ಹೆಚ್.ಕೆ. ಜಗದೀಶ್ ಗೋಣಿಕೊಪ್ಪಲು, ಜು. ೪ : ತಲತಲಾಂತರಗಳಿAದ ತಮ್ಮ ಜೀವದ ಹಂಗು ತೊರೆದು ಮದವೇರಿ ಆರ್ಭಟ ತೋರುವ ಕಾಡಾನೆಗಳಿಗೆ ಅಂಕುಶ ಹಾಕುವ ಮಾವುತರ ಹಾಗೂ ಕಾವಾಡಿಗರ ಬದುಕು ಮಾತ್ರ ಇನ್ನೂ ಹಸನಾಗಿಲ್ಲ. ಸಾಮಾಜಿಕ ವಾಗಿ ಮುಖ್ಯವಾಹಿನಿಗೆ ಬಾರದ ಇವರುಗಳು ಆರ್ಥಿಕವಾಗಿಯೂ ಹಿಂದುಳಿದಿದ್ದಾರೆ. ಸಮಾನ ವೇತನ ಶ್ರೇಣಿಗಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಇವರ ಸಂಕಷ್ಟದ ಕತ್ತಲ ಬದುಕಿಗೆ ಸರಕಾರ ನೆರವಿನ ಬೆಳಕು ಬೇಕಾಗಿದೆ.ಕಾಡಿನಿಂದ ನಾಡಿಗೆ ಬಂದ ಕಾಡಾನೆ ಸಾರ್ವಜನಿಕರ ಮೇಲೆ ದಾಳಿ ಮಾಡಿದ ಮತ್ತು ಬೆಳೆ ನಷ್ಟ ಮಾಡುತ್ತಿರುವ ಅನೇಕ ಆನೆಗಳನ್ನು ಸಾಕಾನೆಗಳ ಸಹಾಯದ ಮುಖಾಂತರ ಮಾವುತ ಮತ್ತು ಕಾವಾಡಿಗರು ಕಾರ್ಯಾಚರಣೆ ಮಾಡಿ ಸೆರೆಹಿಡಿದು ನಂತರ ಶಿಬಿರಕ್ಕೆ ತಂದು ‘ಕ್ರಾಲ್’ನಲ್ಲಿ ಪಳಗಿಸುತ್ತಾರೆ. ದಿನನಿತ್ಯ ಇಂತಹ ಪಳಗಿಸಿದ ಆನೆಗಳೊಂದಿಗೆ ಬೆರೆತು ಕೆಲಸ ಮಾಡುವ ಇವರ ಬದುಕು ದುಸ್ತರವಾಗಿದೆ. ಇವರ ನ್ಯಾಯಯುತ ಬೇಡಿಕೆಗಳಿಗೆ ದಶಕಗಳಿಂದಲೂ ಸ್ಪಂದನ ದೊರೆತಿಲ್ಲ.
೯೩ ಆನೆ ಕಾವಾಡಿಗರು ಹಾಗೂ ೫೮ ಆನೆ ಮಾವುತರು ಕೊಡಗು ಸೇರಿದಂತೆ ವಿವಿಧ ಕಡೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ದೈತ್ಯ ಕಾಡಾನೆಗಳನ್ನು ಸೆರೆ ಹಿಡಿದು ಅದನ್ನು ನಂತರ ತನ್ನ ಭಾಷೆ ಹಾಗೂ ಕೈ ಸನ್ನೆಗಳ ಮೂಲಕ ಪಳಗಿಸಿ ಅವು ಗಳೊಂದಿಗೆ ಜೀವನ ಸಾಗಿಸುತ್ತಿರುವ ಮಾವುತರಿಗೆ ಹಾಗೂ ಕಾವಾಡಿಗರಿಗೆ ಅರಣ್ಯ ಇಲಾಖೆಯು ಕೇವಲ ದಿನಗೂಲಿ ರೀತಿಯ ವೇತನ ನೀಡುತ್ತಿದೆ. ಪರಿಣಾಮ ಸಿಬ್ಬಂದಿಗಳು ಉದ್ಯೋಗ ಭದ್ರತೆ ಇಲ್ಲದೆ ಅತಂತ್ರರಾಗಿದ್ದಾರೆ. ವರ್ಷಕ್ಕೊಮ್ಮೆ ವಿಶ್ವವಿಖ್ಯಾತ ಮೈಸೂರಿನ ದಸರಾ ಮಹೋತ್ಸವಕ್ಕೆ ತೆರಳಿದ ವೇಳೆ ಇವರ ವೇತನ ಪರಿಷ್ಕರಣೆ ಬಗ್ಗೆ ಭರವಸೆ ಸೇರಿದಂತೆ ವಿವಿಧ ಕಡೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ದೈತ್ಯ ಕಾಡಾನೆಗಳನ್ನು