ಅಮರನಾಥ ಗುಹೆ ಬಳಿ ಮೇಘಸ್ಫೋಟ-ಕನಿಷ್ಟ ೧೩ ಸಾವು

ಶ್ರೀನಗರ, ಜು. ೮: ಖ್ಯಾತ ಪವಿತ್ರ ಯಾತ್ರಾತಾಣ ಅಮರನಾಥ ಗುಹೆ ಬಳಿ ಮೇಘಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಕನಿಷ್ಟ ೧೩ ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಶುಕ್ರವಾರ ಜಮ್ಮು ಮತ್ತು ಕಾಶ್ಮೀರದ ಅಮರನಾಥದ ಪವಿತ್ರ ಗುಹೆಯ ದೇಗುಲದ ಬಳಿ ಮೇಘಸ್ಫೋಟ ಸಂಭವಿಸಿದ್ದು, ಈ ವೇಳೆ ದಿಢೀರ್ ಉಂಟಾದ ಪ್ರವಾಹಕ್ಕೆ ಸಿಲುಕಿ ೩ ಮಹಿಳೆಯರು, ಇಬ್ಬರು ಪುರುಷರು ಸೇರಿ ಕನಿಷ್ಟ ಹದಿಮೂರು ಮಂದಿ ಸಾವನ್ನಪ್ಪಿದ್ದಾರೆ. ಅನೇಕರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೂಲಗಳ ಪ್ರಕಾರ ಶುಕ್ರವಾರ ಸಂಜೆ ೫.೩೦ರ ಸುಮಾರಿನಲ್ಲಿ ಮೇಘಸ್ಫೋಟ ಸಂಭವಿಸಿದ್ದು, ಈ ವೇಳೆ ದಿಢೀರ್ ಉಂಟಾದ ಪ್ರವಾಹದಲ್ಲಿ ಜನರು ಸಿಲುಕಿದ್ದಾರೆ. ಯಾತ್ರೆ ಮಾರ್ಗದಲ್ಲಿರುವ ಸಮುದಾಯ ಅಡುಗೆ ಕೋಣೆಗಳು ಮತ್ತು ಟೆಂಟ್‌ಗಳು ಕೊಚ್ಚಿ ಹೋಗಿವೆ. ಸೇನಾ ಮೂಲಗಳ ಪ್ರಕಾರ ಮೇಘಸ್ಫೋಟ ಮತ್ತು ಅದರ ಬಳಿಕದ ಪ್ರವಾಹದಿಂದಾಗಿ ಕನಿಷ್ಟ ೧೩ ಮಂದಿ ಸಾವನ್ನಪ್ಪಿದ್ದು, ಹಲವರು ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ. ಅಂತೆಯೇ ಪ್ರವಾಹದ ನೀರು ನೇರವಾಗಿ ಯಾತ್ರಿಕರು ತಂಗಿದ್ದ ಟೆಂಟ್‌ಗಳತ್ತ ನುಗ್ಗಿದ್ದು ಇದು ಸಾವು-ನೋವಿನ ಪ್ರಮಾಣ ಹೆಚ್ಚಿಸುವ ಅತಂಕ ಎದುರಾಗಿದೆ. ಪ್ರಸ್ತುತ ಗಾಯಾಳುಗಳನ್ನು ಚಿಕಿತ್ಸೆಗಾಗಿ ಏರ್‌ಲಿಫ್ಟ್ ಮಾಡಲಾಗುತ್ತಿದ್ದು, ರಾಷ್ಟಿçÃಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ತಂಡಗಳು ಮತ್ತು ಇತರ ಏಜೆನ್ಸಿಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಪ್ರವಾಹ ಮತ್ತು ಮೇಘಸ್ಫೋಟದ ಹೊರತಾಗಿಯೂ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ೫ ವರ್ಷಗಳಲ್ಲಿ ದೇಶದಲ್ಲಿ ಪೆಟ್ರೋಲ್ ಬಳಕೆ ಸ್ಥಗಿತ

