ಶನಿವಾರಸAತೆ, ಜು. ೬: ಶನಿವಾರಸಂತೆ ಠಾಣಾ ಸರಹದ್ದಿನಲ್ಲಿ ಕ್ರಿಮಿನಲ್ ಪ್ರಕರಣಗಳಲ್ಲಿ ವಾರೆಂಟ್ ಆಗಿದ್ದು, ಸೋಮವಾರಪೇಟೆ ನ್ಯಾಯಾಲಯಕ್ಕೆ ಹಾಜರಾಗದೆ ಈವರೆಗೂ ತಲೆ ಮರೆಸಿಕೊಂಡಿದ್ದ, ಓರ್ವ ಮಹಿಳೆಯು ಸೇರಿದಂತೆ ಒಟ್ಟು ೧೪ ಮಂದಿಯನ್ನು ಇಂದು ವಿಶೇಷ ಕಾರ್ಯಾಚರಣೆ ಮೂಲಕ ಶನಿವಾರಸಂತೆ ಪೊಲೀಸ್ ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ ಹಾಗೂ ಸಿಬ್ಬಂದಿಗಳು ಬಂಧಿಸಿ, ಸೋಮವಾರಪೇಟೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ, ಸಹಾಯಕ ಠಾಣಾಧಿಕಾರಿಗಳಾದ ಎಂ.ಎನ್. ಶಿವಲಿಂಗ, ಜಯಕುಮಾರ್, ಚೆನ್ನಯ್ಯ, ಹೆಡ್‌ಕಾನ್ಸ್ಟೇಬಲ್‌ಗಳಾದ ಡಿಂಪಲ್, ಲೋಕೇಶ್, ಶಶಿಕುಮಾರ್, ಸೋಮಶೇಖರ್, ಉಷಾ, ಸಿಬ್ಬಂದಿಗಳಾದ ಸೊನಿ, ಮುರುಳಿ, ವಿನಯಕುಮಾರ್ ಲೋಕೇಶ್, ಸತೀಶ್, ಧನಂಜಯ ಪಾಲ್ಗೊಂಡಿದ್ದರು.