ಕುಶಾಲನಗರ, ಜು. ೩: ಕೊಡಗು ಜಿಲ್ಲಾ ಪಂಚಾಯಿತಿ ಮೂಲಕ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಯೊಂದು ನಿರ್ವಹಣೆ ಕೊರತೆ ಎದುರಿ ಸುತ್ತಿರುವ ದೃಶ್ಯ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಂಡುಬAದಿದೆ.
ಕಳೆದ ೧೦ ವರ್ಷಗಳ ಹಿಂದೆ ಗುಡ್ಡೆಹೊಸೂರು ಪಂಚಾಯಿತಿ ವ್ಯಾಪ್ತಿಯ ಬಸವನಹಳ್ಳಿ ಸುತ್ತಮುತ್ತ ಜನರಿಗೆ ಕಾವೇರಿ ನದಿಯಿಂದ ನೀರು ಪಂಪ್ ಮೂಲಕ ಹಾಯಿಸುವ ಯೋಜನೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಕೊಡಗು ಜಿಲ್ಲಾ ಪಂಚಾಯಿತಿ ಮೂಲಕ ರೂಪಿಸಲಾಗಿತ್ತು.
ಈ ಯೋಜನೆ ಅನ್ವಯ ಗುಡ್ಡೆಹೊಸೂರು-ಸಿದ್ದಾಪುರ ರಸ್ತೆಯ ಒತ್ತಿನಲ್ಲಿ ತೆಪ್ಪದ ಕಂಡಿ ಬಳಿ ಸುಮಾರು ೬ ಲಕ್ಷ ರೂಪಾಯಿಗಳ ವೆಚ್ಚ ಮಾಡಿ ಕಾವೇರಿ ನದಿಗೆ ಹೊಂದಿಕೊAಡAತೆ ಜಾಕ್ ವೆಲ್ ನಿರ್ಮಾಣಗೊಂಡಿದೆ. ನಂತರ ನದಿ ಪ್ರವಾಹ ಹಿನ್ನೆಲೆ ಜಾಕ್ವೆಲ್ನಲ್ಲಿ ಹೂಳು ತುಂಬಿ ಪಂಪ್ ಮೂಲಕ ನೀರೆತ್ತಲು ಅಸಾಧ್ಯವಾದ ಕಾರಣ ಕಳೆದ ಕೆಲವು ವರ್ಷಗಳಿಂದ ಪಂಪ್ ಹೌಸ್ನಿಂದ ಕಾವೇರಿ ನದಿಗೆ ನೇರವಾಗಿ ಪೈಪ್ ಹಾಕಿ ನೀರೆತ್ತುವ ಕಾಯಕ ನಡೆದಿದೆ. ಇದರಿಂದ ಕಲುಷಿತ ನೀರು ನೇರವಾಗಿ ಶುದ್ಧೀಕರಣ ಘಟಕಕ್ಕೆ ಬಂದು ಬೀಳುತ್ತಿರುವ ಪರಿಸ್ಥಿತಿ ಎದುರಾಗಿದೆ.
ಈ ಬಗ್ಗೆ ಗ್ರಾಮ ಪಂಚಾಯಿತಿ ಮೂಲಕ ಜಿಲ್ಲಾ ಪಂಚಾಯಿತಿಗೆ ಮಾಹಿತಿ ನೀಡಲಾಗಿದೆ. ಅನುದಾನದ ಕೊರತೆಯಿಂದ ಜಾಕ್ವೆಲ್ನಲ್ಲಿ ತುಂಬಿರುವ ಹೂಳು ತೆರವುಗೊಳಿಸುವ ಕೆಲಸ ನಡೆದಿಲ್ಲ ಎಂದು ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ಯಾಮ್ ‘ಶಕ್ತಿ’ಗೆ ಪ್ರತಿಕ್ರಿಯಿಸಿದರು.
ಪಂಚಾಯಿತಿ ಮೂಲಕ ಒದಗಿಸಲಾಗುವ ೨೪ ಗಂಟೆಗಳ ಕಾಲದ ಶುದ್ಧ ಕುಡಿಯುವ ನೀರಿನ ಯೋಜನೆಗೆ ಸೆಸ್ಕ್ ನಿರಂತರ ವಿದ್ಯುತ್ ಪೂರೈಕೆ ಮಾಡುವ ವ್ಯವಸ್ಥೆಪಂಪ್ ಹೌಸ್ಗೆ ಕಲ್ಪಿಸಲಾಗಿದ್ದು, ಇದನ್ನು ವ್ಯಕ್ತಿಯೊಬ್ಬರು ದುರ್ಬಳಕೆ ಮಾಡಿರುವುದು ಕಂಡು ಬಂದಿದೆ. ಖಾಸಗಿ ಪಂಪ್ ಹೌಸ್ ನಿರ್ಮಿಸುವ ಮೂಲಕ ಅಕ್ರಮವಾಗಿ ವಿದ್ಯುತ್ ಕಂಬದಿAದ ಸಂಪರ್ಕ ಪಡೆದಿದ್ದರೂ ಸಂಬAದಿಸಿದ ಇಲಾಖೆ ಸಿಬಂದಿಗಳು ಮೌನಕ್ಕೆ ಶರಣಾಗಿರುವುದು ಸಂಶಯಕ್ಕೆ ಎಡೆಮಾಡಿದೆ.
ಕೊಡಗು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಗಮನಹರಿಸಿ ಕುಡಿಯುವ ನೀರಿನ ಘಟಕದ ನದಿ ತೀರದಲ್ಲಿ ನಿರ್ಮಾಣಗೊಂಡಿರುವ ಜಾಕ್ವೆಲ್ನಲ್ಲಿ ತುಂಬಿರುವ ಹೂಳು ತೆಗೆಯುವ ಕಾಯಕಕ್ಕೆ ತಕ್ಷಣ ಕ್ರಿಯಾ ಯೋಜನೆ ರೂಪಿಸಿ ಕಾಯಕಲ್ಪ ಕಲ್ಪಿಸ ಬೇಕಾಗಿದೆ.
- ಎಂ.ಎನ್. ಚಂದ್ರಮೋಹನ್