ಚೆಟ್ಟಳ್ಳಿ, ಜು. ೪: ಪ್ರತೀ ವರ್ಷ ಫುಟ್ಬಾಲ್ ನಿಯಮಗಳಲ್ಲಿ ಬದಲಾವಣೆ ಗಳಾಗುತ್ತಿದ್ದು, ಬದಲಾದ ನಿಮಯ ಗಳಿಗೆ ಅನುಸಾರವಾಗಿ ಫುಟ್ಬಾಲ್ ಆಟಗಾರರು ಆಡಬೇಕೆಂದು ಭಾರತ ಫುಟ್ಬಾಲ್ ತಂಡದ ಮಾಜಿ ಫುಟ್ಬಾಲ್ ಆಟಗಾರ ಬೆಪ್ಪುರನ ಅಣ್ಣಪ್ಪಕುಮಾರ್ ಕರೆ ನೀಡಿದರು.

ಅಮ್ಮತ್ತಿಯ ಪ್ರೌಢ ಶಾಲಾ ಮೈದಾನದಲ್ಲಿರುವ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಕಚೇರಿಯಲ್ಲಿ ನಡೆದ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್‌ನ ವಾರ್ಷಿಕ ಮಹಾಸಭೆ ರಾಜ್ಯ ಫುಟ್ಬಾಲ್ ಸಂಸ್ಥೆಯಿAದ ವಿಶೇಷ ಆಹ್ವಾನಿತರಾಗಿ ಆಗಮಿಸಿ ಮಾತನಾಡಿದರು.

ಪ್ರತಿ ವರ್ಷ ಅಂರ‍್ರಾಷ್ಟಿçÃಯ ಫುಟ್ಬಾಲ್ ಫೆಡರೇಶನ್ ಫುಟ್ಬಾಲ್ ಆಟದ ನಿಯಮಗಳಲ್ಲಿ ಬದಲಾವಣೆ ತರುತ್ತಿದೆ. ಫಿಫಾ ನಿಯಮದಂತೆ ಫುಟ್ಬಾಲ್ ತೀರ್ಪುಗಾರರು ಪಂದ್ಯಾಟ ವನ್ನು ನಡೆಸುತ್ತಾರೆ. ಆದರೆ ಗ್ರಾಮೀಣ ಭಾಗದ ಆಟಗಾರರು ಇಂದಿಗೂ ಕೂಡ ಹಳೆಯ ಫುಟ್ಬಾಲ್ ನಿಯಮದಲ್ಲೇ ಫುಟ್ಬಾಲ್ ಆಡುತ್ತಿದ್ದಾರೆ. ಎಲ್ಲಾ ಆಟಗಾರರು ಫುಟ್ಬಾಲ್ ಹೊಸ ನಿಯಮಗಳಿಗೆ ಬದಲಾಗಬೇಕಾಗಿದೆ ಎಂದರು.

