ಮಡಿಕೇರಿ, ಜು. ೮: ರಾಜ್ಯಾದ್ಯಂತ ಹಾಗೂ ಹೊರರಾಜ್ಯಗಳಲ್ಲಿ ಕ್ರಿಯಾತ್ಮಕ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ನಾಡಿನ ಭಾಷಾ ಸಂವರ್ಧನೆ, ಕಲೆ, ಸಾಹಿತ್ಯ, ಸಂಗೀತ, ಜಾನಪದ, ನೃತ್ಯ ಕಲಾಪ್ರಕಾರಗಳನ್ನು ಉಳಿಸಿ ಬೆಳೆಸುವ ಸಲುವಾಗಿ ಕಾರ್ಯನಿರ್ವಹಿಸುತ್ತಿರುವ ನೋಂದಾಯಿತ ಸಂಘ-ಸAಸ್ಥೆಗಳಿಗೆ ಪ್ರೋತ್ಸಾಹ ರೂಪದಲ್ಲಿ ಸಹಾಯಧನ ನೀಡಿ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಸಾಂಸ್ಕೃತಿಕ ವಾತಾವರಣ ಉಂಟುಮಾಡುವಲ್ಲಿ ಶ್ರಮಿಸುತ್ತಿರುವ ಸಂಘ ಸಂಸ್ಥೆಗಳನ್ನು ಪ್ರೋತ್ಸಾಹಿಸಲು ೨೦೨೨-೨೩ನೇ ಸಾಲಿನ ಸಾಮಾನ್ಯ ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆಯಡಿ ಸಂಘ-ಸAಸ್ಥೆಗಳಿಗೆ ಧನಸಹಾಯ ನೀಡಲು ಸೇವಾಸಿಂಧು Sevಚಿsiಟಿಜhu.ಞಚಿಡಿಟಿಚಿಣಚಿಞಚಿ.gov.iಟಿ ಮುಖಾಂತರ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ತಾ. ೨೦ ಕೊನೆಯ ದಿನವಾಗಿದೆ. ಸರ್ಕಾರದ ಆದೇಶದಂತೆ ಮಾರ್ಗಸೂಚಿಯನ್ನು ಸೇವಾಸಿಂಧು ಪೋರ್ಟಲ್ ಹಾಗೂ ಇಲಾಖೆಯ ವೆಬ್ಸೈಟ್ ತಿತಿತಿ.ಞಚಿಟಿಟಿಚಿಜಚಿsiಡಿi.ಞಚಿಡಿಟಿಚಿಣಚಿಞಚಿ.gov.iಟಿ ನಲ್ಲಿ ಅಳವಡಿಸಲಾಗಿದೆ. ಹೆಚ್ಚಿನ ಮಾಹಿತಿಗೆ ೯೩೮೦೨೦೬೭೦೪, ೮೦೮೮೩೦೪೮೫೫, ೯೯೮೬೮೩೭೦೩೭, ೭೮೯೯೬೬೪೧೦೧, ೯೪೪೮೮೩೦೧೨೭ನ್ನು ಹಾಗೂ ಆಯಾಯ ಜಿಲ್ಲಾ ಯೋಜನಾ ವ್ಯವಸ್ಥಾಪಕರು, ಸೇವಾ ಸಿಂಧು ಇವರನ್ನು ಸಂಪರ್ಕಿಸಬಹುದು. ನಂತರ ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಹಾಗೂ ಅರ್ಜಿಯನ್ನು ನೇರವಾಗಿ ಇಲಾಖೆಯಲ್ಲಿ ಸ್ವೀಕರಿಸುವುದಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ತಿಳಿಸಿದ್ದಾರೆ.
