ಸೋಮವಾರಪೇಟೆ, ಜು. ೩: ಮಳೆಗಾಲದಲ್ಲಿ ಎದುರಾಗುವ ವಿದ್ಯುತ್ ಸಂಬAಧಿತ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ಸೋಮವಾರಪೇಟೆ ಉಪ ವಿಭಾಗದ ಸಿಬ್ಬಂದಿಗಳು ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದು, ಈಗಾಗಲೇ ಪರಿಕರಗಳ ದಾಸ್ತಾನು, ವಿದ್ಯುತ್ ಮಾರ್ಗ ದುರಸ್ತಿಗೆ ಕ್ರಮಕೈಗೊಂಡಿದ್ದಾರೆ.

ಸೋಮವಾರಪೇಟೆ ಉಪ ವಿಭಾಗಕ್ಕೆ ಒಳಪಡುವ ವ್ಯಾಪ್ತಿಯಲ್ಲಿ ಶೇ. ೯೦ ರಷ್ಟು ಜಂಗಲ್ ಕಟ್ಟಿಂಗ್ ಮುಕ್ತಾಯಗೊಂಡಿದ್ದು, ೧೧ ಕೆ.ವಿ. ವಿದ್ಯುತ್ ಸರಬರಾಜು ಮಾಡುವ ಫೀಡರ್‌ಗಳ ನಿರ್ವಹಣೆ ಮುಕ್ತಾಯವಾಗಿದೆ ಎಂದು ಸಹಾಯಕ ಕಾರ್ಯಪಾಲಕ ಅಭಿಯಂತರ ಧನಂಜಯ್ ತಿಳಿಸಿದ್ದಾರೆ.

ಎಲ್.ಟಿ. ಲೈನ್‌ಗಳ ದುರಸ್ತಿ ಕಾರ್ಯ ಪ್ರಗತಿಯಲ್ಲಿದ್ದು, ಟ್ರಾನ್ಸ್ ಫಾರ್ಮರ್‌ಗಳ ನಿರ್ವಹಣೆಯೂ ನಡೆಯುತ್ತಿದೆ. ಅಗತ್ಯ ಟ್ರಾನ್ಸ್ಫಾರ್ಮರ್ ಹಾಗೂ ವಿದ್ಯುತ್ ಕಂಬಗಳನ್ನು ದಾಸ್ತಾನಿರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಉಪ ವಿಭಾಗಕ್ಕೆ ಆಲೂರು ಸಿದ್ದಾಪುರ, ಶಾಂತಳ್ಳಿ, ಕೊಡ್ಲಿಪೇಟೆ, ಶನಿವಾರಸಂತೆ, ಸೋಮವಾರಪೇಟೆ ವಿಭಾಗ ಒಳಪಡುತ್ತಿದ್ದು, ೧೭ ಫೀಡರ್‌ಗಳಿವೆ. ಇದರಲ್ಲಿ ೧೧ ಕೆ.ವಿ. ವಿದ್ಯುತ್ ಪ್ರಸರಣದ ಮಾರ್ಗದಲ್ಲಿ ಶೇ.೯೦ರಷ್ಟು ಜಂಗಲ್ ಕಟ್ಟಿಂಗ್ ಹಾಗೂ ಇನ್ನಿತರ ನಿರ್ವಹಣೆ ಮುಕ್ತಾಯಗೊಂಡಿದೆ. ಇಂಧನ ಸಚಿವರ ಸೂಚನೆಯಂತೆ ವಿದ್ಯುತ್ ಮಾರ್ಗ ದುರಸ್ತಿ ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದ್ದು, ದಿನವೊಂದಕ್ಕೆ ೨೦ ರಿಂದ ೨೫ ಟ್ರಾನ್ಸ್ಫಾರ್ಮರ್‌ಗಳ ನಿರ್ವಹಣೆ ನಡೆಯುತ್ತಿದೆ.