ಪAದ್ಯಾವಳಿಯಲ್ಲಿ ಯಾವುದೇ ಆಟಗಾರರು ತೀರ್ಪುಗಾರರೊಂದಿಗೆ ಅಸಭ್ಯವಾಗಿ ವರ್ತಿಸಿದರೆ, ಅಂತಹ ಆಟಗಾರರನ್ನು ಫುಟ್ಬಾಲ್ ಸಂಸ್ಥೆ ಯೊಂದಿಗೆ ಚರ್ಚಿಸಿ ಅಮಾನತು ಗೊಳಿಸುವ ಅಧಿಕಾರ ತೀರ್ಪುಗಾರ ರಿಗಿದ್ದು,ಎಲ್ಲಾ ಆಟಗಾರರು ತೀರ್ಪುಗಾರರೊಂದಿಗೆ ಗೌರವ ದೊಂದಿಗೆ ನಡೆದುಕೊಳ್ಳಬೇಕಾಗಿದೆ ಎಂದು ಅಣ್ಣಪ್ಪ ಕುಮಾರ್ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಫುಟ್ಬಾಲ್ ಕ್ರೀಡೆಗೆ ಒಳ್ಳೆಯ ಪ್ರೋತ್ಸಾಹ ನೀಡುತ್ತಿರುವುದು ಉತ್ತಮವಾದ ಬೆಳವಣಿಗೆಯಾಗಿವೆ. ಜಿಲ್ಲೆಯ ಎಲ್ಲಾ ಫುಟ್ಬಾಲ್ ಕ್ಲಬ್‌ಗಳು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ನಲ್ಲಿ ನೋಂದಾಯಿಸಿಕೊAಡು, ಕೊಡಗಿನಲ್ಲಿ ಫುಟ್ಬಾಲ್ ಬೆಳೆಯಲು ಕೈ ಜೋಡಿಸಬೇಕು. ಅಲ್ಲದೇ ಜಿಲ್ಲಾ ಫುಟ್ಬಾಲ್ ಸಂಸ್ಥೆಯಲ್ಲಿ ಹೊಸದಾಗಿ ನೋಂದಣಿ ಮಾಡುವ ತಂಡಗಳಿಗೆ ಅವಕಾಶವಿದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ, ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಹಾಗೂ ತೀರ್ಪುಗಾರರ ಸಂಘದ ಅಧ್ಯಕ್ಷ ನಾಗೇಶ್.ಪಿ ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಫುಟ್ಬಾಲ್ ಕ್ರೀಡೆಯನ್ನು ಪ್ರೋತ್ಸಾಹಿಸಲು ಹೊಸ ಯೋಜನೆಗಳನ್ನು ಕೈಗೊಂಡಿದ್ದು, ಅಕ್ಟೋಬರ್ ತಿಂಗಳಲ್ಲಿ ರಾಜ್ಯ ಫುಟ್ಬಾಲ್ ಸಂಸ್ಥೆಯ ಸಹಯೋಗದಲ್ಲಿ ಜಿಲ್ಲಾ ಫುಟ್ಬಾಲ್ ಸಂಸ್ಥೆಯ ವತಿಯಿಂದ ಅಮ್ಮತ್ತಿಯಲ್ಲಿ ಬ್ಯಾಬೀಸ್ ಲೀಗ್, ೧೬ ವರ್ಷ ವಯೋಮಾನದವರ ಕಾಲ್ಚೆಂಡು ಪಂದ್ಯಾವಳಿಯನ್ನು ಆಯೋಜಿಸಲು ತೀರ್ಮಾನ ಮಾಡಲಾಗಿದೆ.

ಅಲ್ಲದೇ ಜಿಲ್ಲಾ ಫುಟ್ಬಾಲ್ ಸಂಸ್ಥೆಯಲ್ಲಿ ನೋಂದಣಿ ಮಾಡಿಕೊಂಡಿರುವ ಕ್ಲಬ್‌ಗಳ ನಡುವೆ ನವೆಂಬರ್ ತಿಂಗಳಲ್ಲಿ ನಾಕೌಟ್ ಪಂದ್ಯಾವಳಿಯನ್ನು ಕೂಡ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈಗಾಗಲೇ ಎಲ್ಲಾ ಕ್ಲಬ್‌ಗಳಿಗೆ ಎ ಫಾರಮ್ ನೀಡಲಾಗಿದ್ದು, ಎಲ್ಲಾ ಕ್ಲಬ್‌ಗಳು ಎರಡು ತಿಂಗಳೊಳಗೆ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಗೆ ನೀಡಬೇಕು, ಮುಂದಿನ ವರ್ಷ ೨೦೨೨ ಹಾಗೂ ೨೩ ನೇ ಸಾಲಿನ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಹಾಗೂ ಕುಶಾಲನಗರ ಎಫ್.ಸಿ ಸಹಯೋಗ ದಲ್ಲಿ ಜಿಲ್ಲಾ ಮಟ್ಟದ ಫುಟ್ಬಾಲ್ ಲೀಗ್ ಪಂದ್ಯಾವಳಿ ನಡೆಯಲಿದೆ ಎಂದು ನಾಗೇಶ್ ಮಾಹಿತಿ ನೀಡಿದರು.

ರಾಜ್ಯ ಫುಟ್ಬಾಲ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ಫುಟ್ಬಾಲ್ ತೀರ್ಪುಗಾರರು ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಯ ಫುಟ್ಬಾಲ್ ತೀರ್ಪುಗಾರರ ಬಗ್ಗೆ ರಾಜ್ಯ ಫುಟ್ಬಾಲ್ ಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದೆ. ಈಗಾಗಲೇ ಜಿಲ್ಲೆಯ ಮೂವರು ತೀರ್ಪುಗಾರರು ರಾಷ್ಟç ಮಟ್ಟದ ತೀರ್ಪುಗಾರರ ಪರೀಕ್ಷೆಯಲ್ಲಿ ಭಾಗವಹಿಸಿದ್ದಾರೆ.

ಆಗಸ್ಟ್ ತಿಂಗಳಲ್ಲಿ ಬೆಂಗಳೂರಿ ನಲ್ಲಿ ಫುಟ್ಬಾಲ್ ತೀರ್ಪುಗಾರರ ಅರ್ಹತಾ ಪರೀಕ್ಷೆ ನಡೆಯಲಿದ್ದು, ೧೮ ವರ್ಷದಿಂದ ೨೮ ವರ್ಷದೊಳಗಿನ ಆಸಕ್ತರು ಜಿಲ್ಲಾ ಫುಟ್ಬಾಲ್ ಸಂಸ್ಥೆಯವರನ್ನು ಸಂಪರ್ಕಿಸ ಬಹುದೆಂದು ನಾಗೇಶ್ ಹೇಳಿದರು.

ಇಬ್ಬರು ಆಟಗಾರರ ಅಮಾನತು

ಇತ್ತೀಚಿಗೆ ಮಂಗಳೂರು ಲೀಗ್ ಹಾಗೂ ಕೊಡಗು ಫುಟ್ಬಾಲ್ ಲೀಗ್, ಎರಡು ಲೀಗ್ ಪಂದ್ಯಾವಳಿಯಲ್ಲಿ ಆಡಿದ ಜಿಲ್ಲೆಯ ಫುಟ್ಬಾಲ್ ಆಟಗಾರರಾದ ಅಮ್ಮತ್ತಿ ಒಂಟಿಯAಗಡಿಯ ಶರತ್ ಹಾಗೂ ಮೂರ್ನಾಡುವಿನ ರಾಜೇಶ್ ಅವರುಗಳನ್ನು ಒಂದು ವರ್ಷಗಳ ಕಾಲ ಕರ್ನಾಟಕ ರಾಜ್ಯದಲ್ಲಿ ನಡೆಯುವ ಯಾವುದೇ ಅಧಿಕೃತ ಫುಟ್ಬಾಲ್ ಪಂದ್ಯಾವಳಿಗಳಲ್ಲಿ ಪಾಲ್ಗೊಳ್ಳದಂತೆ ಅಮಾನತು ಗೊಳಿಸಲಾಗಿದೆ. ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಮಹಾಸಭೆಯಲ್ಲಿ ಎಲ್ಲಾ ಫುಟ್ಬಾಲ್ ಕ್ಲಬ್ ಗಳು ಒಮ್ಮತದಿಂದ ತೀರ್ಮಾನ ಕೈಗೊಂಡು ರಾಜ್ಯ ಫುಟ್ಬಾಲ್ ಸಂಸ್ಥೆಗೆ ಇಬ್ಬರು ಆಟಗಾರರ ಅಮಾನತು ಮಾಹಿತಿಯನ್ನು ಸಲ್ಲಿಸಲಾಯಿತು.

ವಾರ್ಷಿಕ ಮಹಾಸಭೆಯಲ್ಲಿ ರಾಜ್ಯ ಫುಟ್ಬಾಲ್ ಸಂಸ್ಥೆಯ ಉಪಾಧ್ಯಕ್ಷ ಜಗದೀಶ್ ಕೊಡಗರಹಳ್ಳಿ, ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಖಜಾಂಚಿ ದೀಪು ಮಾಚಯ್ಯ, ಸದಸ್ಯ ಲಿಜೇಶ್ ಅಮ್ಮತ್ತಿ, ಫುಟ್ಬಾಲ್ ತೀರ್ಪುಗಾರ ಮಹೇಂದ್ರ ಹಾಗೂ ಜಿಲ್ಲಾ ಫುಟ್ಬಾಲ್ ಸಂಸ್ಥೆಯ ನೋಂದಾಯಿತ ೨೨ ತಂಡಗಳ ವ್ಯವಸ್ಥಾಪಕರು ಇದ್ದರು.

-ಕೆ.ಎಂ. ಇಸ್ಮಾಯಿಲ್, ಕಂಡಕರೆ