ನವದೆಹಲಿ, ಜು. ೮: ಪರ್ಯಾಯ ಇಂಧನಗಳತ್ತ ಮುಖ ಮಾಡಿರುವ ಭಾರತದಲ್ಲಿ ಮುಂದಿನ ೫ ವರ್ಷಗಳಲ್ಲಿ ಪೆಟ್ರೋಲ್ ಬಳಕೆ ನಿಷೇಧವಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಮಹಾರಾಷ್ಟçದ ಅಕೋಲಾದಲ್ಲಿ ಡಾ. ಪಂಜಾಬ್ರಾವ್ ದೇಶಮುಖ್ ಕೃಷಿ ವಿದ್ಯಾಪೀಠದಿಂದ ಗಡ್ಕರಿ ಅವರಿಗೆ ಡಾಕ್ಟರ್ ಆಫ್ ಸೈನ್ಸ್ (ಡಿಎಸ್‌ಸಿ) ಗೌರವ ಪದವಿ ಪ್ರದಾನ ಮಾಡಲಾಯಿತು. ವಿಶ್ವವಿದ್ಯಾನಿಲಯದ ೩೬ನೇ ಘಟಿಕೋತ್ಸವ ಸಮಾರಂಭದಲ್ಲಿ ಗವರ್ನರ್ ಮತ್ತು ಸಾರ್ವಜನಿಕ ವಿಶ್ವವಿದ್ಯಾಲಯಗಳ ಕುಲಪತಿ ಭಗತ್ ಸಿಂಗ್ ಕೊಶ್ಯಾರಿ ಅವರು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವರಿಗೆ ಪದವಿ ಪ್ರದಾನ ಮಾಡಿದರು. ಈ ಸಂದರ್ಭ ಮಾತನಾಡಿದ ಅವರು ದೇಶದಲ್ಲಿ ಪರ್ಯಾಯ ಇಂಧನ ಬಳಕೆಯ ಮಹತ್ವದ ಕುರಿತು ಮಾತನಾಡಿದರು. ಮಹಾರಾಷ್ಟçದ ವಿದರ್ಭ ಜಿಲ್ಲೆಯಲ್ಲಿ ತಯಾರಾಗುತ್ತಿರುವ ಜೈವಿಕ ಎಥೆನಾಲ್ ಅನ್ನು ವಾಹನಗಳಲ್ಲಿ ಬಳಸಲಾಗುತ್ತಿದೆ. ಹಸಿರು ಹೈಡ್ರೋಜನ್ (ಹಸಿರು ಜಲಜನಕ) ತಯಾರಿಸ ಬಹುದು ಮತ್ತು ಇದನ್ನೂ ಕೆ.ಜಿ.ಗೆ ೭೦ ರೂ.ಗೆ ಮಾರಾಟ ಮಾಡಬಹುದು. ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ ಪೆಟ್ರೋಲ್ ಖಾಲಿಯಾಗಲಿದ್ದು, ಇದರಿಂದಾಗಿ ದೇಶದಲ್ಲಿ ಪಳೆಯುಳಿಕೆ ಇಂಧನವನ್ನು ನಿಷೇಧಿಸಲಾಗುವುದು ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ರೈತರು ಕೇವಲ ಆಹಾರ ಪೂರೈಕೆ ದಾರರಾಗದೆ ಇಂಧನ ಪೂರೈಕೆದಾರರಾಗುವ ಅಗತ್ಯವನ್ನು ಗಡ್ಕರಿ ಎತ್ತಿ ತೋರಿಸಿದರು. ಕೇವಲ ಗೋಧಿ, ಭತ್ತ, ಜೋಳ ಹಾಕುವುದರಿಂದ ಯಾವ ರೈತನೂ ತನ್ನ ಭವಿಷ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಅಮ್ನೆಸ್ಟಿ ಇಂಡಿಯಾ ಮಾಜಿ ಸಿಇಒ ಆಕಾರ್ ಪಟೇಲ್‌ಗೆ ದಂಡ

