ಮಡಿಕೇರಿ, ಜು. ೬: ಕೊಡಗು ಜಿಲ್ಲೆಯಾದ್ಯಂತ ಮಳೆಯ ರಭಸ ಮುಂದುವರಿದಿದೆ. ತಾ. ೬ ರಿಂದ ಪುನರ್ವಸು ಮಳೆ ಆರಂಭವಾ ಗುವುದರೊಂದಿಗೆ ಪ್ರಸಕ್ತ ಸಾಲಿನಲ್ಲಿ ಮಳೆಯ ಪ್ರಮಾಣ ಕಳೆದ ವರ್ಷದ ಮಳೆಯ ಪ್ರಮಾಣದ ಗಡಿಯನ್ನು ದಾಟಿದಂತಾಗಿದೆ.ಪ್ರಸ್ತುತ ಜನವರಿ ಆರಂಭದಿAದ ಈ ತನಕ ಜಿಲ್ಲೆಯಲ್ಲಿ ಸರಾಸರಿ ೪೦.೯೯ ಇಂಚು ಮಳೆಯಾಗಿದೆ. ಕಳೆದ ಸಾಲಿನಲ್ಲಿ ಈ ಅವಧಿಯಲ್ಲಿ ಮಳೆಯ ಪ್ರಮಾಣ ೩೮.೦೬ ಇಂಚಿನಷ್ಟಾಗಿತ್ತು.
ಮಡಿಕೇರಿ ತಾಲೂಕಿನಲ್ಲಿಯೂ ಪ್ರಸಕ್ತ ವರ್ಷ ಮಳೆ ಹೆಚ್ಚಾಗಿದೆ. ತಾಲೂಕಿನಲ್ಲಿ ಕಳೆದ ಬಾರಿ ಈತನಕ ೫೫.೯೮ ಇಂಚು ಮಳೆಯಾಗಿದ್ದರೆ, ಪ್ರಸಕ್ತ ಸಾಲಿನಲ್ಲಿ ೬೦.೪೩ ಇಂಚು ಮಳೆ ಬಿದ್ದಿದೆ.
ವೀರಾಜಪೇಟೆ ತಾಲೂಕಿನಲ್ಲಿ ಕಳೆದ ಬಾರಿ
(ಮೊದಲ ಪುಟದಿಂದ) ೩೩.೦೯ ಇಂಚು ಮಳೆಯಾಗಿತ್ತು. ಈ ಬಾರಿ ತಾಲೂಕಿನಲ್ಲಿ ಇಷ್ಟೇ ಪ್ರಮಾಣದಲ್ಲಿ ಮಳೆಯಾಗಿದೆ. ಸೋಮವಾರಪೇಟೆ ತಾಲೂಕಿನಲ್ಲೂ ಮಳೆ ಕಳೆದ ವರ್ಷದ ಗಡಿ ದಾಟಿದೆ. ತಾಲೂಕಿನಲ್ಲಿ ಜನವರಿಯಿಂದ ಈ ತನಕ ೨೯.೪೫ ಇಂಚು ಮಳೆಯಾಗಿದೆ. ಕಳೆದ ವರ್ಷ ಈ ಪ್ರಮಾಣ ೨೫.೧೧ ಇಂಚಿನಷ್ಟಾಗಿತ್ತು.
ಕಳೆದ ೨೪ ಗಂಟೆಗಳ ಅವಧಿಯಲ್ಲಿ ಮಡಿಕೇರಿ ತಾಲೂಕಿನಲ್ಲಿ ೩.೯೩ ಇಂಚು, ವೀರಾಜಪೇಟೆಯಲ್ಲಿ ೧.೯೪ ಹಾಗೂ ಸೋಮವಾರಪೇಟೆ ೨.೨೮ ಇಂಚು ಮಳೆಯಾಗಿದೆ.