ಅಗ್ನಿವೀರ್ ವಾಯು ಪ್ರವೇಶಕ್ಕೆ
ಭಾರತೀಯ ವಾಯುಪಡೆಯಿಂದ ಅಗ್ನಿಪತ್ ಯೋಜನೆಯಡಿಯಲ್ಲಿ ಅಗ್ನಿವೀರ್ ವಾಯು (೦೧/೨೦೨೨) ಪ್ರವೇಶಕ್ಕೆ ಆಯ್ಕೆ ಪರೀಕ್ಷೆಗಾಗಿ ಅವಿವಾಹಿತ ಪುರುಷ ಅರ್ಹ ಅಭ್ಯರ್ಥಿಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ವಿದ್ಯಾರ್ಹತೆ, ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ. ೫೦ ಅಂಕಗಳೊAದಿಗೆ ತೇರ್ಗಡೆಯಾಗಿರಬೇಕು/ ಡಿಪ್ಲೋಮ ವಿಭಾಗದ ಮೆಕ್ಯಾನಿಕಲ್, ಎಲೆಕ್ಟಿçಕಲ್, ಎಲೆಕ್ಟಾçನಿಕ್ಸ್, ಆಟೋಮೊಬೈಲ್, ಕಂಪ್ಯೂಟರ್ ಸೈನ್ಸ್,ಇನ್ಟು÷್ಸçಮೆಂಟ್ ಟೆಕ್ನಾಲಜಿ, ಇನ್ಫರ್ಮೇಷನ್ ಟೆಕ್ನಾಲಜಿಯಲ್ಲಿ ಶೇ. ೫೦ ಅಂಕಗಳೊAದಿಗೆ ತೇರ್ಗಡೆಯಾಗಿರಬೇಕು. ಅಥವಾ ೨ ವರ್ಷದ ವೃತ್ತಿಪರ ಕೋರ್ಸ್ಗಳಲ್ಲಿ ಭೌತಶಾಸ್ತ್ರ ಮತ್ತು ಗಣಿತ ವಿಷಯಗಳನ್ನು ವ್ಯಾಸಂಗ ಮಾಡಿ ಶೇ. ೫೦ ಅಂಕಗಳೊAದಿಗೆ ತೇರ್ಗಡೆಯಾಗಿರಬೇಕು ಅಥವಾ ಯಾವುದೇ ಪಿಯುಸಿ ವಿಭಾಗದಲ್ಲಿ ಶೇ. ೫೦ ಅಂಕಗಳೊAದಿಗೆ ತೇರ್ಗಡೆಯಾಗಿರಬೇಕು. ೧೭.೫ ರಿಂದ ೨೩ ವರ್ಷಗಳು ಅಂದರೆ ಅಭ್ಯರ್ಥಿಯು ೨೯ ಡಿಸೆಂಬರ್ ೧೯೯೯ ರಿಂದ ೨೯ ಜೂನ್ ೨೦೦೫ ನಡುವೆ ಜನಿಸಿರಬೇಕು. ಅರ್ಜಿ ಶುಲ್ಕ ೨೫೦ ರೂ.ಗಳು. ಆಸಕ್ತ ಅಭ್ಯರ್ಥಿಗಳು ಸಂಪೂರ್ಣ ವಿವರಗಳಿಗೆ ವೆಬ್ಸೈಟ್ hಣಣಠಿs://iಟಿಜiಚಿಟಿಚಿiಡಿಜಿoಡಿಛಿe.ಟಿiಛಿ.iಟಿನ ಮುಖಾಂತರ ಮಾಹಿತಿ ಪಡೆಯಬಹುದು. ಆನ್ಲೈನ್ ಮೂಲಕ ಅರ್ಜಿಯನ್ನು hಣಣಠಿs://ಚಿgಟಿiಠಿಚಿಣhvಚಿಥಿu.ಛಿಜಚಿಛಿ.iಟಿ ಜಾಲತಾಣಕ್ಕೆ ಭೇಟಿ ನೀಡುವುದು. ಹೆಚ್ಚಿನ ಮಾಹಿತಿಗೆ ಕಚೇರಿ ವೇಳೆಯಲ್ಲಿ ದೂ. ೦೮೨೭೨-೨೨೫೮೫೧ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಉಮಾ ತಿಳಿಸಿದ್ದಾರೆ.
ವಿದ್ಯಾರ್ಥಿ ವೇತನ ನೀಡುವ ಯೋಜನೆ
ಕರ್ನಾಟಕ ರಾಜ್ಯ ಸರ್ಕಾರದ ಯೋಜನೆಯಡಿ ಪ್ರತಿಭಾವಂತ ವಿದ್ಯಾರ್ಥಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಮಾಧ್ಯಮಿಕ/ ಪ್ರೌಢಶಾಲಾ ವಿದ್ಯಾರ್ಥಿ ಕ್ರೀಡಾಪಟು(೬ ರಿಂದ ೧೦ನೇ ತರಗತಿ)ಗಳಿಗೆ ವಾರ್ಷಿಕ ರೂ. ೧೦ ಸಾವಿರದಂತೆ ಪ್ರೋತ್ಸಾಹಿತ ಕ್ರೀಡಾ ವಿದ್ಯಾರ್ಥಿ ವೇತನವನ್ನು ನೀಡುವ ಯೋಜನೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಜಾರಿಯಲ್ಲಿದ್ದು, ಈ ಯೋಜನೆಯನ್ವಯ ಪ್ರಸ್ತುತ ಮಾಧ್ಯಮಿಕ ಅಥವಾ ಪ್ರೌಢಶಾಲೆಯಲ್ಲಿ ಓದುತ್ತಿರುವ ಕ್ರೀಡಾಪಟುಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು.
