ವೀರಾಜಪೇಟೆ, ಜು. ೬: ಸರ್ಕಾರದ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದ ಅಂಗಡಿ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.
ವೀರಾಜಪೇಟೆ ಕದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಮೇರಿ ನಾಲ್ಕನೇ ಮೈಲು ಗ್ರಾಮದ ನಿವಾಸಿ ರಾಜ (೫೨) ಅಕ್ರಮವಾಗಿ ಮದÀ್ಯ ಮಾರಾಟ ಮಾಡಿ ಬಂಧÀನವಾದ ವ್ಯಕ್ತಿ.
ಗ್ರಾಮದಲ್ಲಿ ಅಂಗಡಿ ಮತ್ತು ಕ್ಯಾಂಟಿನ್ ನಡೆಸುತ್ತಿದ್ದ ರಾಜ ಎಂಬವರು ಸರ್ಕಾರಿ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದಾಗಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಅಂಗಡಿಯಲ್ಲಿ ಮಾರಾಟಕ್ಕೆ ಸಿದ್ದವಾಗಿದ್ದ ೯೦ ಎಂ.ಎಲ್ನ ಒಟ್ಟು ೭೧ ಮದ್ಯದ ಪ್ಯಾಕೇಟ್ಗಳನ್ನು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದಿರುವ ಮದ್ಯದ ಬೆಲೆ ಒಟ್ಟು ೩೦೦೦ ರೂ. ಎಂದು ತಿಳಿದುಬಂದಿದೆ. ಬಂಧಿತನ ಮೇಲೆ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಅಬಕಾರಿ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.