ನವದೆಹಲಿ, ಜು. ೮: ಆಮ್ನೆಸ್ಟಿ ಇಂಡಿಯಾ ಇಂಟರ್‌ನ್ಯಾಶನಲ್ ಪ್ರೆöÊ ಲಿಮಿಟೆಡ್ ಮತ್ತು ಅದರ ಮಾಜಿ ಸಿಇಒ ಆಕಾರ್ ಪಟೇಲ್ ಅವರಿಗೆ ವಿದೇಶಿ ವಿನಿಮಯ ಕಾನೂನನ್ನು ಉಲ್ಲಂಘಿಸಿದ್ದಕ್ಕಾಗಿ ಕ್ರಮವಾಗಿ ರೂ. ೫೧.೭೨ ಕೋಟಿ ಮತ್ತು ೧೦ ಕೋಟಿ ರೂಪಾಯಿ ದಂಡವನ್ನು ಜಾರಿ ನಿರ್ದೇಶನಾಲಯ (ಇಡಿ) ವಿಧಿಸಿದೆ. ಆಮ್ನೆಸ್ಟಿ ಇಂಟರ್‌ನ್ಯಾಶನಲ್, ಯುಕೆಯು ಎಫ್‌ಡಿಐ ಮಾರ್ಗವನ್ನು ಅನುಸರಿಸಿ ತನ್ನ ಭಾರತೀಯ ಘಟಕಗಳ ಮೂಲಕ (ಎಫ್‌ಸಿಆರ್‌ಎ ಅಲ್ಲದ ಕಂಪೆನಿಗಳು) ‘ದೊಡ್ಡ ಮೊತ್ತದ' ವಿದೇಶಿ ಕೊಡುಗೆಯನ್ನು ರವಾನಿಸುತ್ತಿದೆ ಎಂಬ ಮಾಹಿತಿಯ ಆಧಾರದ ಮೇಲೆ ಇಬ್ಬರ ವಿರುದ್ಧ ಕ್ರಮ ಕೈಗೊಂಡಿರುವುದಾಗಿ ಫೆಡರಲ್ ಏಜೆನ್ಸಿ ಹೇಳಿದೆ. ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆಯಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಭಾರತದಲ್ಲಿ ತನ್ನ ಚಟುವಟಿಕೆಗಳನ್ನು ವಿಸ್ತರಿಸಿತ್ತು ಎಂಬ ಆರೋಪವಿದೆ. ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಇಂಡಿಯಾ ಫೌಂಡೇಶನ್ ಟ್ರಸ್ಟ್ (ಎಐಐಎಫ್‌ಟಿ) ಮತ್ತು ಎಫ್‌ಸಿಆರ್‌ಎ ಅಡಿಯಲ್ಲಿರುವ ಇತರ ಟ್ರಸ್ಟ್ಗಳಿಗೆ ಗೃಹ ವ್ಯವಹಾರಗಳ ಸಚಿವಾಲಯವು ಪೂರ್ವ ನೋಂದಣಿ ಅಥವಾ ಅನುಮತಿಗಳನ್ನು ನಿರಾಕರಿಸಿದ ಹೊರತಾಗಿಯೂ ಇದು ನಡೆದಿದೆ ಎಂದು ಇಡಿ ಹೇಳಿದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ ನಿಬಂಧನೆಗಳನ್ನು ಉಲ್ಲಂಘಿಸಿ ಹಣವನ್ನು ಸ್ವೀಕರಿಸಿದ ಕಾರಣ ದಂಡದ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

ಸಾಲುಮರದ ತಿಮ್ಮಕ್ಕರಿಗೆ ಸಂಪುಟ ದರ್ಜೆ ಸ್ಥಾನಮಾನ

ಬೆಂಗಳೂರು, ಜು. ೮: ಖ್ಯಾತ ಪರಿಸರವಾದಿ ಸಾಲುಮರದ ತಿಮ್ಮಕ್ಕ ಅವರನ್ನು ಪರಿಸರ ರಾಯಭಾರಿಯಾಗಿ ಮಾಡಿ ಅವರಿಗೆ ರಾಜ್ಯ ಸಂಪುಟ ದರ್ಜೆ ಸ್ಥಾನಮಾನ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ೧೧೧ ವರ್ಷದ ಜನ್ಮದಿನ ಆಚರಿಸಿಕೊಂಡಿದ್ದ ಸಾಲುಮರದ ತಿಮ್ಮಕ್ಕ ಅವರನ್ನು ಇತ್ತೀಚೆಗೆ ರಾಜ್ಯ ಸರ್ಕಾರ ವತಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗೌರವಿಸಿದ್ದರು. ಅವರನ್ನು ಸರ್ಕಾರದ ಪರಿಸರ ರಾಯಭಾರಿಯಾಗಿ ಮಾಡಿ ಸಂಪುಟ ದರ್ಜೆ ಸ್ಥಾನಮಾನ ನೀಡಿ ರಾಜ್ಯ ಸರ್ಕಾರ ಇಂದು ಅಧಿಸೂಚನೆ ಹೊರಡಿಸಿದೆ.