ಹೋಬಳಿವಾರು: ಕಳೆದ ೨೪ ಗಂಟೆಗಳ ಅವಧಿಯಲ್ಲಿ ಭಾಗಮಂಡಲ ಹೋಬಳಿಯಲ್ಲಿ ೫.೭೩, ಸಂಪಾಜೆ ೪.೨೬, ನಾಪೋಕ್ಲು ೨.೭೧, ಮಡಿಕೇರಿಗೆ ೩ ಇಂಚು ಮಳೆಯಾಗಿದೆ. ವೀರಾಜಪೇಟೆ ಹೋಬಳಿಯಲ್ಲಿ ೨.೩೨, ಹುದಿಕೇರಿ ೨.೮೩, ಶ್ರೀಮಂಗಲ ೨.೩೦, ಪೊನ್ನಂಪೇಟೆ ೧.೫೨, ಅಮ್ಮತ್ತಿ ೨, ಬಾಳೆಲೆ ೦.೭೨ ಇಂಚು ಮಳೆಯಾಗಿದೆ. ಸೋಮವಾರಪೇಟೆ ಹೋಬಳಿಯಲ್ಲಿ ೧.೮೦, ಶನಿವಾರಸಂತೆ ೧.೭೪, ಶಾಂತಳ್ಳಿ ೫.೨೮, ಕೊಡ್ಲಿಪೇಟೆ ೨.೧೦, ಸುಂಟಿಕೊಪ್ಪ ೨.೧೨, ಕುಶಾಲನಗರ ಹೋಬಳಿಯಲ್ಲಿ ೦.೬೪ ಇಂಚು ಮಳೆಯಾಗಿದೆ.
ಹಾರಂಗಿ ವ್ಯಾಪ್ತಿಯಲ್ಲಿ ೦.೯೨ ಇಂಚು ಮಳೆಯಾಗಿದೆ. ಜಲಾಶಯಕ್ಕೆ ೧೨,೬೪೪ ಕ್ಯೂಸೆಕ್ಸ್ ಒಳ ಹರಿವು ಇದ್ದು, ನದಿಗೆ ೧೧,೯೪೦ ಕ್ಯೂಸೆಕ್ಸ್ ಹಾಗೂ ನಾಲೆಗೆ ೨೦ ಕ್ಯೂಸೆಕ್ಸ್ ನೀರು ಹರಿಯಬಿಡಲಾಗುತ್ತಿದೆ.ನಾಪೋಕ್ಲು: ಹೋಬಳಿ ವ್ಯಾಪ್ತಿಯಲ್ಲಿ ಮಳೆ ಬಿರುಸಿನಿಂದ ಸುರಿಯುತ್ತಿದ್ದು, ಜೀವ ನದಿ ಕಾವೇರಿ ಪ್ರವಾಹ ತುಂಬಿ ಬಹುತೇಕ ಕಡೆ ಹಳ್ಳ ಕೊಳ್ಳಗಳು ಭರ್ತಿಯಾಗಿವೆ. ನಾಪೋಕ್ಲು - ಮೂರ್ನಾಡು ಸಂಪರ್ಕ ರಸ್ತೆಯ ಬೊಳಿಬಾಣೆ ಎಂಬಲ್ಲಿ ರಸ್ತೆಯ ಮೇಲೆ ಕಾವೇರಿ ಪ್ರವಾಹದ ನೀರು ಹರಿಯುತ್ತಿದ್ದು, ಲಘು ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ. ಮಳೆ ಬಿರುಸುಗೊಂಡಲ್ಲಿ ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ. ಚೆರಿಯಪರಂಬು - ಕಲ್ಲುಮೊಟ್ಟೆ ಸಂಪರ್ಕ ರಸ್ತೆಯು ಜಲಾವೃತವಾಗಿದ್ದು, ಸಂಪರ್ಕ ಕಡಿದುಕೊಂಡಿದೆ. ಕಾವೇರಿ ನದಿತೀರದ ಹಲವು ಗದ್ದೆಗಳು ಜಲಾವೃತವಾಗಿವೆ. ಎಮ್ಮೆಮಾಡು, ಬೇತು, ಪಾರಾಣೆ, ನಾಪೋಕ್ಲು, ಬೊಳಿಬಾಣೆ, ಕಕ್ಕಬ್ಬೆ, ಬಲ್ಲಮಾವಟಿ, ಎಮ್ಮೆಮಾಡು, ಭಾಗಮಂಡಲ, ಬೆಟ್ಟಗೇರಿ, ಪಾಲೂರು ಗ್ರಾಮದಲ್ಲಿಯ ಗದ್ದೆಗಳಿಗೆ ನೀರು ನುಗ್ಗಿದ್ದು ಜಲಾವೃತವಾಗಿವೆೆ. ಕೂಡಿಗೆ: ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾವೇರಿ ನದಿ ತಟದಲ್ಲಿ ಪ್ರವಾಹ ಸಾಧ್ಯತೆ ಇರುವ ಕುವೆಂಪು ಬಡಾವಣೆಯ ವಸತಿ ಬಡಾವಣೆಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಯಣ್ಣ, ಅಭಿವೃದ್ಧಿ ಅಧಿಕಾರಿ ಸುಮೇಶ್ ಸೇರಿದಂತೆ ಅಧಿಕಾರಿ ವರ್ಗದವರು ಹಾಜರಿದ್ದರು.