಮ್ಮಯ್ಯ ವಂದಿಸಿದರು.