ಕಣಿವೆ, ಜು. ೪: ಕುಶಾಲನಗರ ತಾಲೂಕು ಕೇಂದ್ರದ ಸ್ಥಳೀಯ ಪಟ್ಟಣ ಪಂಚಾಯಿತಿಯ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಸ್ವಚ್ಛತೆಯನ್ನು ಬಹಿಷ್ಕರಿಸಿ ನೇರ ನೇಮಕಾತಿಗೆ ಆಗ್ರಹಿಸಿ ನಡೆಸುತ್ತಿದ್ದ ಅನಿರ್ಧಿಷ್ಟಾವಧಿ ಮುಷ್ಕರ ಸೋಮವಾರ ಮುಕ್ತಾಯಗೊಂಡಿದೆ.
ಹೊರ ಗುತ್ತಿಗೆ ಪೌರ ಕಾರ್ಮಿಕರ ಸಮಸ್ಯೆಗಳಿಗೆ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸಿರುವುದರಿAದ ಅನಿರ್ಧಿಷ್ಟಾವಧಿ ಮುಷ್ಕರವನ್ನು ಕೈಬಿಡಲಾಗಿದೆ ಎಂದು ಹೊರಗುತ್ತಿಗೆದಾರರ ಸಂಘದ ಅಧ್ಯಕ್ಷ ಎಚ್.ಎಸ್. ದಾಸ ತಿಳಿಸಿದ್ದಾರೆ.
ಹಲವಾರು ವರ್ಷಗಳಿಂದ ನಗರ ಸಭೆ, ನಗರಪಾಲಿಕೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಲ್ಲಿ ವಾಹನ ಚಾಲಕರು, ವಾಟರ್ ಮ್ಯಾನ್, ಲೀಡರ್ಸ್, ಕ್ಲೀನರ್ಸ್, ಯುಜಿಡಿ ಕಾರ್ಮಿಕರು, ಹೆಲ್ಪರ್ಸ್, ಡೇಟಾ ಆಪರೇಟರ್ಗಳು ಅಲ್ಪ ಪ್ರಮಾಣದ ವೇತನದ ಗುತ್ತಿಗೆ ಪದ್ಧತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗಾಗಿ ಇವರಿಗೆಲ್ಲಾ ಸರ್ಕಾರ ನೀಡುವ ಅಲ್ಪ ಪ್ರಮಾಣದ ವೇತನದಿಂದ ಜೀವನ ಸಾಗಿಸಲು ಆಗುತ್ತಿಲ್ಲ.
ಅತ್ಯಂತ ಪರಿಶ್ರಮದಿಂದ ಕಾರ್ಯನಿರ್ವಹಿಸುವ ನಮಗೆ ನೀಡುತ್ತಿರುವ ವೇತನ ಯಾವುದಕ್ಕೂ ಸಾಕಾಗುತ್ತಿಲ್ಲ. ಹಾಗೂ ನಮಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ಕೂಡ ಸರಿಯಾಗಿ ದೊರಕುತ್ತಿಲ್ಲ. ನೇರ ವೇತನದಲ್ಲಿ ದುಡಿಯುತ್ತಿರುವ ಪೌರಕಾರ್ಮಿಕರಿಗಿಂತಲೂ ಅತಿ ಹೆಚ್ಚಿನ ಶ್ರಮವಹಿಸಿ ದುಡಿಯುವ ನಮಗೆ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳು ಕೂಡ ದೊರಕಬೇಕು.
ಅವರಂತೆಯೇ ನಮಗೂ ಕೂಡ ಗುತ್ತಿಗೆ ಪದ್ಧತಿ ಬದಲು ನೇರ ವೇತನ ನೀಡಿದಲ್ಲಿ ನಮ್ಮ ಜೀವನವು ಸ್ವಲ್ಪಮಟ್ಟಿಗಾದರೂ ಸುಧಾರಿಸಲ್ಪಡುತ್ತದೆ ಎಂದು ದಾಸ ಹೇಳಿದರು.
ಸರ್ಕಾರ ಸೂಕ್ತ ರೀತಿಯಲ್ಲಿ ನಮ್ಮ ಬೇಡಿಕೆಗಳಿಗೆ ಸ್ಪಂದಿಸಿರುವುದರಿAದ ಸೋಮವಾರ ನಡೆಸಿದ ಅರೆ ಬೆತ್ತಲೆ ಧರಣಿಯನ್ನು ಕೈಬಿಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ಸಂಘದ ಉಪಾಧ್ಯಕ್ಷರಾದ ವಿಶ್ವ, ಕಾರ್ಯದರ್ಶಿ ಅನಿಲ್ ಕುಮಾರ್, ಖಜಾಂಚಿ ಗಣೇಶ್ ಎ., ಸದಸ್ಯರಾದ ನಾಗರಾಜ. ಸತೀಶ, ರಾಮ, ರಘು, ರಾಜೇಂದ್ರ, ಮಣಿಕಂಠ, ಮುರುಗೇಶ, ಪುನೀತ್, ಬಸವರಾಜ, ಚಂದ್ರ. ವೆಂಕಟೇಶ ಇದ್ದರು.