ಔಷಧಿ ವ್ಯಾಪಾರಿ ಹತ್ಯೆ ಪ್ರಕರಣ-ಬಂಧಿತರ ಸಂಖ್ಯೆ ೭ಕ್ಕೆ ಏರಿಕೆ

ಅಮರಾವತಿ, ಜು. ೩: ಅಮಾನತುಗೊಂಡಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿದ್ದ ಔಷಧ ವ್ಯಾಪಾರಿಯನ್ನು ಮಹಾರಾಷ್ಟçದ ಅಮರಾವತಿಯಲ್ಲಿ ಹತ್ಯೆ ಮಾಡಲಾಗಿದ್ದು, ರಾಷ್ಟಿçÃಯ ತನಿಖಾ ಸಂಸ್ಥೆ ಇನ್ನೂ ಅಧಿಕೃತವಾಗಿ ಪ್ರಕರಣದ ತನಿಖೆ ವಹಿಸಿಕೊಂಡಿಲ್ಲ ಎಂದು ಭಾನುವಾರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಪೂರ್ವ ಮಹಾರಾಷ್ಟçದ ಅಮರಾವತಿ ನಗರ ಪೊಲೀಸ್ ಕಮೀಷನರ್ ಡಾ. ಆರತಿ ಸಿಂಗ್ ಅವರು, ಪ್ರಕರಣವನ್ನು ಎನ್‌ಐಎಗೆ ವರ್ಗಾಯಿಸುವ ಬಗ್ಗೆ ನಮಗೆ ಇನ್ನೂ ಯಾವುದೇ ಆದೇಶ ಬಂದಿಲ್ಲ, ಸೋಮವಾರದ ವೇಳೆಗೆ ನಮಗೆ ಆದೇಶ ಬಂದರೆ, ಪ್ರಕರಣವನ್ನು ಅಧಿಕೃತವಾಗಿ ಕೇಂದ್ರ ತನಿಖಾ ಸಂಸ್ಥೆಗೆ ಹಸ್ತಾಂತರಿಸಲಾಗುವುದು ಎಂದು ಹೇಳಿದ್ದಾರೆ. ಪ್ರಕರಣದ ತನಿಖೆಗಾಗಿ ಅಮರಾವತಿಗೆ ಎನ್‌ಐಎ ತಂಡ ಭೇಟಿ ನೀಡಿದ ಒಂದು ದಿನದ ನಂತರ ಆರತಿಸಿಂಗ್ ಅವರು ಈ ಹೇಳಿಕೆ ನೀಡಿದ್ದಾರೆ. ತನಿಖೆಯನ್ನು ಕೇಂದ್ರ ತನಿಖಾ ಸಂಸ್ಥೆಗೆ ಹಸ್ತಾಂತರಿಸ ಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ವಕ್ತಾರರು ಶನಿವಾರ ಟ್ವೀಟ್ ಮಾಡಿದ್ದರು. ಅಮರಾವತಿ ನಗರ ಪೊಲೀಸರ ಅಪರಾಧ ವಿಭಾಗದ ಪೊಲೀಸರು ಶನಿವಾರ ನಾಗ್ಪುರದಲ್ಲಿ ಕೆಮಿಸ್ಟ್ ಹತ್ಯೆಯ ಮಾಸ್ಟರ್ ಮೈಂಡ್ ಇರ್ಫಾನ್ ಖಾನ್(೩೨)ನನ್ನು ಬಂಧಿಸಿದ್ದು, ಪ್ರಕರಣಕ್ಕೆ ಸಂಬAಧಿಸಿದAತೆ ಬಂಧಿತರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ. ಇರ್ಫಾನ್ ಎನ್‌ಜಿಒ ಸಂಸ್ಥೆಯ ನಿರ್ದೇಶಕರಾಗಿದ್ದು, ಸಂಸ್ಥೆಯ ಬ್ಯಾಂಕ್ ಖಾತೆಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಹುಲ್ ನಾರ್ವೇಕರ್ ಸ್ಪೀಕರ್ ಆಗಿ ಆಯ್ಕೆ