ಸೋಮವಾರಪೇಟೆ: ಸೋಮವಾರಪೇಟೆ ತಾಲೂಕಿನಾದ್ಯಂತ ಪುನರ್ವಸು ಮಳೆಯ ಆರ್ಭಟ ಜೋರಾಗಿದೆ. ಬಿಟ್ಟೂ ಬಿಡದೆ ಮಳೆ ಸುರಿಯುತ್ತಿರುವುದರಿಂದ ವಾತಾವರಣ ಶೀತಮಯವಾಗಿದೆ.
ಗ್ರಾಮೀಣ ಭಾಗದ ರಸ್ತೆಗಳು ದುಸ್ಥಿತಿಗೆ ತಲುಪಿದ್ದು, ವಾಹನ ಸಂಚಾರ ದುಸ್ತರವಾಗುತ್ತಿದೆ. ಜನತೆ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಮಳೆಯೊಂದಿಗೆ ಗಾಳಿಯೂ ಬೀಸುತ್ತಿರುವುದರಿಂದ ಮರಗಳು ನೆಲಕ್ಕುರುಳುತ್ತಿವೆ. ಕುಶಾಲನಗರದಿಂದ ಪಟ್ಟಣಕ್ಕೆ ವಿದ್ಯುತ್ ಸರಬರಾಜು ಮಾಡುವ ಮಾರ್ಗದಲ್ಲಿ ಮರ ಬಿದ್ದಿದ್ದರಿಂದ ನಿನ್ನೆ ರಾತ್ರಿಯಿಂದ ಇಂದು ಬೆಳಗ್ಗಿನವರೆಗೂ ಸೋಮವಾರಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸ್ಥಗಿತಗೊಂಡಿತ್ತು.
ಸೆಸ್ಕ್ ಸಿಬ್ಬಂದಿಗಳು ಮರವನ್ನು ತೆರವುಗೊಳಿಸಿ, ವಿದ್ಯುತ್ ಮಾರ್ಗವನ್ನು ದುರಸ್ತಿಗೊಳಿಸಿದರು. ಗಾಳಿ ಮಳೆಗೆ ಬಸವನಕೊಪ್ಪ ಗ್ರಾಮದ ಮುಖ್ಯ ರಸ್ತೆಗೆ ಮರವೊಂದು ಅಡ್ಡಬಿದ್ದು, ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಕೋಟೆಯೂರು ಗ್ರಾಮಸ್ಥರು ಮರವನ್ನು ತೆರವಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಕಳೆದ ೨೪ ಗಂಟೆಗಳಲ್ಲಿ ಸೋಮವಾರಪೇಟೆ ಹೋಬಳಿ ವ್ಯಾಪ್ತಿಯಲ್ಲಿ ೪೫ ಮಿ.ಮೀ., ಕೊಡ್ಲಿಪೇಟೆಯಲ್ಲಿ ೫೨.೬, ಶನಿವಾರಸಂತೆ ೪೩.೬, ಶಾಂತಳ್ಳಿಗೆ ೧೩೨ ಮಿ.ಮೀ. ಮಳೆಯಾದ ಬಗ್ಗೆ ವರದಿಯಾಗಿದೆ.
ಸೋಮವಾರಪೇಟೆ: ಸೋಮವಾರಪೇಟೆ ತಾಲೂಕಿನಾದ್ಯಂತ ಪುನರ್ವಸು ಮಳೆಯ ಆರ್ಭಟ ಜೋರಾಗಿದೆ. ಬಿಟ್ಟೂ ಬಿಡದೆ ಮಳೆ ಸುರಿಯುತ್ತಿರುವುದರಿಂದ ವಾತಾವರಣ ಶೀತಮಯವಾಗಿದೆ.