ಸದ್ಯ ವಿದ್ಯುತ್ ಪರಿವರ್ತಕ ಕೇಂದ್ರಗಳ ನಿರ್ವಹಣೆ ಸಮರೋಪಾದಿಯಲ್ಲಿ ನಡೆಯುತ್ತಿದ್ದು, ಸೆಸ್ಕ್ನ ಎಲ್ಲಾ ಸಿಬ್ಬಂದಿಗಳು ಅಭಿಯಾನದಲ್ಲಿ ಭಾಗಿಯಾಗಿದ್ದಾರೆ. ಮುಂದಿನ ನಾಲ್ಕೆöÊದು ದಿನಗಳಲ್ಲಿ ಎಲ್ಲಾ ಟ್ರಾನ್ಸ್ಫಾರ್ಮರ್‌ಗಳ ನಿರ್ವಹಣೆ ಕಾರ್ಯ ಮುಕ್ತಾಯಗೊಳ್ಳಲಿದೆ ಎಂದು ಎಇಇ ಧನಂಜಯ್ ತಿಳಿಸಿದ್ದಾರೆ.

ಆಲೂರು ಸಿದ್ದಾಪುರ, ಶಾಂತಳ್ಳಿ, ಕೊಡ್ಲಿಪೇಟೆ, ಶನಿವಾರಸಂತೆ, ಸೋಮವಾರಪೇಟೆ ವಿಭಾಗಗಳಲ್ಲಿ ತಲಾ ೫೦ ವಿದ್ಯುತ್ ಕಂಬಗಳನ್ನು ದಾಸ್ತಾನಿರಿಸಲಾಗಿದೆ. ಇದರೊಂದಿಗೆ ೧೨ ಟ್ರಾನ್ಸ್ಫಾರ್ಮರ್‌ಗಳನ್ನು ದುರಸ್ತಿಗೊಳಿಸಲಾಗಿದೆ. ಇವುಗಳನ್ನು ಕೇಂದ್ರ ಕಚೇರಿಯಲ್ಲಿ ಇಡಲಾಗಿದ್ದು, ಒಂದು ವೇಳೆ ಎಲ್ಲಾದರೂ ಟ್ರಾನ್ಸ್ಫಾರ್ಮರ್ ಸಮಸ್ಯೆ ಎದುರಾದರೆ ತಕ್ಷಣ ಬದಲಾವಣೆ ಮಾಡಲು ಸೆಸ್ಕ್ ಸಿದ್ಧವಾಗಿದೆ.

ಉಪ ವಿಭಾಗದಲ್ಲಿ ಈಗಾಗಲೇ ೭೬ ಸಿಬ್ಬಂದಿಗಳು ಕರ್ತವ್ಯದಲ್ಲಿದ್ದು, ಮಳೆಗಾಲದಲ್ಲಿ ತಕ್ಷಣ ಸ್ಪಂದಿಸಲು ಸಹಕಾರಿಯಾಗುವಂತೆ ಒಂದು ಸೆಕ್ಷನ್‌ಗೆ ೫ ಮಂದಿಯAತೆ ಹೆಚ್ಚುವರಿಯಾಗಿ ಗ್ಯಾಂಗ್‌ಮೆನ್‌ಗಳನ್ನು ನೇಮಿಸಿಕೊಳ್ಳಲಾಗಿದೆ. ಇದರೊಂದಿಗೆ ೨ ಪಿಕ್‌ಅಪ್ ವಾಹನಗಳು, ೧ ಹೆಲ್ಪ್ಲೈನ್ ವಾಹನ ಇದ್ದು, ಅಗತ್ಯವಿದ್ದಲ್ಲಿ ಹೆಚ್ಚುವರಿ ವಾಹನಗಳನ್ನು ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ವಿಭಾಗಕ್ಕೆ ೧೧೦ ಮಂದಿ ಹೆಚ್ಚುವರಿ ಸಿಬ್ಬಂದಿಯ ಬೇಡಿಕೆಯಿಟ್ಟಿದ್ದು, ಸೋಮವಾರಪೇಟೆಗೆ ಕನಿಷ್ಟ ೬೦ ಮಂದಿ ಹೊಸದಾಗಿ ನೇಮಕಗೊಳ್ಳುವ ನಿರೀಕ್ಷೆಯಿದೆ. ಈಗಾಗಲೇ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸಿಬ್ಬಂದಿಗಳು ಇನ್ನಷ್ಟೇ ಕೆಲಸಕ್ಕೆ ಹಾಜರಾಗಬೇಕಿದೆ ಎಂದು ಎಇಇ ಧನಂಜಯ್ ಮಾಹಿತಿ ನೀಡಿದ್ದಾರೆ.

- ವಿಜಯ್ ಹಾನಗಲ್