ಮಡಿಕೇರಿ, ಜು. ೬: ಕೊಡವ ಮಕ್ಕಡ ಕೂಟ ಪ್ರಕಟಿಸಿರುವ ಮೂರು ಪುಸ್ತಕಗಳನ್ನು ಇಲ್ಲಿನ ಪತ್ರಿಕಾ ಭವನ ದಲ್ಲಿ ಅನಾವರಣಗೊಳಿಸಲಾಯಿತು.
ನಟ, ನಿರ್ಮಾಪಕ, ನಿರ್ದೇಶಕ ಕೊಟ್ಟುಕತ್ತೀರ ಪ್ರಕಾಶ್ ಬರೆದಿರುವ ‘ಪೊಲಂದ ಬಾಳ್’ ಕೊಡವ ನಾಟಕ ಹಾಗೂ ‘ಪ್ರೇಮದ ಹಾದಿಯಲ್ಲಿ’ ಕನ್ನಡ ಕಾದಂಬರಿ, ಉಳುವಂಗಡ ಕಾವೇರಿ ಉದಯ ರಚಿತ ‘ಪಿಲ್ಗ್ರಿಮೇಜ್’ ಇಂಗ್ಲಿಷ್ ಪುಸ್ತಕಗಳು ಲೋಕಾರ್ಪಣೆಗೊಂಡವು.
‘ಪೊಲಂದ ಬಾಳ್’ ಪುಸ್ತಕವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಚೆಕ್ಕೇರ ದರ್ಶನ್ ಪ್ರಮೋದ್, ತಮ್ಮ ಯೋಚನ ಶಕ್ತಿಯನ್ನು ಪುಸ್ತಕಗಳ ಮೂಲಕ ಅಭಿವ್ಯಕ್ತಪಡಿಸಬಹುದು. ಪುಸ್ತಕಗಳು ವ್ಯಕ್ತಿತ್ವ ಬದಲಾವಣೆಗೆ ಸಹಕಾರಿಯಾಗಿದೆ. ಕೊಡವ ಮಕ್ಕಡ ಕೂಟ ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಸಮಾಜವನ್ನು ಜಾಗೃತ ಗೊಳಿಸುತ್ತಿರುವುದು ಶ್ಲಾಘನೀಯ ಎಂದರು.
‘ಪ್ರೇಮದ ಹಾದಿಯಲ್ಲಿ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಕೊಡವ ಸಾಹಿತ್ಯ ಅಕಾಡೆಮಿ ರಿಜಿಸ್ಟಾçರ್ ಅಜ್ಜಿಕುಟ್ಟೀರ ಗಿರೀಶ್, ಪುಸ್ತಕಗಳು ಸಮಾಜಕ್ಕೆ ದಾರಿದೀಪ ವಾಗಿವೆ. ಸಮಾಜದ ಅಂಕು-ಡೊAಕನ್ನು ತಿದ್ದುವ ಶಕ್ತಿ ಪುಸ್ತಕ ಗಳಿಗಿವೆ. ಪುಸ್ತಕಗಳ ರಚನೆಯಿಂದ ಭಾಷೆಯ ಅಭಿವೃದ್ಧಿ ಕೂಡ ಸಾಧ್ಯ ಎಂದ ಅವರು, ಯುವಜನತೆಯನ್ನು ಸಂಘಟಿಸುವ ಮೂಲಕ ಕೊಡವ ಮಕ್ಕಡ ಕೂಟ ಮಾದರಿ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ‘ಪಿಲ್ಗ್ರಿಮೇಜ್’ ಪುಸ್ತಕ ಅನಾವರಣ ಮಾಡಿ ಮಾತನಾಡಿದ ಮಡಿಕೇರಿ ಫೀ.ಮಾ. ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಚೌರಿರ ಡಾ. ಜಗತ್ ತಿಮ್ಮಯ್ಯ, ಪುಸ್ತಗಳನ್ನು ಓದಿ ಅರ್ಥೈಸಿಕೊಂಡರೆ ಜ್ಞಾನ ವೃದ್ಧಿಯೊಂದಿಗೆ ವ್ಯಕ್ತಿತ್ವ ವಿಕಸನ ಸಾಧ್ಯ. ಸಂಘಟನೆ ಪ್ರಯೋಗಾಶೀಲ ಕೆಲಸ ಮಾಡುತ್ತಿದೆ. ಪುಸ್ತಕಗಳ ಮೂಲಕ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸ ಸಂಘಟನೆ ಮಾಡುತ್ತಿದೆ ಎಂದರು.
ಸಾಹಿತಿ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಮಾತನಾಡಿ, ತನ್ನ ಐದು ಪುಸ್ತಕಗಳು ಈಗಾಗಲೇ ಪ್ರಕಟಗೊಂಡಿವೆ. ಪ್ರೇಮದ ಹಾದಿ ಹಾಗೂ ‘ಪೊಲಂದ ಬಾಳ್’ ೭ನೇ ಪುಸ್ತಕವಾಗಿದೆ. ಈ ಬಾರಿ ನಾಟಕ ಶೈಲಿಯಲ್ಲಿ ಪುಸ್ತಕವನ್ನು ಪ್ರಕಟಿಸಿದ್ದು, ಮೊಬೈಲ್ ಗೀಳಿನಿಂದ ಆಗುತ್ತಿರುವ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲಲಾಗಿದೆ ಎಂದು ಮಾಹಿತಿ ನೀಡಿದರು.
ಸಾಹಿತಿ ಉಳುವಂಗಡ ಕಾವೇರಿ ಉದಯ ಮಾತನಾಡಿ, ಕೊಡಗಿನ ಐತಿಹಾಸಿಕ ದೇವಾಲಯಗಳ ಇತಿಹಾಸವನ್ನು ಕ್ರೋಢಿಕರಿಸಿ ಪುಸ್ತಕ ರೂಪ ನೀಡಿದ್ದೇನೆ. ೨೫ ದೇವಾಲಯಗಳನ್ನು ಪರಿಚಯಿಸುವ ಕೆಲಸ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ದೇವಾಲಯಗಳ ಇತಿಹಾಸವನ್ನು ಸಂಗ್ರಹಿಸಿ ೨ನೇ ಭಾಗದ ಪುಸ್ತಕ ರಚಿಸಲಾಗುವುದು. ಇದು ತನ್ನ ೨೩ನೇ ಪುಸ್ತಕ ಎಂದು ಹೇಳಿದರು.
ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಮಾತನಾಡಿ, ಕೊಡವ ಭಾಷೆ, ಸಂಸ್ಕೃತಿ ಉಳಿವಿಗೆ ಸಂಘಟನೆ ಶ್ರಮಿಸುತ್ತಿದೆ. ಒಟ್ಟು ೫೭ ಪುಸ್ತಕಗಳನ್ನು ಹೊರತರುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಸೇವೆ ಮಾಡುತ್ತಿದೆ. ಸಾಹಿತ್ಯ ಅಭಿರುಚಿ, ಸಂಸ್ಕೃತಿಯ ಬಗ್ಗೆ ಪರಿಚಯಿಸುವ ಹತ್ತುಹಲವು ಕಾರ್ಯಕ್ರಮಗಳನ್ನು ಮಾಡಲಾಗು ತ್ತಿದೆ. ದಾನಿಗಳ ಸಹಕಾರದಿಂದ ಪುಸ್ತಕ ಹೊರತರಲಾಗುತ್ತಿದ್ದು, ಎಲ್ಲರ ಸಹಕಾರ ಬೇಕಾಗಿದೆ ಎಂದು ಮನವಿ ಮಾಡಿದರು.