ಗ್ರಾಮೀಣ ಭಾಗದ ರಸ್ತೆಗಳು ದುಸ್ಥಿತಿಗೆ ತಲುಪಿದ್ದು, ವಾಹನ ಸಂಚಾರ ದುಸ್ತರವಾಗುತ್ತಿದೆ. ಜನತೆ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಮಳೆಯೊಂದಿಗೆ ಗಾಳಿಯೂ ಬೀಸುತ್ತಿರುವುದರಿಂದ ಮರಗಳು ನೆಲಕ್ಕುರುಳುತ್ತಿವೆ. ಕುಶಾಲನಗರದಿಂದ ಪಟ್ಟಣಕ್ಕೆ ವಿದ್ಯುತ್ ಸರಬರಾಜು ಮಾಡುವ ಮಾರ್ಗದಲ್ಲಿ ಮರ ಬಿದ್ದಿದ್ದರಿಂದ ನಿನ್ನೆ ರಾತ್ರಿಯಿಂದ ಇಂದು ಬೆಳಗ್ಗಿನವರೆಗೂ ಸೋಮವಾರಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸ್ಥಗಿತಗೊಂಡಿತ್ತು.
ಸೆಸ್ಕ್ ಸಿಬ್ಬಂದಿಗಳು ಮರವನ್ನು ತೆರವುಗೊಳಿಸಿ, ವಿದ್ಯುತ್ ಮಾರ್ಗವನ್ನು ದುರಸ್ತಿಗೊಳಿಸಿದರು. ಗಾಳಿ ಮಳೆಗೆ ಬಸವನಕೊಪ್ಪ ಗ್ರಾಮದ ಮುಖ್ಯ ರಸ್ತೆಗೆ ಮರವೊಂದು ಅಡ್ಡಬಿದ್ದು, ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಕೋಟೆಯೂರು ಗ್ರಾಮಸ್ಥರು ಮರವನ್ನು ತೆರವಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಕಳೆದ ೨೪ ಗಂಟೆಗಳಲ್ಲಿ ಸೋಮವಾರಪೇಟೆ ಹೋಬಳಿ ವ್ಯಾಪ್ತಿಯಲ್ಲಿ ೪೫ ಮಿ.ಮೀ., ಕೊಡ್ಲಿಪೇಟೆಯಲ್ಲಿ ೫೨.೬, ಶನಿವಾರಸಂತೆ ೪೩.೬, ಶಾಂತಳ್ಳಿಗೆ ೧೩೨ ಮಿ.ಮೀ. ಮಳೆಯಾದ ಬಗ್ಗೆ ವರದಿಯಾಗಿದೆ.
ನಾಪೋಕ್ಲು: ಧಾರಾಕಾರ ಮಳೆಯ ನಡುವೆ ಅಲ್ಲಲ್ಲಿ ರೈತರು ಭತ್ತದ ಬಿತ್ತನೆ ಕಾರ್ಯವನ್ನು ಆರಂಭಿಸಿದ್ದಾರೆ. ಕಕ್ಕಬ್ಬೆ ಇಗ್ಗುತ್ತಪ್ಪ ದೇವಾಲಯದ ಬಳಿ ಅಮ್ಮಂಗೇರಿಯ ಕಣಿಯರ ನಾಣಯ್ಯ ಬುಧವಾರ ಭತ್ತದ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದರು. ಈ ಭಾಗದಲ್ಲಿ ೩೦ ದಿನಗಳ ಬಳಿಕ ಭತ್ತದ ನಾಟಿ ಕಾರ್ಯ ಆರಂಭವಾಗಲಿದೆ ಎಂದು ನಾಣಯ್ಯ ತಿಳಿಸಿದ್ದಾರೆ.ಕೂಡಿಗೆ: ಕೂಡಿಗೆ ಕೂಡುಮಂಗಳೂರು ಮತ್ತು ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾವೇರಿ ಮತ್ತು ಹಾರಂಗಿ ನದಿ ದಂಡೆ ವ್ಯಾಪ್ತಿಯ ನಿವಾಸಿಗಳಿಗೆ ಸುರಕ್ಷಿತವಾದ ಸ್ಥಳಕ್ಕೆ ತೆರಳಲು ಕಂದಾಯ ಇಲಾಖೆಯ ವತಿಯಿಂದ ನೋಟೀಸ್ ನೀಡಲಾಗುತ್ತಿದೆ.