ಅರ್ಜಿದಾರರು ರಾಜ್ಯ ಕ್ರೀಡಾ ಪ್ರಾಧಿಕಾರದಲ್ಲಿ ನೋಂದಾಯಿತವಾದ ಕ್ರೀಡಾ ಸಂಸ್ಥೆಗಳು ೨೦೨೧ ರ ಏಪ್ರಿಲ್ ೧ ರ ನಂತರ ನಡೆಸಿದ ರಾಜ್ಯ ಮಟ್ಟದ ಸರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿರಬೇಕು ಅಥವಾ ರಾಷ್ಟಿçÃಯ ಮಟ್ಟದ ಪಂದ್ಯಾವಳಿಗಳಲ್ಲಿ ಭಾಗವಹಿಸಿರಬೇಕು. ಕ್ರೀಡಾ ಪಂದ್ಯಾವಳಿಗಳಲ್ಲಿನ ೨೦೨೧ ರ ಏಪ್ರಿಲ್ ೧ ರಿಂದ ೨೦೨೨ ರ ಮಾರ್ಚ್ ೩೧ ರ ವರೆಗಿನ ಸಾಧನೆಯನ್ನು ಮಾತ್ರ ಪರಿಗಣಿಸಲಾಗುವುದು.
ಆಸಕ್ತ ಕ್ರೀಡಾಪಟುಗಳು ಇಲಾಖಾ ಅಧಿಕೃತ ಜಾಲತಾಣ hಣಣಠಿs://sevಚಿsiಟಿಜuseಡಿviಛಿes.ಞಚಿಡಿಟಿಚಿಣಚಿಞಚಿ.gov.iಟಿ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ತಾ. ೧೫ ರವರೆಗೆ ಅವಧಿ ವಿಸ್ತರಿಸಲಾಗಿದೆ. ಜಿಲ್ಲೆಯ ವಿದ್ಯಾರ್ಥಿ ಕ್ರೀಡಾಪಟುಗಳ ಪ್ರೋತ್ಸಾಹಿತ ಕ್ರೀಡಾ ವಿದ್ಯಾರ್ಥಿ ವೇತನವನ್ನು ಪಡೆಯಲು ಅರ್ಜಿಯನ್ನು hಣಣಠಿs://sevಚಿsiಟಿಜuseಡಿviಛಿes. ಞಚಿಡಿಟಿಚಿಣಚಿಞಚಿ.gov.iಟಿ ಮೂಲಕ ತಾ. ೧೫ ರೊಳಗೆ ಸಲ್ಲಿಸಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಎಸ್. ಗುರುಸ್ವಾಮಿ ತಿಳಿಸಿದ್ದಾರೆ.
ಸಹಾಯಧನ ಸೌಲಭ್ಯ ಪಡೆಯಲು
ಪ್ರಸಕ್ತ ಸಾಲಿನಲ್ಲಿ ನಿಗಮದ ವತಿಯಿಂದ ಅನುಷ್ಠಾನಗೊಳಿಸುತ್ತಿರುವ ಪ್ರವರ್ಗ-೧ ರಡಿಯಲ್ಲಿ ಬರುವ ೫೩(ಎ)ಯಿಂದ ೫೩(ವಿ)ವರೆಗಿನ ಉಪ್ಪಾರ ಮತ್ತು ಇದರ ಉಪಜಾತಿಗೆ ಸೇರಿದ ಜನರ ಆರ್ಥಿಕ ಅಭಿವೃದ್ಧಿಗೆ ಸಾಲ ಮತ್ತು ಸಹಾಯಧನ ಸೌಲಭ್ಯ ಪಡೆಯಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಯೋಜನೆಗಳಾದ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ, ೨೦೨೨-೨೩ನೇ ಸಾಲಿನ ಅರಿವು ಶೈಕ್ಷಣಿಕ ಸಾಲ (ನವೀಕರಣ) (೨೦೧೯-೨೦ನೇ ಸಾಲಿನ ೪ನೇ ಕಂತು ಹಾಗೂ ೨೦೨೦-೨೧ ನೇ ಸಾಲಿನ ೩ನೇ ಕಂತು).