ಮುಂಬೈ, ಜು. ೩: ತೀವ್ರ ಕುತೂಹಲ ಕೆರಳಿಸಿದ್ದ ಮಹಾರಾಷ್ಟç ವಿಧಾನಸಭೆ ಸ್ಪೀಕರ್ ಆಯ್ಕೆ ಚುನಾವಣೆಯಲ್ಲೂ ಶಿವಸೇನೆಯ ರೆಬೆಲ್ ಶಾಸಕರ ಬಣ ಮೇಲುಗೈ ಸಾಧಿಸಿದ್ದು, ಶಿವಸೇನೆ ರೆಬೆಲ್ ಬಣ ಹಾಗೂ ಬಿಜೆಪಿಯ ಅಭ್ಯರ್ಥಿ ರಾಹುಲ್ ನಾರ್ವೇಕರ್ ಅವರು ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ. ೧೬೪ ಮತಗಳನ್ನು ಪಡೆದ ನಾರ್ವೇಕರ್ ಅವರು ೧೦೭ ಮತಗಳನ್ನು ಪಡೆದ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಅಭ್ಯರ್ಥಿ ರಾಜನ್ ಸಾಲ್ವಿ ಅವರನ್ನು ಸೋಲಿಸಿದರು.

ಮಣಿಪುರದಲ್ಲಿ ಭೂಕುಸಿತ-ಸಾವಿನ ಸಂಖ್ಯೆ ಏರಿಕೆ

ಗುವಾಹಟಿ, ಜು. ೩: ಮಣಿಪುರದ ನೊನಿ ಜಿಲ್ಲೆಯ ರೈಲ್ವೆ ಕಾಮಗಾರಿ ಪ್ರದೇಶದಲ್ಲಿ ಭಾರೀ ಭೂಕುಸಿತದಿಂದಾಗಿ ಅವಶೇಷಗಳ ಅಡಿ ಸಿಲುಕಿದ್ದ ಮೂವರ ಮೃತದೇಹಗಳನ್ನು ಭಾನುವಾರ ಹೊರ ತೆಗೆಯಲಾಗಿದ್ದು, ಸಾವನ್ನಪ್ಪಿದರ ಸಂಖ್ಯೆ ೩೭ಕ್ಕೆ ಏರಿಕೆಯಾಗಿದೆ. ಟೆರಿಟೋರಿಯಲ್ ಆರ್ಮಿ ಜವಾನ ಸೇರಿದಂತೆ ಮೂವರ ಮೃತದೇಹಗಳು ಪತ್ತೆಯಾಗಿವೆ. ಜೂನ್ ೨೯ ರ ರಾತ್ರಿ ತುಪುಲ್ ಯಾರ್ಡ್ ರೈಲ್ವೆ ನಿರ್ಮಾಣ ಶಿಬಿರದಲ್ಲಿ ಭಾರೀ ಭೂಕುಸಿತ ಸಂಭವಿಸಿದ ನಂತರ ೨೬ ಜನರು ಇನ್ನೂ ನಾಪತ್ತೆಯಾಗಿದ್ದಾರೆ. ಪ್ರತಿಕೂಲ ಹವಾಮಾನ ರಕ್ಷಣಾ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ನೋನಿ ಜಿಲ್ಲೆಯ ತುಪುಲ್‌ನಲ್ಲಿ ರೈಲ್ವೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದಾಗ ಸಂಭವಿಸಿದ್ದ ಈ ದುರಂತ ಸ್ಥಳದಲ್ಲಿ ಸುಮಾರು ೮೧ ಜನ ಇದ್ದರು ಎನ್ನಲಾಗಿದೆ. ಇದಕ್ಕೂ ಮುನ್ನ ೧೩ ಸಿಬ್ಬಂದಿ ಸೇರಿದಂತೆ ೧೮ ಮಂದಿಯನ್ನು ರಕ್ಷಿಸಲಾಗಿತ್ತು. ಶನಿವಾರ ರಾತ್ರಿ ಭಾರೀ ಮಳೆ ಮತ್ತು ಭೂಕುಸಿತದಿಂದಾಗಿ ಪ್ರತಿಕೂಲ ಹವಾಮಾನದ ಹೊರತಾಗಿಯೂ ಸೇನೆ ಮತ್ತು ಅಸ್ಸಾಂ ರೈಫಲ್ಸ್ ಸೇರಿದಂತೆ ಹಲವು ಸಂಸ್ಥೆಗಳು ನಾಪತ್ತೆಯಾದ ೨೬ ಮಂದಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆಸಿವೆ. ಶನಿವಾರ ಪತ್ತೆಯಾದ ಎಂಟು ಮೃತದೇಹಗಳಲ್ಲಿ ಐವರು ಟೆರಿಟೋರಿಯಲ್ ಆರ್ಮಿ ಸಿಬ್ಬಂದಿ ಮತ್ತು ಒಬ್ಬರು ನಿರ್ಮಾಣ ಕಂಪೆನಿಯ ಉದ್ಯೋಗಿಯಾಗಿದ್ದಾರೆ. ಇನ್ನಿಬ್ಬರ ಗುರುತು ಪತ್ತೆಯಾಗಿಲ್ಲ. ತುಪುಲ್‌ನ ಭೂಕುಸಿತ ಪ್ರದೇಶದಲ್ಲಿ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಲುಷಿತ ನೀರು ಕುಡಿದು ೩೦ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ರಾಯಚೂರು, ಜು. ೩: ಜಿಲ್ಲೆಯ ಮಾನ್ವಿ ತಾಲ್ಲೂಕಿನ ವಲ್ಕಂ ದಿನ್ನಿ ಗ್ರಾಮದ ೧೦ ವಿದ್ಯಾರ್ಥಿಗಳು ಸೇರಿದಂತೆ ೩೦ಕ್ಕೂ ಹೆಚ್ಚು ಜನರು ವಾಂತಿ, ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಲುಷಿತ ನೀರು ಸೇವಿಸಿ ಜನರು ಅಸ್ವಸ್ಥಕ್ಕೀಡಾಗಿದ್ದಾರೆ. ಕಲುಷಿತ ನೀರು ಕುಡಿದು ಅಸ್ವಸ್ಥಕ್ಕೀಡಾಗುವುದು ಇದೇ ಮೊದಲಲ್ಲ, ಕಳೆದ ಮೇ ತಿಂಗಳಲ್ಲಿ ರಾಯಚೂರಿನ ಇಂದಿರಾ ನಗರದ ನಿವಾಸಿಗಳು ಕಲುಷಿತ ನೀರು ಕುಡಿದು ಓರ್ವ ಮಹಿಳೆ ಮೃತಪಟ್ಟಿದ್ದರು. ೬೦ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡು ಜಿಲ್ಲೆಯ ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಇಂದಿರಾನಗರದ ಮಲ್ಲಮ್ಮ ಮೃತಪಟ್ಟಿದ್ದರು. ಕುಡಿಯುವ ನೀರಿಗೆ ಚರಂಡಿ ನೀರು ಸೇರುತ್ತಿರುವ ಆರೋಪ ಕೇಳಿಬಂದಿದೆ. ಹಲವರು ವಾಂತಿ-ಭೇದಿಯಿAದ ಬಳಲುತ್ತಿದ್ದಾರೆ. ಚಿಕ್ಕಮಕ್ಕಳು ಹೆಚ್ಚು ಬಾಧಿತರಾಗಿದ್ದಾರೆ. ಇದುವರೆಗೆ ಕಲುಷಿತ ನೀರು ಕುಡಿದು ೭ ಮಂದಿ ಮೃತಪಟ್ಟಿದ್ದಾರೆ. ವಲ್ಕಂ ದಿನ್ನಿಗೆ ತುಂಗಭದ್ರಾ ನದಿಯಿಂದ ನೀರು ಪೂರೈಕೆಯಾಗುತ್ತದೆ.

