ಗೋಣಿಕೊಪ್ಪಲು, ಜು. ೮ : ವಾಣಿಜ್ಯ ನಗರ ಗೋಣಿಕೊಪ್ಪ ಪಟ್ಟಣದ ಕೂಗಳತೆಯ ದೂರದಲ್ಲಿರುವ ಅರುವತ್ತೊಕ್ಕಲು ಮೈಸೂರಮ್ಮ ಕಾಲೋನಿಯಲ್ಲಿ ಆರು ಕಾಡಾನೆಗಳ ಹಿಂಡು ಮರಿ ಸಹಿತವಾಗಿ ನೆಲೆ ನಿಂತಿವೆ. ಕಳೆದ ನಾಲ್ಕು ದಿನಗಳಿಂದ ಈ ಭಾಗದ ರೈತರ ಕಾಫಿ ತೋಟದಲ್ಲಿ ನಿಂತಿರುವ ಕಾಡಾನೆಗಳನ್ನು ಪೊನ್ನಂಪೇಟೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಗುರುವಾರ ಸಂಜೆ ವೇಳೆಯಲ್ಲಿ ಅರಣ್ಯಕ್ಕೆ
(ಮೊದಲ ಪುಟದಿಂದ) ದಾಟಿಸುವ ಪ್ರಯತ್ನ ಕೈಗೊಂಡರು. ಅರಣ್ಯ ಸಿಬ್ಬಂದಿಗಳು ಅರುವತ್ತೊಕ್ಲು ಭಾಗದಿಂದ ಕಾಡಾನೆಗಳ ಹಿಂಡನ್ನು ಚದುರಿಸಿ ಪೊನ್ನಂಪೇಟೆ ರಸ್ತೆ ದಾಟಿಸುವ ಪ್ರಯತ್ನಕ್ಕೆ ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ಪೊನ್ನಂಪೇಟೆ ಮುಖ್ಯ ರಸ್ತೆಯನ್ನು ಕೆಲವು ಕಾಲ ಬಂದ್ ಮಾಡಿ ಪೊನ್ನಂಪೇಟೆ ರಸ್ತೆ ಬದಿಯಲ್ಲಿರುವ ಕಾಫಿ ತೋಟದಿಂದ ಕಾಡಾನೆಗಳನ್ನು ಓಡಿಸುವ ಪ್ರಯತ್ನ ನಡೆಸಿದರು. ಕಾಫಿ ತೋಟದಲ್ಲಿ ಹಲಸಿನ ಹಣ್ಣನ್ನು ಅರಸಿ ಕಾಡಾನೆಗಳು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ತೆರಳುತ್ತಿವೆ. ಹೇರಳವಾಗಿ ಹಲಸಿನ ಹಣ್ಣುಗಳು ತೋಟದಲ್ಲಿ ಕಂಡುಬAದಲ್ಲಿ ಕೆಲವು ದಿನಗಳ ಕಾಲ ತೋಟದಲ್ಲಿಯೆ ನೆಲೆ ನಿಂತಿದೆ.
ಸಿಬ್ಬAದಿಗಳು ಕಾಡಾನೆಗಳ ಮೇಲೆ ಬೆದರು ಗುಂಡುಗಳನ್ನು ಪ್ರಯೋಗಿಸಿದರು. ರಸ್ತೆ ಸಮೀಪದ ಕಾಫಿ ತೋಟದಲ್ಲಿದ್ದ ಕಾಡಾನೆಗಳು ಬೆದರು ಗುಂಡಿಗೆ ಭಯಗೊಂಡು ರಸ್ತೆ ದಾಟುವ ಬದಲು ಈ ಹಿಂದೆ ಇದ್ದ ಮೈಸೂರಮ್ಮ ಕಾಲೋನಿಯ ಸಮೀಪದ ಕಾಫಿ ತೋಟಕ್ಕೆ ವಾಪಸ್ಸಾದವು. ಇದರಿಂದ ಅರಣ್ಯ ಸಿಬ್ಬಂದಿಗಳು ಸುಮ್ಮನಾದರು.
ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೆ ಕಾಡಾನೆಗಳನ್ನು ನಾಡಿನಿಂದ ಮಾಯಮುಡಿ ಮಾರ್ಗವಾಗಿ ಅರಣ್ಯಕ್ಕೆ ಅಟ್ಟುವ ಪ್ರಯತ್ನವನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಕೈಗೊಂಡಿದ್ದರು. ಮುಂಜಾನೆಯಿAದಲೇ ಈ ಆನೆಯ ಹಿಂದೆ ಸಂಚರಿಸಿದ ತಂಡಗಳು ಮಧ್ಯಾಹ್ನದ ವೇಳೆ ಪೊನ್ನಂಪೇಟೆ ರಸ್ತೆ ಬಳಿಯ ಕಾಫಿ ತೋಟದಲ್ಲಿ ಆನೆಗಳನ್ನು ನೆಲೆ ನಿಲ್ಲುವಂತೆ ಮಾಡಿದ್ದರು. ಆದರೆ ಇವರು ಸಿಡಿಸಿದ ಬೆದರು ಗುಂಡಿಗೆ ಭಯಭೀತಗೊಂಡು ಕಾಡಾನೆಗಳು ಮತ್ತೆ ಕಾಫಿ ತೋಟವನ್ನು ಸೇರಿವೆ.
ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿರುವುದರಿಂದ ಇವುಗಳ ಸಂಚಾರವನ್ನು ಅರಣ್ಯ ಸಿಬ್ಬಂದಿಗಳು ಪರಿಶೀಲಿಸುತ್ತಿದ್ದಾರೆ. ರಾತ್ರಿ ವೇಳೆ ಈ ಕಾಡಾನೆಗಳು ಮಾಯಮುಡಿ ಪ್ರದೇಶಕ್ಕೆ ಪ್ರವೇಶಿಸಿ ಅಲ್ಲಿಂದ ಸಮೀಪದ ತಿತಿಮತಿ ಅರಣ್ಯ ವ್ಯಾಪ್ತಿಗೆ ತೆರಳುವ ಸಂಭವ ವಿರುವುದರಿಂದ ಇವುಗಳನ್ನು ಸುರಕ್ಷಿತವಾಗಿ ಅರಣ್ಯಕ್ಕೆ ದಾಟಿಸಲು ಸಿಬ್ಬಂದಿಗಳು ಪ್ರಯತ್ನ ನಡೆಸುತ್ತಿದ್ದಾರೆ.
ಕಾಡಾನೆಗಳನ್ನು ರಸ್ತೆ ಮಾರ್ಗವಾಗಿ ದಾಟಿಸುವ ಹಿನೆÀ್ನಲೆ ಯಲ್ಲಿ ಗೋಣಿಕೊಪ್ಪ ಪೊಲೀಸ್ ಠಾಣೆಯ ಠಾಣಾಧಿಕಾರಿ ಕೆ.ಪಿ.ದೀಕ್ಷಿತ್ ಹಾಗೂ ಸಿಬ್ಬಂದಿಗಳು ಮುಂಜಾಗೃತಾ ಕ್ರಮವಾಗಿ ಪೊನ್ನಂಪೇಟೆ, ಗೋಣಿಕೊಪ್ಪ ರಸ್ತೆ ಸಂಚಾರವನ್ನು ಕೆಲ ಕಾಲ ನಿಲ್ಲಿಸಿದ್ದರು. ಕಾಡಾನೆಗಳು ವಾಪಸ್ಸಾಗುತ್ತಿದ್ದಂತೆಯೇ ರಸ್ತೆ ಸಂಚಾರಕ್ಕೆ ಅನುವು ಮಾಡಿ ಕೊಡಲಾಯಿತು.
ಕಾಡಾನೆಗಳನ್ನು ಓಡಿಸುವ ಕಾರ್ಯದಲ್ಲಿ ಅರಣ್ಯ ಇಲಾಖೆಯ ಪೊನ್ನಂಪೇಟೆ ವಲಯದ ಆರ್ಎಫ್ಒ ಬಿ.ಎಂ. ಶಂಕರ್, ದಿವಾಕರ್, ಆರ್ಆರ್ಟಿ ತಂಡದ ಸಿಬ್ಬಂದಿಗಳಾದ ಮಂಜು, ಅರುಣ, ನಿತೀನ್, ಹರೀಶ್, ಭರತ್, ಡಿಆರ್ಎಫ್ಒ ಸಿಬ್ಬಂದಿ ಗಳಾದ ಗಣೇಶ್, ರಕ್ಷಿತ್, ರವಿಕಿರಣ್, ಅರಣ್ಯ ರಕ್ಷಕರಾದ ಅಂತೋಣಿ ಪ್ರಕಾಶ್ ಹಾಜರಿದ್ದರು.
-ಹೆಚ್.ಕೆ.ಜಗದೀಶ್