ಮಡಿಕೇರಿ, ಜು. ೬: ಸಮಾಜ ಸೇವೆ ಮಾಡುವುದರಿಂದ ವ್ಯಕ್ತಿತ್ವ ವಿಕಸನಕ್ಕೆ ಅವಕಾಶಗಳಿದ್ದು, ಯುವ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಸೇವೆಯಲ್ಲಿ ಆಸಕ್ತಿ ತೋರ ಬೇಕೆಂದು ಲಯನ್ಸ್ ಕ್ಲಬ್ನ ಜಿಲ್ಲಾ ಮಾಜಿ ರಾಜ್ಯಪಾಲ ಹೆಚ್.ಎಸ್. ಮಂಜುನಾಥ್ ಮೂರ್ತಿ ಕರೆ ನೀಡಿದ್ದಾರೆ.
ನಗರದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಡೆದ ಮಡಿಕೇರಿ ಲಯನ್ಸ್ ಕ್ಲಬ್ನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಮಾಜ ಸೇವೆಯಲ್ಲಿ ಯುವ ಪೀಳಿಗೆ ಮುಂಚೂಣಿಯಲ್ಲಿರಬೇಕು. ಲಯನ್ಸ್ ಕ್ಲಬ್ಗೆ ಯುವ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಗೊಳ್ಳ ಬೇಕು. ಸದಸ್ಯತ್ವವನ್ನು ಹೆಚ್ಚು ಮಾಡಿ ಕ್ಲಬ್ನ್ನು ಸಂಘಟಿಸುವ ಮೂಲಕ ಸಮಾಜ ಸೇವೆಯನ್ನು ವಿಸ್ತಾರ ಗೊಳಿಸಬೇಕೆಂದು ಸಲಹೆ ನೀಡಿದರು.
ನೂತನ ಅಧ್ಯಕ್ಷೆಯಾಗಿ ಕನ್ನಂಡ ಕವಿತಾ ಕಾವೇರಮ್ಮ ಪ್ರಮಾಣ ವಚನ ಸ್ವೀಕರಿಸಿ ಮಾತನಾಡಿ, ಹಿಂದಿನ ಪದಾಧಿಕಾರಿಗಳು ತಮ್ಮ ಜವಾಬ್ದಾರಿ ಯನ್ನು ಯಶಸ್ವಿಯಾಗಿ ನಿರ್ವಹಿಸಿ ದ್ದಾರೆ. ಇದೀಗ ನೂತನ ಪದಾಧಿಕಾರಿ ಗಳು ಮುಂದಿನ ದಿನಗಳಲ್ಲಿ ಕೈಗೊಳ್ಳುವ ಕೆಲಸಗಳಿಗೆ ಎಲ್ಲಾ ಸದಸ್ಯರು ಸಹಕಾರ ಮತ್ತು ಪ್ರೋತ್ಸಾಹ ನೀಡಬೇಕೆಂದು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ನಿರ್ಗಮಿತ ಅಧ್ಯಕ್ಷ ನಟರಾಜ ಕೆಸ್ತೂರು, ಸದಸ್ಯರು ಸಹಕಾರ ನೀಡಿದ ಕಾರಣ ಕಾರ್ಯಕ್ರಮಗಳನ್ನು ಯಶಸ್ವಿ ಯಾಗಿ ಪೂರ್ಣಗೊಳಿಸಲು ಸಾಧ್ಯ ವಾಯಿತು ಎಂದರು.
ಪ್ರತಿಭಾ ಪುರಸ್ಕಾರ
ಹೆಚ್ಚು ಅಂಕ ಗಳಿಸಿದ ಹತ್ತನೇ ತರಗತಿ ವಿದ್ಯಾರ್ಥಿನಿ ಸಪ್ನ ಎಂ.ಶೇಟ್, ಪಿಯುಸಿ ವಿದ್ಯಾರ್ಥಿ ಗಳಾದ ವಿಹಾನ್ ಎಂ.ನಿರAಜನ್ ಹಾಗೂ ಪಿ.ತುಳಸಿ ದೇಚಮ್ಮ ಅವರುಗಳಿಗೆ ಲಯನ್ಸ್ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ನವೀನ್ ಅಂಬೆಕಲ್ ಪ್ರಾರ್ಥಿಸಿ, ನಟರಾಜ್ ಕೆಸ್ತೂರು ಸ್ವಾಗತಿಸಿ, ನೂತನ ಕಾರ್ಯದರ್ಶಿ ಪಿ.ಪಿ. ಸೋಮಣ್ಣ ವಂದಿಸಿದರು.
ಅನಿತಾ ಸೋಮಣ್ಣ, ಪ್ರಾಂತೀಯ ಅಧ್ಯಕ್ಷ ಶಾಶ್ವತ್ ಬೋಪಯ್ಯ, ವಲಯ ಅಧ್ಯಕ್ಷರು ಗಳಾದ ಮೋಹನ್ ಕುಮಾರ್, ಹರೀಶ್, ವಿನಯ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.