ಕಾವೇರಿ ಮತ್ತು ಹಾರಂಗಿ ಜಲಾನಯನ ಪ್ರದೇಶಗಳಲ್ಲಿ ಹೆಚ್ಚು ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ನದಿಗಳಲ್ಲಿ ದಿನದಿಂದ ದಿನಕ್ಕೆ ನೀರು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ನದಿ ದಂಡೆಯ ತಗ್ಗು ಪ್ರದೇಶದಲ್ಲಿ ವಾಸಿಸುವ ಕುಟುಂಬದವರಿಗೆ ಎರಡನೇ ಬಾರಿ ಮುನ್ನೆಚ್ಚರಿಕೆಯಾಗಿ ನೋಟೀಸ್ ನೀಡಲಾಗುತ್ತಿದೆ.
ಮುಳ್ಳುಸೋಗೆ ಕೂಡುಮಂಗಳೂರು ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಗ್ಗು ಪ್ರದೇಶದ ನಿವಾಸಿಗಳಿಗೆ ಮೈಕ್ ಮೂಲಕ ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ ನೀಡಲಾಗುತ್ತಿದೆ.ಶನಿವಾರಸಂತೆ: ವಾರದಿಂದ ಶನಿವಾರಸಂತೆ, ಕೊಡ್ಲಿಪೇಟೆ ಹೋಬಳಿಯಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು, ಹೊಳೆ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಕಾಜೂರು, ಬಿಳಾಹ, ಹೆಮ್ಮನೆ ಹೊಳೆಗಳೂ ತುಂಬಿ ಕೃಷಿ ಚಟುವಟಿಕೆಯಲ್ಲಿರುವ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಪಟ್ಟಣವೂ ಸೇರಿದಂತೆ ಗುಡುಗಳಲೆ, ದುಂಡಳ್ಳಿ, ದೊಡ್ಡಬಿಳಾಹ, ಕಿರಿಬಿಳಾಹ, ಮಾದ್ರೆ, ಕಾಜೂರು, ಕೂಜಗೇರಿ, ಹಂಡ್ಲಿ, ಗೋಪಾಲಪುರ, ಎಳನೀರುಗುಂಡಿ, ಗೌಡಳ್ಳಿ, ಶಿವರಳ್ಳಿ, ಬ್ಯಾಡಗೊಟ್ಟ, ಕೊಡ್ಲಿಪೇಟೆ, ಬೆಸೂರು ಗ್ರಾಮಗಳಲ್ಲಿ ನಿರಂತರ ಮಳೆಯಾಗುತ್ತಿದೆ. ಅಲ್ಲಲ್ಲಿ ಗಾಳಿ-ಮಳೆಗೆ ಮರಗಳು ನೆಲಕಚ್ಚುತ್ತಿವೆ. ಕೆಲವೆಡೆ ಚರಂಡಿ, ರಸ್ತೆ ವ್ಯವಸ್ಥೆ ಸರಿಯಿಲ್ಲದೆ ಮಳೆ ನೀರು ರಸ್ತೆಯಲ್ಲಿ ಹರಿದು ಸಂಚಾರ ಅಸ್ತವ್ಯಸ್ತಗೊಳ್ಳುತ್ತಿದೆ. ಮಳೆಯ ರಭಸಕ್ಕಿಂತಲೂ ಶೀತಗಾಳಿ ಹಾಗೂ ಚಳಿಗೆ ಅಂಜಿ ಕೆಲವೆಡೆ ಕಾಫಿ ತೋಟಗಳಲ್ಲಿ ಕಾರ್ಮಿಕರು ಕೆಲಸಕ್ಕೆ ಹಾಜರಾಗುತ್ತಿಲ್ಲ.ಸೋಮವಾರಪೇಟೆ: ತಾಲೂಕಿನ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಳಿಗಳಲೆ ಕಾಲೋನಿಯಲ್ಲಿ ನಿನ್ನೆ ದಿನ ಸುರಿದ ಮಳೆಗೆ ಜಖಂಗೊAಡ ವಾಸದ ಮನೆಯನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಪರಿಶೀಲಿಸಿದರು.