ಖಾದ್ಯ ತೈಲ ದರದಲ್ಲಿ ರೂ. ೧೫ ಕಡಿತಕ್ಕೆ ಕೇಂದ್ರ ಸರ್ಕಾರ ಆದೇಶ!

ನವದೆಹಲಿ, ಜು. ೮: ಖಾದ್ಯ ತೈಲ ದರ ಏರಿಕೆಯಿಂದ ಕಂಗಾಲಾಗಿರುವ ಗ್ರಾಹಕರಿಗೆ ಕೇಂದ್ರ ಸರ್ಕಾರ ಅಲ್ಪ ಪ್ರಮಾಣದ ರಿಲೀಫ್ ನೀಡಿದ್ದು, ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ಅಡುಗೆ ಎಣ್ಣೆಗಳ ದರದಲ್ಲಿ ಪ್ರತಿ ಲೀಟರ್‌ಗೆ ೧೫ ರೂಪಾಯಿ ಕಡಿತಗೊಳಿಸಿ ಆದೇಶ ಹೊರಡಿಸಿದೆ. ಈ ಕುರಿತಂತೆ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು ನಿರ್ದೇಶನ ಹೊರಡಿಸಿದ್ದು, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಖಾದ್ಯ ತೈಲಗಳ ಗರಿಷ್ಠ ಚಿಲ್ಲರೆ ಬೆಲೆಯಲ್ಲಿ ೧೫ ರೂಪಾಯಿಗಳ ಕಡಿತವನ್ನು ಖಚಿತಪಡಿಸಿಕೊಳ್ಳಲು ಪ್ರಮುಖ ಖಾದ್ಯ ತೈಲ ಸಂಘಗಳಿಗೆ ನಿರ್ದೇಶನ ನೀಡಿದೆ ಎಂದು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಶುಕ್ರವಾರ ತಿಳಿಸಿದೆ. ಅಂತೆಯೇ ಈ ಆದೇಶವು ಈ ಕ್ಷಣದಿಂದಲೇ ಜಾರಿಗೆ ಬರಬೇಕೆಂದು ಖಾದ್ಯ ತೈಲ ಸಂಘಗಳಿಗೆ ಸೂಚನೆ ನೀಡಿದೆ.

ರಾಘವೇಂದ್ರ ಸ್ವಾಮೀಜಿ ಹೆಸರಲ್ಲಿ ನಟ ಜಗ್ಗೇಶ್ ಪ್ರಮಾಣ ವಚನ

ನವದೆಹಲಿ, ಜು. ೮: ರಾಜ್ಯಸಭಾ ಸದಸ್ಯರಾಗಿ ನಟ ಜಗ್ಗೇಶ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ನಟ ಜಗ್ಗೇಶ್ ಕನ್ನಡ ಭಾಷೆಯಲ್ಲಿ ರಾಘವೇಂದ್ರ ಸ್ವಾಮಿಗಳ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಲೆಹರ್‌ಸಿಂಗ್ ಹಾಗೂ ಜೈರಾಮ್ ರಮೇಶ್ ಕೂಡ ಇದೇ ವೇಳೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ದೆಹಲಿಯಲ್ಲಿ ಪ್ರಮಾಣವಚನ ಸ್ವೀಕಾರ ಮಾಡುವ ಮೊದಲು ನಟ ಜಗ್ಗೇಶ್ ಹಾಗೂ ಅವರ ಪತ್ನಿ ಪರಿಮಳ ದೆಹಲಿಯಲ್ಲಿರುವ ರಾಯರ ಮಠಕ್ಕೆ ನಟ ಜಗ್ಗೇಶ್ ಭೇಟಿ ನೀಡಿ ಬೃಂದಾವನ ದರ್ಶನ ಮಾಡಿದ್ದಾರೆ. ರಾಜ್ಯಸಭೆಯಲ್ಲಿ ಇಂದು ಕನ್ನಡದಲ್ಲಿಯೇ ಜಗ್ಗೇಶ್ ಪ್ರಮಾಣವಚನ ಸ್ವೀಕರಿಸಿದ್ದು, ಎಲ್ಲರ ಗಮನಸೆಳೆಯಿತು. ಉಪರಾಷ್ಟçಪತಿ ವೆಂಕಯ್ಯ ನಾಯ್ಡು ಅವರಿದ್ದ ಪೀಠದ ಸಮ್ಮುಖದಲ್ಲಿ ಜಗ್ಗೇಶ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ ಹತ್ಯೆ