ಮಡಿಕೇರಿ, ಜು. ೩: ಮಡಿಕೇರಿ ರೋಟರಿ ವುಡ್ಸ್ ವತಿಯಿಂದ ನಗರದ ಹಿರಿಯ ನಿವಾಸಿಗೆ ಔಷಧಿಯ ನೆರವು ನೀಡಲಾಯಿತು.
ಮಡಿಕೇರಿಯ ಚಾಮುಂಡೇಶ್ವರಿ ನಗರದ ನಿವಾಸಿ ೬೮ ವರ್ಷ ಪ್ರಾಯದ ಕಮಲ ತನ್ನ ಇಳಿವಯಸ್ಸಿನಲ್ಲಿ ಒಬ್ಬಂಟಿಯಾಗಿದ್ದು ಯಾವುದೇ ರೀತಿಯಲ್ಲಿ ಆದಾಯವಿಲ್ಲದಿರುವುದರಿಂದ ಜೀವನೋಪಾಯಕ್ಕಾಗಿ, ದಿನ ನಿತ್ಯ ಬೆಳಗ್ಗಿನ ಸಮಯದಲ್ಲಿ ಮನೆಗಳಿಗೆ ಹಾಲು ಹಾಕಿ, ನಂತರ ಹಲವು ಮನೆಗಳಲ್ಲಿ ಕೆಲಸ ಮಾಡಿಕೊಂಡು ಅದರಿಂದ ದೊರಕುವ ವರಮಾನದಲ್ಲಿ ಜೀವನ ಸಾಗಿಸುತ್ತಿದ್ದಾರೆ.
ಕಮಲ ಅವರ ಅನಾರೋಗ್ಯಕ್ಕೆ ಔಷಧಿಗಳ ಅಗತ್ಯತೆ ಇರುವುದನ್ನು ಮನಗಂಡು ರೋಟರಿ ಮಡಿಕೇರಿ ವುಡ್ಸ್ ಸದಸ್ಯರು ತುರ್ತಾಗಿ ಸ್ಪಂದಿಸಿ ರೋಟರಿ ‘ಆರೋಗ್ಯಸಿರಿ’ ಕಾರ್ಯಕ್ರಮದ ಅಡಿಯಲ್ಲಿ ಔಷಧ ಕಿಟ್ ನೀಡಿದರು. ರೋಟರಿ ವುಡ್ಸ್ನ ಅಧ್ಯಕ್ಷ ಎಸ್.ಎಸ್. ಸಂಪತ್ ಕುಮಾರ್, ಕಾರ್ಯದರ್ಶಿ ವಸಂತ್ ಕುಮಾರ್. ಕೆ, ನಿರ್ದೇಶಕರುಗಳಾದ ಪದ್ಮನಾಭ ಶೆಟ್ಟಿ, ಪ್ರಕೃತಿ ಸುರೇಶ್, ಗೀತಾ ಸೂರ್ಯ, ತೀಕ್ಷö್ನ ಜಿ.ಸಿ. ಮತ್ತು ಲತಾ ಚಾಂದ್ ರಾಜ್ ಹಾಜರಿದ್ದರು. ರೂ. ೫೦೦೦ ಮೌಲ್ಯದ ಔಷಧ ಕಿಟ್ ನ್ನು ಮಡಿಕೇರಿ ಮಹದೇವಪೇಟೆಯ ವ್ಯೆಭವ್ ಮೆಡಿಕಲ್ಸ್ ನವರು ರೋಟರಿ ವುಡ್ಸ್ ಮೂಲಕ ಪ್ರಾಯೋಜಿಸಿದ್ದರು.