ಕುಶಾಲನಗರ, ಜು. ೮: ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ರವರ ಜನ್ಮ ದಿನದ ಅಂಗವಾಗಿ ಅವರ ಅಭಿಮಾನಿ ಬಳಗದ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ಮತ್ತು ಸಿಹಿ ವಿತರಣೆ ಮಾಡಲಾಯಿತು.
ಕುಶಾಲನಗರ ಸಮೀಪದ ಕೂಡ್ಲೂರು ಪ್ರೌಢಶಾಲೆ ಮಕ್ಕಳಿಗೆ ನೋಟ್ ಬುಕ್ ವಿತರಿಸಲಾಯಿತು. ಈ ಸಂದರ್ಭ ಶಾಲೆಯ ಎಸ್.ಡಿ.ಎಂ.ಸಿ. ಮಾಜಿ ಅಧ್ಯಕ್ಷ ಕೆ.ಕೆ. ಬೋಗಪ್ಪ ಪ್ರಮುಖರಾದ ಬಿ.ವಿ. ಪ್ರವೀಣ್, ಕೆ.ಜಿ. ಮಂಜುನಾಥ್, ಭಾಸ್ಕರ್ ನಾಯಕ್, ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಮಣಿ, ಗೌರಮ್ಮ, ಮುಖ್ಯೋಪಾಧ್ಯಾಯ ಟಿ.ಜಿ. ಪ್ರೇಮ್ಕುಮಾರ್ ಇದ್ದರು.
ಕುಶಾಲನಗರ ಬಿಜೆಪಿ ವತಿಯಿಂದ ಶಾಸಕ ರಂಜನ್ ಜನ್ಮ ದಿನದ ಅಂಗವಾಗಿ ಕುಶಾಲನಗರ ಸರ್ಕಾರಿ ಆಸ್ಪತ್ರೆಯಲ್ಲಿ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ್, ಕೂಡ ಅಧ್ಯಕ ಎಂ.ಎA. ಚರಣ್, ಬಿಜೆಪಿ ನಗರಾಧ್ಯಕ್ಷ ಉಮಾಶಂಕರ್, ಪ್ರಮುಖರಾದ ಅಮೃತರಾಜ್, ಕೆ.ಜಿ. ಮನು, ಪುಂಡರೀಕಾಕ್ಷ, ಬೋಸ್ ಮೊಣ್ಣಪ್ಪ, ವ್ಯೆದ್ಯಾಧಿಕಾರಿಗಳು ಇದ್ದರು.