ಶನಿವಾರಸಂತೆ, ಜು. ೩: ಕೆರೆಗೆ ಬಿದ್ದು ಕಾರ್ಮಿಕ ಸಾವನ್ನಪ್ಪಿದ ಘಟನೆ ಸಮೀಪದ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡೊಡ್ಡಕೊಡ್ಲಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸುರೇಶ್ (೪೭) ಸಾವನ್ನಪ್ಪಿದ ಕಾರ್ಮಿಕ. ತಾ. ೧ರಂದು ಬೆಳಿಗ್ಗೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋದ ಸುರೇಶ್ ರಾತ್ರಿಯಾದರೂ ಮನೆಗೆ ಹಿಂತಿರುಗಿರಲಿಲ್ಲ. ಅಕ್ಕಪಕ್ಕ ಹಾಗೂ ಸಂಬAಧಿಕರ ಮನೆಯಲ್ಲಿ ವಿಚಾರಿಸಿದರೂ ಸುಳಿವು ಸಿಕ್ಕಿರಲಿಲ್ಲ. ತಾ. ೨ರಂದು ಕೊಡ್ಲಿಪೇಟೆಯ ಕೆರೆದಡದಲ್ಲಿ ಸುರೇಶನ ಚಪ್ಪಲಿ ಇರುವುದು ಕಂಡುಬAದಿದೆ.
ತಾ.೩ರAದು ಬೆಳಿಗ್ಗೆ ಕೆರೆ ನೀರಿನಲ್ಲಿ ಸುರೇಶನ ಮೃತದೇಹ ತೇಲುತ್ತಿರುವುದು ಕಂಡುಬAದಿದೆ. ಸಾರ್ವಜನಿಕರ ಸಹಾಯದಿಂದ ಮೃತದೇಹವನ್ನು ಹೊರ ತೆಗೆಸಲಾಯಿತು.
ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಲು ಜಾರಿ ಕಾರ್ಮಿಕ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.