ಶ್ರೀಮಂಗಲ, ಜು. ೬: ಟಿ. ಶೆಟ್ಟಿಗೇರಿ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಪಂಚಾಯತ್‌ನ ಅನಿರ್ಬಂಧಿತ ಯೋಜನೆಯಡಿಯಲ್ಲಿ ರೂ. ೩.೫೦ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ಅಡುಗೆ ಕೊಠಡಿಯ ಉದ್ಘಾಟನೆ ಇಂದು ನೆರವೇರಿತು.

ಗ್ರಾ.ಪಂ. ಅಧ್ಯಕ್ಷೆ ಸರಿತಾ ತಮ್ಮಯ್ಯ ಅವರು ಕೊಠಡಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕವೃಂದ, ಸಿಬ್ಬಂದಿ, ಎಸ್.ಡಿ.ಎಂ.ಸಿ.ಯ ಅಪ್ಪಚಂಗಡ ಮೋಟಯ್ಯ, ದತ್ತ, ಬಾಬು ಪಾಲ್ಗೊಂಡಿದ್ದರು.