ನಿನ್ನೆ ಸುರಿದ ಮಳೆಗೆ ಸುಳುಗಳಲೆಯ ನಿವಾಸಿ ವಸಂತಮ್ಮ ಎಂಬವರಿಗೆ ಸೇರಿದ ಮನೆ ಸಂಪೂರ್ಣ ಜಖಂಗೊAಡಿದ್ದು, ಈ ಸಂದರ್ಭ ಮನೆಯೊಳಗಿದ್ದ ವಸಂತಮ್ಮ ಅವರ ಕಾಲು, ಮುಖದ ಭಾಗಕ್ಕೆ ಪೆಟ್ಟಾಗಿವೆ. ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ಸಾಗಿಸಲಾಗಿದೆ.
ಗಾಯಾಳುವಿನ ಚಿಕಿತ್ಸಾ ವೆಚ್ಚವನ್ನು ಸರ್ಕಾರದಿಂದ ಭರಿಸಲಾಗುವುದು. ಮನೆಯ ದಾಖಲೆಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. ಪ್ರಾಕೃತಿಕ ವಿಕೋಪಗಳು ಉಂಟಾದರೆ ಎನ್.ಡಿ.ಆರ್.ಎಫ್. ಹಾಗೂ ಎಸ್.ಡಿ.ಆರ್.ಎಫ್. ಯೋಜನೆಯ ಮುಖಾಂತರ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದ ರಂಜನ್, ಮಳೆ ಹೆಚ್ಚಾಗುತ್ತಿದ್ದು ಸಾರ್ವಜನಿಕರು ಅತ್ಯಂತ ಎಚ್ಚರಿಕೆಯಲ್ಲಿರಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭ ತಾಲೂಕು ತಹಶೀಲ್ದಾರ್ ಗೋವಿಂದರಾಜು, ಸಮಾಜ ಕಲ್ಯಾಣಾಧಿಕಾರಿ ಬಾಲಕೃಷ್ಣ ರೈ, ಕಂದಾಯ ನಿರೀಕ್ಷಕ ಮಂಜುನಾಥ್, ಗ್ರಾಮ ಸಹಾಯಕ ಸಂತೋಷ್ ಸೇರಿದಂತೆ ಇತರರು ಉಪಸ್ಥಿತರಿದ್ದರು.ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ಬೆಟ್ಟಗೇರಿಯಲ್ಲಿ ಕಾವೇರಿ ನದಿ ನೀರು ಗದ್ದೆಗಳಿಗೆ ನುಗ್ಗಿದೆ. ಗದ್ದೆಯ ಮೇಲ್ಭಾಗದಲ್ಲಿ ಜೋಳ ಕೃಷಿ ಮಾಡಿದ್ದು, ಮಳೆ ಹೆಚ್ಚಾದಲ್ಲಿ ಮುಸುಕಿನ ಜೋಳದ ಬೆಳೆ ನೀರಿನಲ್ಲಿ ಮುಳುಗುವ ಸಾಧ್ಯತೆಯಿದೆ. ಈ ಭಾಗದಲ್ಲಿ ಮಧ್ಯಾಹ್ನದ ತನಕ ಮಳೆ ಬಿಡುವು ಕೊಟ್ಟಿತ್ತು. ಮಧ್ಯಾಹ್ನದ ನಂತರ ನಿರಂತರ ಮಳೆಯಾಗುತ್ತಿದೆ.
ಕಾವೇರಿ ನದಿಯ ನೀರಿನ ಹರಿವು ಕೊಂಚ ಜಾಸ್ತಿಯಾಗಿದೆ. ಭಾಗಮಂಡಲ ವ್ಯಾಪ್ತಿಯಲ್ಲಿ ಮಳೆ ಹೆಚ್ಚಾದಲ್ಲಿ ಮತ್ತೆ ನೀರಿನ ಹರಿವು ಹೆಚ್ಚಾಗಲಿದೆ.
