ಪೊನ್ನಂಪೇಟೆ, ಜು. ೬: ಪೊನ್ನಂಪೇಟೆಯ ೪ನೇ ವಿಭಾಗದ ಶಿವಕಾಲೋನಿಯಲ್ಲಿ ಗ್ಯಾಂಗ್ರಿನ್‌ಗೆ ಒಳಗಾಗಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಹೆಚ್.ಹೆಚ್. ಮಲ್ಲೇಶ್ ಎಂಬವರ ಮನೆಗೆ ತೆರಳಿ ಅವರ ಆರೋಗ್ಯ ವಿಚಾರಿಸಿದ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ, ಮಲ್ಲೇಶ್ ಅವರ ಚಿಕಿತ್ಸೆಗೆ ಧನ ಸಹಾಯ ಮಾಡಿದರು. ಪೊನ್ನಂಪೇಟೆ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ಕಾಂಗ್ರೆಸ್ ಪಕ್ಷದ ಮುಖಂಡರಾದ ಮತ್ರಂಡ ದಿಲ್ಲು, ಅಜ್ಜಿಕುಟ್ಟೀರ ಪೊನ್ನಪ್ಪ, ಶಾಜಿ ಅಚ್ಯುತನ್, ಗ್ರಾ.ಪಂ. ಸದಸ್ಯರಾದ ಅಣ್ಣೀರ ಹರೀಶ್, ಕರ್ತಮಾಡ ರಸಿಕ, ಕೋಳೆರ ಭಾರತಿ, ಜುನೈದ್, ಕರ್ನಾಟಕ ರೈತ ಕಾರ್ಮಿಕರ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷೆ ಮಂಜುಳ, ಜಗಜೀವನ್ ರಾಮ್ ಮಹಿಳಾ ಸಂಘದ ಅಧ್ಯಕ್ಷೆ ದೇವಮ್ಮ, ಇನ್ನಿತರರು ಹಾಜರಿದ್ದರು.