ಅಮರನಾಥ ಯಾತ್ರೆಯಲ್ಲಿ ೫ ಭಕ್ತರ ಸಾವು

ಕಾಶ್ಮೀರ, ಜು. ೩: ಹಿಂದೂಗಳ ಪವಿತ್ರ ಯಾತ್ರೆ ಅಮರನಾಥ ಯಾತ್ರೆ ಈ ವರ್ಷ ಆರಂಭವಾದಾಗಿನಿAದ ಸುಮಾರು ೫ ಭಕ್ತರು ಸಾವನ್ನಪ್ಪಿದ್ದು, ಸುಮಾರು ೪೦,೦೦೦ ಭಕ್ತರು ದಕ್ಷಿಣ ಕಾಶ್ಮೀರದ ಹಿಮಾಲಯದಲ್ಲಿರುವ ಗುಹ ದೇವಾಲಯಕ್ಕೆ ಭೇಟಿ ನೀಡಿರುವುದಾಗಿ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ವಿರೇಂದ್ರರ್ ಗುಪ್ತಾ ಎಂಬ ಭಕ್ತರೊಬ್ಬರು ಚಂದನ್ ವಾರಿ- ಶೇಷನಾಗ ಮಾರ್ಗದಿಂದ ನಾಪತ್ತೆಯಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಐವರು ಮೃತರ ಪೈಕಿ ಮೂವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ದೆಹಲಿಯ ಜೈ ಪ್ರಕಾಶ್ ಎಂಬವರು ಚಂದನ್ ವಾರಿಯಲ್ಲಿ, ಬರೈಲಿಯ ದೇವೇಂದರ್ ತಯಲ್ ಕೆಳ ಗುಹೆಯಲ್ಲಿ ಮತ್ತು ಬಿಹಾರದ ಲಿಪೊ ಶರ್ಮಾ ಕ್ವಾಜಿಗುಂದ ಶಿಬಿರದಲ್ಲಿ ಸಾವನ್ನಪ್ಪಿದ್ದಾರೆ. ಮಹಾರಾಷ್ಟçದಿಂದ ಬಂದಿದ್ದ ಜಗನಾಥ್ ಆರೋಗ್ಯ ಸಮಸ್ಯೆಯಿಂದ ಸಾವಿಗೀಡಾಗಿದ್ದಾರೆ. ರಾಜಸ್ಥಾನದ ಅಶು ಸಿಂಗ್ ಎಂಬುವರು ಕುದುರೆಯಿಂದ ಬಿದ್ದು ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಭಾನುವಾರ ಬೆಳಿಗ್ಗೆ ೧೦ ಗಂಟೆಯವರೆಗೂ ೪೦,೨೩೩ ಭಕ್ತರು ಗುಹೆ ದೇವಾಲಯಕ್ಕೆ ಭೇಟಿ ನೀಡಿದ್ದು, ಶಿವಲಿಂಗ ದರ್ಶನ ಪಡೆದಿದ್ದಾರೆ. ಜೂನ್ ೩೦ ರಿಂದ ಆರಂಭವಾಗಿರುವ ಅಮರನಾಥ ಯಾತ್ರೆ ಆಗಸ್ಟ್ ೧೧ ರಂದು ಅಂತ್ಯಗೊಳ್ಳಲಿದೆ.

ಉಗ್ರರ ಎಡೆಮುರಿ ಕಟ್ಟಿದ ಗ್ರಾಮಸ್ಥರು..!

ಶ್ರೀನಗರ, ಜು. ೩: ಲಷ್ಕರ್-ಎ-ತೊಯ್ಬಾ (ಎಲ್.ಇ.ಟಿ.) ಸಂಘಟನೆಯ ಇಬ್ಬರು ಶಸ್ತçಧಾರಿ ಉಗ್ರರನ್ನು ಗ್ರಾಮಸ್ಥರೇ ಹೆಡೆಮುರಿಕಟ್ಟಿ ಪೊಲೀಸರಿಗೆ ಒಪ್ಪಿಸಿದ ಘಟನೆ ಜಮ್ಮು-ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ನಡೆದಿದೆ. ಪೊಲೀಸರಿಗೆ ಒಪ್ಪಿಸಿದ ಇಬ್ಬರು ಉಗ್ರರ ಪೈಕಿ ಓರ್ವ ಉಗ್ರ ಎಲ್.ಇ.ಟಿ. ಸಂಘಟನೆಯ ಕಮಾಂಡ್ ಆಗಿದ್ದು ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಉಗ್ರನಾಗಿದ್ದಾನೆ. ರಜೌರಿ ಜಿಲ್ಲೆಯ ನಿವಾಸಿ ಆಗಿದ್ದ ಎಲ್.ಇ.ಟಿ. ಕಮಾಂಡರ್ ತಲಿಬ್ ಹುಸೇನ್ ಹಾಗೂ ಜಿಲ್ಲೆಯಲ್ಲಿ ಇತ್ತೀಚಿನ ಐ.ಇ.ಡಿ. ಸ್ಫೋಟ ಪ್ರಕರಣದ ಮಾಸ್ಟರ್ ಮೈಂಡ್ ಆಗಿದ್ದ ಫೈಜಲ್ ಅಹ್ಮದ್ ದರ್‌ನನ್ನು ತುಕ್ಸಾನ್ ಗ್ರಾಮದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬಂಧಿತರಿAದ ಎರಡು ಎಕೆ ಅಸಾಲ್ಟ್ ರೈಫಲ್ಸ್, ೭ ಗ್ರೆನೇಡ್‌ಗಳು, ಒಂದು ಪಿಸ್ತೂಲ್‌ನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಗ್ರಾಮಸ್ಥರ ಧೈರ್ಯ, ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಡಿಜಿಪಿ ದಲ್ಬಿರ್ ಸಿಂಗ್ ಗ್ರಾಮಸ್ಥರಿಗೆ ೨ ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿದ್ದಾರೆ.