ಸುಂಟಿಕೊಪ್ಪ, ಜು. ೪: ಸಮೀಪದ ಮಾದಾಪುರದ ಡಿ. ಚೆನ್ನಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ಬೆಂಗಳೂರಿನ ಯುವ ನಿಯೋಗ ಹಾಗೂ ಮೈಸೂರಿನ ವೈಟ್ ಫೆದರ್ ಟ್ರಸ್ಟ್ ವತಿಯಿಂದ ಸುಂಟಿಕೊಪ್ಪದ ಜೆಸಿಐ ಘಟಕದ ಸಹಕಾರದೊಂದಿಗೆ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ, ಸೇವೆ, ದಾನ, ಧ್ಯಾನ, ಯೋಗ, ಯೋಗದ ಮುದ್ರೆಗಳ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಯುವ ನಿಯೋಗದ ಮುಖ್ಯಸ್ಥ ಎಸ್.ಎಂ. ಕಿರಣ್ ಮಾತನಾಡಿ, ಇಂದಿನ ಸಾಮಾಜಿಕ ಬೆಳವಣಿಗೆಯಲ್ಲಿ ಯುವಕರ ಪಾತ್ರ ಬಹಳ ಮುಖ್ಯ. ನಾವು ಮನುಷ್ಯರಾಗಿ ಜನಿಸಿದ ಮೇಲೆ ತಂದೆ-ತಾಯಿಗೆ ಮತ್ತು ತಾಯ್ನಾಡಿಗೆ ಋಣಿಯಾಗಿರಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಉಪಪ್ರಾಂಶು ಪಾಲ ರಾಜಸುಂದರಮ್ ಮಾತನಾಡಿದರು. ಅತಿಥಿಗಳಾಗಿ ಸ್ವಸ್ಥ ಶಾಲೆಯ ಸಿ.ಬಿ.ಆರ್. ಸಂಯೋಜಕ ಮುರುಗೇಶ್ ಪಾಲ್ಗೊಂಡಿದ್ದರು.

ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಾಲಕೃಷ್ಣ, ಸುಂಟಿಕೊಪ್ಪ ಜೆಸಿಐ ಘಟಕದ ಅಧ್ಯಕ್ಷ ಸತೀಶ್‌ಕುಮಾರ್, ಜೆಸಿ. ಡಿನ್ನಿಸ್ ಡಿಸೋಜ, ಚೆನ್ನಮ್ಮ ಕಾಲೇಜಿನ ಉಪನ್ಯಾಸಕರಾದ ಮನೋಹರ್, ಮೋಹನ ಹೆಗಡೆ, ಅಶ್ವಿನಿ, ಬಸವರಾಜು ಹಾಜರಿದ್ದರು.