ಸೆರೆ ಹಿಡಿದು ಅದನ್ನು ನಂತರ ತನ್ನ ಭಾಷೆ ಹಾಗೂ ಕೈ ಸನ್ನೆಗಳ ಮೂಲಕ ಪಳಗಿಸಿ ಅವು ಗಳೊಂದಿಗೆ ಜೀವನ ಸಾಗಿಸುತ್ತಿರುವ ಮಾವುತರಿಗೆ ಹಾಗೂ ಕಾವಾಡಿಗರಿಗೆ ಅರಣ್ಯ ಇಲಾಖೆಯು ಕೇವಲ ದಿನಗೂಲಿ ರೀತಿಯ ವೇತನ ನೀಡುತ್ತಿದೆ. ಪರಿಣಾಮ ಸಿಬ್ಬಂದಿಗಳು ಉದ್ಯೋಗ ಭದ್ರತೆ ಇಲ್ಲದೆ ಅತಂತ್ರರಾಗಿದ್ದಾರೆ. ವರ್ಷಕ್ಕೊಮ್ಮೆ ವಿಶ್ವವಿಖ್ಯಾತ ಮೈಸೂರಿನ ದಸರಾ ಮಹೋತ್ಸವಕ್ಕೆ ತೆರಳಿದ ವೇಳೆ ಇವರ ವೇತನ ಪರಿಷ್ಕರಣೆ ಬಗ್ಗೆ ಭರವಸೆ (ಮೊದಲ ಪುಟದಿಂದ) ಕರ್ನಾಟಕ ರಾಜ್ಯ ಆನೆ ಮಾವುತ ಮತ್ತು ಕಾವಾಡಿಗರ ಸಂಘ ಸರಕಾರದ ಗಮನ ಸೆಳೆದಿದೆ. ಆದರೆ ಇಲ್ಲಿಯ ತನಕ ಇವರ ಪ್ರಮುಖ ಬೇಡಿಕೆ ಈಡೇರದೆ ಮೂಲೆಗುಂಪಾಗಿದೆ.
೨೦೨೦ ಮೇ ತಿಂಗಳಿನಲ್ಲಿ ಕರ್ನಾಟಕದ ಅಂದಿನ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ಆನೆ ಮಾವುತರಿಗೆ ಅರಣ್ಯ ರಕ್ಷಕರ ಸಮಾನ ವೇತನ ಹಾಗೂ ಆನೆ ಕಾವಾಡಿಗರಿಗೆ ವೀಕ್ಷಕರ ಸಮಾನ ವೇತನ ನೀಡಬೇಕೆಂದು ಪ್ರಕಟಿಸಿದ್ದರು. ಆದರೆ ಮುಖ್ಯಮಂತ್ರಿಗಳ ಭರವಸೆ ಕನಸಾಗಿಯೇ ಉಳಿದಿದೆ.
ಆನೆ ಮಾವುತರು ಹಾಗೂ ಕಾವಾಡಿಗರು ಬಹುತೇಕ ಅವಿದ್ಯಾವಂತರಾಗಿದ್ದಾರೆ. ಆದರೆ ಆನೆಯನ್ನು ಪಳಗಿಸುವಲ್ಲಿ ಇವರ ಧೈರ್ಯ ಸಾಮಾನ್ಯವಾದದ್ದಲ್ಲ. ಅತ್ಯಂತ ಕ್ಲಿಷ್ಟಕರ ಸನ್ನಿವೇಶದ ನಡುವೆ ಇವುಗಳನ್ನು ಪಳಗಿಸಿ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಪಾರಂಪಾರಿಕವಾಗಿ ಕೆಲಸ ಮಾಡುವ ಇವರ ಹುದ್ದೆಗಳನ್ನು ಖಾಯಂಗೊಳಿಸಬೇಕಾಗಿದೆ.
ಆನೆ ಕಾವಾಡಿಗರಾಗಿ ಬಹುತೇಕ ಆದಿವಾಸಿ ಜನಾಂಗ ಸೇವೆ ಸಲ್ಲಿಸುತ್ತಿದೆ. ತಮ್ಮ ಹಿರಿಯರ ಅನುಭವದ ಮೇಲೆ ಆನೆಗಳನ್ನು ಪಳಗಿಸುತ್ತ ಕುಲಕಸುಬು ರೀತಿಯಲ್ಲಿ ಜೀವದ ಹಂಗನ್ನು ತೊರೆದು ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ಸೇರಿದಂತೆ ವನ್ಯಜೀವಿ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗವಹಿಸುತ್ತಿದ್ದಾರೆ.