ಅರ್ಜಿದಾರರಿಗೆ ಇರಬೇಕಾದ ಸಾಮಾನ್ಯ ಅರ್ಹತೆಗಳು ಮತ್ತು ನಿಬಂಧನೆಗಳು: ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು. ಕೇಂದ್ರ ಆಧಾರ್ ಅಧಿನಿಯಮ, ೨೦೧೬ ಸೆಕ್ಷನ್(೭) ರಡಿ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಅರ್ಜಿದಾರರ ಹೆಸರು, ಆಧಾರ್ ಕಾರ್ಡ್, ಜಾತಿ/ಆದಾಯ ಪ್ರಮಾಣ ಪತ್ರ ಮತ್ತು ಬ್ಯಾಂಕ್ ಖಾತೆಗಳಲ್ಲಿ ಹೊಂದಾಣಿಕೆ ಆಗಿರಬೇಕು. ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಕಡ್ಡಾಯವಾಗಿದೆ.
ನಿಗಮದ /ಸರ್ಕಾರದ ಯಾವುದಾದರೂ ಯೋಜನೆಗಳಡಿ ಈ ಹಿಂದೆ ಸೌಲಭ್ಯ ಪಡೆದಿರಬಾರದು. ಕುಟುಂಬದ ಒಬ್ಬರಿಗೆ ಮಾತ್ರ ಸೌಲಭ್ಯ ಒದಗಿಸಲಾಗುವುದು. ಸರ್ಕಾರ /ನಿಗಮವು ಕಾಲಕಾಲಕ್ಕೆ ವಿಧಿಸುವ ಇನ್ನಿತರ ಅರ್ಹತೆ/ನಿಬಂಧನೆಗಳನ್ನು ಹೊಂದಿರಬೇಕು.
ಅನುದಾನದ ಲಭ್ಯತೆಗೆ ಅನುಗುಣವಾಗಿ ಯೋಜನೆಯನ್ನು/ ಸೌಲಭ್ಯವನ್ನು ಜಾರಿಗೊಳಿಸುವುದು. ಯೋಜನೆಗಳ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆಗಳಾದಲ್ಲಿ ಆ ದಿನಾಂಕದಿAದ ಜಾರಿಗೆ ಬರುವಂತೆ ಯೋಜನೆಯನ್ನು ಜಾರಿಗೊಳಿಸಲಾಗುವುದು. hಣಣಠಿs://suviಜhಚಿ.ಞಚಿಡಿಟಿಚಿಣಚಿಞಚಿ.gov.iಟಿ ಈ ತಂತ್ರಾAಶದ ಮೂಲಕ ಮಾತ್ರವೇ ಅರ್ಜಿಗಳನ್ನು ಸಲ್ಲಿಸಬೇಕು. ನಿಗಮದ ವೆಬ್ಸೈಟ್ hಣಣಠಿs://uಠಿಠಿಚಿಡಿಚಿಜeveಟoಠಿmeಟಿಣ.ಞಚಿಡಿಟಿಚಿಣಚಿಞಚಿ.gov.iಟಿ ಇಲ್ಲಿ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ. ಅಥವಾ ನಿಗಮದ ಸಹಾಯವಾಣಿ ಸಂಖ್ಯೆ: ೭೦೨೬೨೮೮೮೮೮ಗೆ ಸಂಪರ್ಕಿಸಬಹುದು ಅಥವಾ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಕೊಡಗು ಜಿಲ್ಲೆ, ಮಡಿಕೇರಿ ದೂ. ೦೮೨೭೨-೨೨೧೬೫೬ರಲ್ಲಿ ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು. ಅರ್ಜಿ ಸಲ್ಲಿಸಲು ಆಗಸ್ಟ್ ೧೨ ರೊಳಗೆ ಸುವಿಧಾ ತಂತ್ರಾAಶದ ಮುಖಾಂತರ ಸಲ್ಲಿಸುವಂತೆ ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.