ಸೋಮವಾರಪೇಟೆ: ಮಡಿಕೇರಿ-ಸೋಮವಾರಪೇಟೆ ರಾಜ್ಯ ಹೆದ್ದಾರಿಯ ಹಾಲೇರಿ ಬಳಿಯಲ್ಲಿ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರವನ್ನು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ತೆರವುಗೊಳಿಸುವ ಮೂಲಕ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿದರು.
ಇಂದು ಬೆಳಿಗ್ಗೆ ತಮ್ಮ ನಿವಾಸದಿಂದ ಮಡಿಕೇರಿಗೆ ಹೊರಟಿದ್ದ ಶಾಸಕರು, ಹಾಲೇರಿ ಬಳಿ ತೆರಳುತ್ತಿದ್ದಂತೆ ರಸ್ತೆಗೆ ಮರವೊಂದು ಅಡ್ಡಲಾಗಿ ಬಿದ್ದಿತ್ತು. ಇದರಿಂದಾಗಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ತಕ್ಷಣ ತಮ್ಮ ಕಾರಿನಿಂದ ಇಳಿದ ಶಾಸಕರು ಸ್ಥಳೀಯರೊಂದಿಗೆ ಸೇರಿ ಮರವನ್ನು ತುಂಡರಿಸಿ ರಸ್ತೆಯ ಬದಿಗೆ ಹಾಕುವ ಮೂಲಕ ಸಾರ್ವಜನಿಕ ವಾಹನಗಳ ಓಡಾಟಕ್ಕೆ ಸಹಕಾರ ನೀಡಿದರು.
ಶಾಸಕರ ಈ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೇ, ಕಳೆದ ೨೦೧೮ರಲ್ಲಿ ಹಾಲೇರಿಯಲ್ಲಿ ಉಂಟಾದ ಭೂಕುಸಿತ ಹಾಗೂ ಪ್ರವಾಹ ಸಂದರ್ಭ ತಮ್ಮ ನೆರವಿಗೆ ಧಾವಿಸಿದ್ದನ್ನು ಶಾಸಕರೆದುರು ಸ್ಮರಿಸಿಕೊಂಡರು.ನಾಪೋಕ್ಲು: ಎಮ್ಮೆಮಾಡು ಗ್ರಾಮದ ಕಂಬೇರ ಆಲಿ ಎಂಬವರ ವಾಸದ ಮನೆಯ ಪಕ್ಕ ಬರೆ ಕುಸಿದಿದೆ. ಕಟ್ಟಡಕ್ಕೆ ಹಾನಿಯಾಗುವ ಸಂಭವವಿರುವುದರಿAದ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಮನೆ ಮಾಲೀಕರಿಗೆ ತಡೆಗೋಡೆ ನಿರ್ಮಿಸುವಂತೆ ಸಲಹೆ ನೀಡಿದ್ದಾರೆ. ಸ್ಥಳಕ್ಕೆ ಕಂದಾಯ ಅಧಿಕಾರಿ ರವಿಕುಮಾರ್, ಗ್ರಾಮಲೆಕ್ಕಿಗ ಹರೀಶ್ಕುಮಾರ್, ಸಿಬ್ಬಂದಿ ಸೋಮಯ್ಯ ಭೇಟಿ ನೀಡಿ ಪರಿಶೀಲನೆ ಮಾಡಿದರು. ಕೂಡಿಗೆ: ಸೀಗೆಹೊಸೂರು ಗ್ರಾಮದ ಮಲ್ಲಿಗೆ ಎಂಬವರಿಗೆ ಸೇರಿದ ವಾಸದ ಮನೆಯ ಗೋಡೆ ಗಾಳಿ ಮಳೆಯಿಂದಾಗಿ ಕುಸಿದಿದ್ದು, ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ಕೂಡಿಗೆ ಗ್ರಾಮ ಪಂಚಾಯಿತಿ ಸೀಗೆಹೊಸೂರು ವಿಭಾಗದ ಸದಸ್ಯ ಅನಂತ್ ಚಂದ್ರು ಗ್ರಾಮ ಲೆಕ್ಕಾಧಿಕಾರಿ ಗುರುದರ್ಶನ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರ ನೀಡುವ ಬರವಸೆ ನೀಡಿದ್ದಾರೆ.