ಪ್ರಸ್ತುತ ಆನೆ ಕಾವಡಿಗರಿಗೆ ಕನಿಷ್ಟ ರೂ. ೧೭ ಸಾವಿರ ಗರಿಷ್ಠ ೨೮,೯೫೦ ರೂಪಾಯಿ ಇದ್ದು, ಇದನ್ನು ರೂ. ೨೧,೪೦೦ ರಿಂದ ರೂ.೪೨ ಸಾವಿರಕ್ಕೆ, ಮಾವುತರಿಗೆ ಪ್ರಸ್ತುತ ಕನಿಷ್ಟ ರೂ. ೧೮,೬೦೦ ರಿಂದ ಗರಿಷ್ಟ ೩೨,೬೦೦ರ ತನಕ ವೇತನವಿದೆ. ಇದನ್ನು ರೂ.೨೩,೫೦೦ ಹಾಗೂ ೪೭,೬೫೦ಕ್ಕೆ ಏರಿಸುವಂತೆ ಇವುಗಳನ್ನು ಪಳಗಿಸಿ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಪಾರಂಪಾರಿಕವಾಗಿ ಕೆಲಸ ಮಾಡುವ ಇವರ ಹುದ್ದೆಗಳನ್ನು ಖಾಯಂಗೊಳಿಸಬೇಕಾಗಿದೆ.
ಆನೆ ಕಾವಾಡಿಗರಾಗಿ ಬಹುತೇಕ ಆದಿವಾಸಿ ಜನಾಂಗ ಸೇವೆ ಸಲ್ಲಿಸುತ್ತಿದೆ. ತಮ್ಮ ಹಿರಿಯರ ಅನುಭವದ ಮೇಲೆ ಆನೆಗಳನ್ನು ಪಳಗಿಸುತ್ತ ಕುಲಕಸುಬು ರೀತಿಯಲ್ಲಿ ಜೀವದ ಹಂಗನ್ನು ತೊರೆದು ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ಸೇರಿದಂತೆ ವನ್ಯಜೀವಿ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗವಹಿಸುತ್ತಿದ್ದಾರೆ.
ಪ್ರಸ್ತುತ ಆನೆ ಕಾವಡಿಗರಿಗೆ ಕನಿಷ್ಟ ರೂ. ೧೭ ಸಾವಿರ ಗರಿಷ್ಠ ೨೮,೯೫೦ ರೂಪಾಯಿ ಇದ್ದು, ಇದನ್ನು ರೂ. ೨೧,೪೦೦ ರಿಂದ ರೂ.೪೨ ಸಾವಿರಕ್ಕೆ, ಮಾವುತರಿಗೆ ಪ್ರಸ್ತುತ ಕನಿಷ್ಟ ರೂ. ೧೮,೬೦೦ ರಿಂದ ಗರಿಷ್ಟ ೩೨,೬೦೦ರ ತನಕ ವೇತನವಿದೆ. ಇದನ್ನು ರೂ.೨೩,೫೦೦ ಹಾಗೂ ೪೭,೬೫೦ಕ್ಕೆ ಏರಿಸುವಂತೆ ಇಲಾಖೆ ಹಾಗೂ ಸರಕಾರ ಯೋಜನೆ ರೂಪಿಸಬೇಕಾಗಿದೆ.
ಆನೆ ಮಾವುತ ಹಾಗೂ ಕಾವಾಡಿಗರನ್ನು ಕೇವಲ ಸಾಕಾನೆಗಳ ನಿರ್ವಹಣೆಗಷ್ಟೆ ಅಲ್ಲದೆ ಅನಿವಾರ್ಯ ಮತ್ತು ತುರ್ತು ಸಂದರ್ಭದಲ್ಲಿ ರಕ್ಷಣೆ ಮತ್ತು ಬೆಂಕಿ ನಿಯಂತ್ರಣ, ಮಾನವ ಪ್ರಾಣಿ ಸಂಘರ್ಷ ಮತ್ತು ಇತರೆ ಕೆಲಸಗಳಲ್ಲಿಯೂ ತೊಡಗಿಸಿ ಕೊಳ್ಳುತ್ತಾರೆ. ಕೆಲವೊಂದು ಸಂದರ್ಭ ಗಳಲ್ಲಿ ಅರಣ್ಯ ರಕ್ಷಕರಾಗಿಯೂ ಹಾಗೂ ಅರಣ್ಯ ವೀಕ್ಷಕರಾಗಿಯೂ ಕೆಲಸ ನಿರ್ವಹಿಸಿದ್ದಾರೆ. ಸರ್ಕಾರ ಕೂಡಲೇ ಇವರ ಹಲವು ದಶಕಗಳ ಬೇಡಿಕೆಗಳನ್ನು ಈಡೇರಿಸಿ ಖಾಯಂ ವೇತನ ನಿಗದಿಪಡಿಸಲಿದೆಯೇ ಕಾದು ನೋಡಬೇಕಿದೆ.