ವೀರಾಜಪೇಟೆ, ಜು. ೯: ಕೊಡವ ಜನಾಂಗದ ಆಚಾರ, ವಿಚಾರ, ಪದ್ಧತಿ, ಪರಂಪರೆಗಳನ್ನು ಉಳಿಸಿ ಬೆಳೆಸಲು ಕೊಡವ ಸಮಾಜ, ಸಂಘ-ಸAಸ್ಥೆಗಳು, ಒಕ್ಕೂಟಗಳು ಸಹಕಾರಿಯಾಗಲಿದೆ ಎಂದು ಬೆಂಗಳೂರು ಕೊಡವ ಸಮಾಜದ ನೂತನ ಅಧ್ಯಕ್ಷ ವಕೀಲ ಕರವಟ್ಟಿರ ರಮೇಶ್ ಪೆಮ್ಮಯ್ಯ ಹಾಗೂ ಇಂದಿರಾ ಪೆಮ್ಮಯ್ಯ ಅವರುಗಳು ಹೇಳಿದರು.
ಕಡಂಗಮುರೂರು ಗ್ರಾಮದ ಆನೆ ಬೆಪ್ಪುನಾಡು ಭಗವತಿ, ಈಶ್ವರ, ಅಯ್ಯಪ್ಪ, ಪರಿವಾರ ದೇವಾಲಯದ ಆವರಣದಲ್ಲಿ ಅಳ್ಳಂಡ, ಕೋದಂಡ, ಕರವಟ್ಟಿರ ಕುಟುಂಬದವರು ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಸುಮಾರು ೧೫ ಸಾವಿರಕ್ಕೂ ಅಧಿಕ ಸದಸ್ಯರನ್ನು ಹೊಂದಿರುವ ಬೆಂಗಳೂರು ಕೊಡವ ಸಮಾಜಕ್ಕೆ ಸುದೀರ್ಘ ಇತಿಹಾಸ ಇದೆ. ಚುನಾವಣೆಯಲ್ಲಿ ಸೋತಿರುವ ಹಾಗೂ ಗೆಲುವು ಸಾಧಿಸಿರುವ ಎಲ್ಲಾ ಸದಸ್ಯರುಗಳನ್ನು ಒಗ್ಗೂಡಿಸಿಕೊಂಡು ಅಧ್ಯಕ್ಷ ಸ್ಥಾನಕ್ಕೆ ಯಾವುದೇ ಚ್ಯುತಿ ಬಾರದ ರೀತಿಯಲ್ಲಿ ಕಾರ್ಯ ನಿರ್ವಹಿಸಲಾಗುವುದು ಎಂದು ಹೇಳಿದರು.
ದೇವಾಲಯ ಸಮಿತಿ ಅಧ್ಯಕ್ಷ ವಕೀಲ ಕರವಟ್ಟಿರ ಜಯ ಪೊನ್ನಪ್ಪ ಮಾತನಾಡಿ, ಮನುಷ್ಯನ ಜೀವನದಲ್ಲಿ ಸಂಘ-ಸAಸ್ಥೆಗಳ ಪಾತ್ರ ಬಹುಮುಖ್ಯ. ವೃತ್ತಿಯಲ್ಲಿ ವಕೀಲರಾದರು ಜನರ ಕಷ್ಟ ಕಾರ್ಪಣ್ಯಗಳೊಂದಿಗೆ ಸಂಘ-ಸAಸ್ಥೆಗಳಲ್ಲಿ ಚುನಾವಣೆ ಎದುರಿಸಿ ಅತ್ಯುನ್ನತ ಸ್ಥಾನ ಪಡೆದುಕೊಳ್ಳುವುದು ಸುಲಭದ ಮಾತಲ್ಲ ಎಂದು ಹೇಳಿದರು.
ಊರಿನ ಪ್ರಮುಖ ಕೋದಂಡ ಸುರ ಅಯ್ಯಪ್ಪ ಮಾತನಾಡಿ, ಬೆಂಗಳೂರು ಕೊಡವ ಸಮಾಜ ಇಡೀ ವಿಶ್ವದಲ್ಲಿಯೇ ಹೆಸರುವಾಸಿಯಾಗಿದೆ. ಕಡಂಗಮುರೂರು ಬೆಪ್ಪುನಾಡುವಿನ ಸಾಮಾನ್ಯ ಕುಟುಂಬದ ಕರವಟ್ಟಿರ ಓರ್ವ ಸದಸ್ಯ ಬೃಹತ್ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷರಾಗಿದ್ದಾರೆ ಎಂದರೆ ಅದು ಗ್ರಾಮಕ್ಕೆ ಸಂದ ಗೌರವ. ಪ್ರಾಥಮಿಕ ಹಂತದಿAದಲೇ ಸಮಾಜ ಸೇವೆಯನ್ನು ಮೈಗೂಡಿಸಿ ಕೊಂಡಿರುವುದಕ್ಕೆ ಅಧ್ಯಕ್ಷ ಸ್ಥಾನದಂತಹ ಗೌರವ ಲಭಿಸಿರುವುದು ಶ್ಲಾಘನೀಯ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ದೇವಾಲಯ ಸಮಿತಿ ಉಪಾಧ್ಯಕ್ಷ ಕೋದಂಡ ಬೋಪಣ್ಣ, ಕಾರ್ಯದರ್ಶಿ ಅಳ್ಳಂಡ ಕೆ. ಚಿಣ್ಣಪ್ಪ, ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಕೋದಂಡ ಮಂಜುಳಾ ಅಯ್ಯಪ್ಪ ಮತ್ತಿತರರು ಉಪಸ್ಥಿತರಿದ್ದರು.