ಕರಿಕೆ, ಜು. ೮: ಇಲ್ಲಿಗೆ ಸಮೀಪದ ತೋಟಂ ಎಂಬಲ್ಲಿ ಕರ್ನಾಟಕ - ಕೇರಳ ಗಡಿ ಪ್ರದೇಶದಲ್ಲಿ ತುಂಬಿ ಹರಿಯುವ ಸೇತುವೆ ಮೇಲೆ ಬೈಕ್ ದಾಟಿಸಲು ಯತ್ನಿಸಿ ಯುವಕನೊಬ್ಬ ಬೈಕ್ ಸಮೇತವಾಗಿ ಕೊಚ್ಚಿ ಹೋಗಿದ್ದು, ಗ್ರಾಮಸ್ಥರು ಯುವಕನನ್ನು ರಕ್ಷಿಸಿದ ಘಟನೆ ನಡೆದಿದೆ. ಎಳ್ಳುಕೊಚ್ಚಿ ಸಮೀಪದಲ್ಲಿ ಚಂದ್ರಗಿರಿ ನದಿಗೆ ಅಡ್ಡಲಾಗಿ ಕೇರಳಕ್ಕೆ ಸಂಪರ್ಕ ಕಲ್ಲಿಸಲು ಮುಳುಗು ಸೇತುವೆ ನಿರ್ಮಿಸಲಾಗಿದೆ. ಇದೀಗ ಮಳೆಯ ಹಿನೆÀ್ನಲೆಯಲ್ಲಿ ನೆರೆಯ ಕಲ್ಲಪ್ಪಳ್ಳಿ ಊರಿನ ಯುವಕನೊಬ್ಬ ಬೈಕ್ ದಾಟಿಸುವ ದುಸ್ಸಾಹಸ ಮಾಡಿದ್ದು, ನೀರಿನ ರಭಸಕ್ಕೆ ಬೈಕ್ ಸಮೇತ ಕೊಚ್ಚಿ ಹೋಗಿದ್ದಾನೆ. ಅದೃಷ್ಟವಶಾತ್ ನೀರಿನಲ್ಲಿ ಸಿಲುಕಿದ್ದ ಮರದ ಸಹಾಯದಿಂದ ಯುವಕ ಬದುಕುಳಿದಿದ್ದು, ನಂತರ ಸ್ಥಳೀಯ ಗ್ರಾಮಸ್ಥರು ಹಗ್ಗದ ಸಹಾಯದಿಂದ ರಕ್ಷಣೆ ಮಾಡಿದ್ದಾರೆ. ಬೈಕ್ ನೀರಿನಲ್ಲಿ ಕೊಚ್ಚಿ ಹೋಗಿದೆ.