ಸೋಮವಾರಪೇಟೆ, ಜು.೬: ಸಮೀಪದ ಅಭಿಮಠ ಬಾಚಳ್ಳಿ, ಯಡೂರು ಗ್ರಾಮ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಬೃಹತ್ ಗಾತ್ರದ ಮಿಡತೆಗಳು ಕಂಡುಬAದಿದ್ದು ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ.

ಯಡೂರು ಗ್ರಾಮದಲ್ಲಿರುವ ವಿಶ್ವನಾಥ್ ಧರ್ಮಪ್ಪ ಅವರಿಗೆ ಸೇರಿದ ಅರೇಬಿಕಾ ಕಾಫಿ ತೋಟದಲ್ಲಿ ಈ ಅಪರೂಪದ ಮಿಡತೆಗಳು ಕಂಡುಬAದಿದ್ದು, ಇವುಗಳು ಕಾಫಿ ಗಿಡದ ಎಲೆ, ಚಿಗುರುಗಳನ್ನು ತಿನ್ನುತ್ತಿರುವುದರಿಂದ ಗಿಡಗಳು ಸಾಯುವ ಆತಂಕ ಎದುರಾಗಿದೆ.

ಭಾರೀ ಮಳೆಯ ನಡುವೆಯೂ ಈ ಮಿಡತೆಗಳು ಕಾಫಿ ಎಲೆಗಳು, ಚಿಗುರು, ಕಾಂಡದ ತೆಳು ಭಾಗವನ್ನು ತಿನ್ನುತ್ತಿವೆ. ನೂರಾರು ಸಂಖ್ಯೆಯಲ್ಲಿ ಗುಂಪು ಗುಂಪಾಗಿ ಕಂಡುಬರುತ್ತಿರುವ ಇವುಗಳ ನಿಯಂತ್ರಣ ಹೇಗೆ? ಎಂಬ ಪ್ರಶ್ನೆ ಇದೀಗ ಬೆಳೆಗಾರರನ್ನು ಕಾಡುತ್ತಿದೆ.

ಸುಮಾರು ೨೦ ರಿಂದ ೩೦ ಮಿಡತೆಗಳು ಗುಂಪು ಗುಂಪಾಗಿ ಕಂಡುಬರುತ್ತಿವೆ. ಸಣ್ಣ ಮಿಡತೆಗಳೊಂದಿಗೆ ಒಡ್ಡ ಮಿಡತೆಗಳೂ ಇದ್ದು, ಇವುಗಳ ಆಹಾರಕ್ಕೆ ಕಾಫಿ ಎಲೆ, ಚಿಗುರು, ಕಾಂಡ ಬಲಿಯಾಗುತ್ತಿದೆ. ಪರಿಣಾಮ ಕಾಫಿ ಗಿಡ ಬೋಳಾ ಗುತ್ತಿದ್ದು, ಗಿಡಗಳು ಹಾನಿಗೊಳ್ಳುವ ಆತಂಕ ಎದುರಾಗಿದೆ. ಈ ಬಗ್ಗೆ ಕಾಫಿ ಮಂಡಳಿಯ ಗಮನಕ್ಕೆ ತರಲಾಗಿದೆ ಎಂದು ಬೆಳೆಗಾರ ಧರ್ಮಪ್ಪ ತಿಳಿಸಿದ್ದಾರೆ.

ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯೆ

(ಮೊದಲ ಪುಟದಿಂದ) ನೀಡಿರುವ ಕಾಫಿ ಮಂಡಳಿಯ ಸಂಪರ್ಕಾಧಿಕಾರಿ ವಿಶ್ವನಾಥ್ ಅವರು, ಕಡಿಮೆ ಪ್ರಮಾಣದಲ್ಲಿ ಮಿಡತೆಗಳು ಕಂಡುಬAದಿರುವ ಬಗ್ಗೆ ಮಾಹಿತಿ ಇದೆ. ಮಳೆ ಬರುವ ಸಂದರ್ಭ ಇಂತಹ ಮಿಡತೆಗಳು ಸಾಮಾನ್ಯ. ೨೫ ಸಾವಿರಕ್ಕೂ ಅಧಿಕ ತಳಿಯ ಮಿಡತೆಗಳು ವಿಶ್ವದಲ್ಲಿವೆ. ಇವುಗಳ ಪೈಕಿ ಸಾಮಾನ್ಯವಾಗಿ ಕೃಷಿ ಬೆಳೆಗಳನ್ನು ಹಾನಿ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

ಮುಂದುವರೆದು ಲೋಕಸ್ಟ್ ಪ್ರಭೇದದಲ್ಲಿ ಎಲ್ಲವೂ ಅಪಾಯಕಾರಿಯಲ್ಲ. ಡ್ರಿಗಾರಿಸ್ ಪ್ರಭೇದದ ಮಿಡತೆಗಳು ಹೆಚ್ಚು ಹಾನಿಕಾರಕವಾಗಿವೆ. ಈಗ ಕಂಡು ಬಂದಿರುವ ಮಿಡತೆಗಳು ಕೃಷಿಗೆ ಹೆಚ್ಚು ಹಾನಿ ಮಾಡುವುದಿಲ್ಲ. ಇವುಗಳ ನಿಯಂತ್ರಣಕ್ಕೆ ‘ಎಕಾಲೆಕ್ಸ್ ಮೋನೋಕ್ರೋಟೋಪಾಸ್ ೨೫ ಇ.ಸಿ.’ಯನ್ನು ಒಂದು ಲೀಟರ್ ನೀರಿಗೆ ೩ ಮಿಲಿ ಲೀಟರ್ ಮಿಶ್ರಣ ಮಾಡಿ ಸ್ಪೆçà ಮಾಡಬಹುದು ಎಂದು ಮಾಹಿತಿ ನೀಡಿದ್ದಾರೆ.

ಯಡೂರು-ಅಭಿಮಠದಲ್ಲಿ ಕಂಡುಬAದಿರುವ ಮಿಡತೆಗಳು ಕಳೆದ ವರ್ಷ ಶನಿವಾರಸಂತೆ ಸಮೀಪದ ಮಾದ್ರೆ, ಕೇರಳದ ವಯನಾಡ್‌ನಲ್ಲೂ ಕಂಡುಬAದಿತ್ತು. ಇವುಗಳಿಂದ ಹೆಚ್ಚಿನ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಆದರೂ ಇವುಗಳ ನಿಯಂತ್ರಣಕ್ಕೆ ಎಕಾಲೆಕ್ಸ್ ಸ್ಪೆçà ಮಾಡಬಹುದು. ಇದೀಗ ಮಿಡತೆಗಳು ಕಂಡುಬAದಿರುವ ಕಾಫಿ ತೋಟದ ಮಾಲೀಕರನ್ನು ಸಂಪರ್ಕಿಸಿ, ನಿಯಂತ್ರಣ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ವಿಶ್ವನಾಥ್ ಅವರು ತಿಳಿಸಿದ್ದಾರೆ.