ಮಡಿಕೇರಿ, ಜು. 2: ಜಿಲ್ಲೆಯಲ್ಲಿ ನಿನ್ನೆದಿನ (ತಾ. 1) ಹಗಲು ತುಸು ಬಿಡುವು ನೀಡಿದಂತಿದ್ದ ಮಳೆ ರಾತ್ರಿ ಹಲವೆಡೆಗಳಲ್ಲಿ ಧಾರಾಕಾರವಾಗಿ ಸುರಿದಿದೆ. ತಾ. 2ರ ಬೆಳಿಗ್ಗೆ 8ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಸಂಪಾಜೆ-ಭಾಗಮಂಡಲ ವಿಭಾಗದಲ್ಲಿ ಹೆಚ್ಚು ಮಳೆಯಾಗಿದೆ.

ಸಂಪಾಜೆ ಹೋಬಳಿಯಲ್ಲಿ 5.92 ಇಂಚು ಮಳೆಯಾಗಿದ್ದರೆ ಭಾಗಮಂಡಲ ಹೋಬಳಿಯಲ್ಲಿ 4.36 ಇಂಚಿನಷ್ಟು ಮಳೆಯಾಗಿದೆ. ಉಳಿದಂತೆ ಮಡಿಕೇರಿ ಕ.ಸ.ಬಾ.ದಲ್ಲಿ 2.95, ನಾಪೋಕ್ಲು 2.80, ವೀರಾಜಪೇಟೆ 1.16, ಹುದಿಕೇರಿ 1.17, ಶ್ರೀಮಂಗಲ 2.08, ಸೋಮವಾರಪೇಟೆ 1.39, ಶಾಂತಳ್ಳಿ 2.88, ಕುಶಾಲನಗರ 1 ಹಾಗೂ ಸುಂಟಿಕೊಪ್ಪ ಹೋಬಳಿಯಲ್ಲಿ 1.44 ಇಂಚಿನಷ್ಟು ಮಳೆಯಾಗಿದೆ.

ಪ್ರಸ್ತುತ ಜಿಲ್ಲೆಯಲ್ಲಿ ಅಲ್ಲಲ್ಲಿ ಉತ್ತಮ ಮಳೆ ಮುಂದುವರೆದಿದೆ. ಬಿರು ಮಳೆಯಿಂದಾಗಿ ನದಿ-ತೊರೆಗಳಲ್ಲಿ ನೀರಿನ ಹರಿವು ಹೆಚ್ಚಾಗುತ್ತಿದೆ. ಹಾರಂಗಿ ಜಲಾಶಯಕ್ಕೆ ಹೆಚ್ಚು ನೀರು ಹರಿದು ಬರುತ್ತಿದ್ದು, ಇಂದು ಅಣೆಕಟ್ಟೆಯಿಂದ ನೀರು ಹೊರಬಿಡಲಾಗಿದೆ. ಮಳೆ ಹಾಗೂ ಸಣ್ಣ ಪ್ರಮಾಣದ ಗಾಳಿಯೂ ಕಂಡುಬರುತ್ತಿದ್ದು, ಕೆಲವೆಡೆ ರಸ್ತೆಗೆ ಅಡ್ಡಲಾಗಿ ಮರ ಬೀಳುವುದು, ಬರೆ ಜರಿತದಂತಹ ಪ್ರಕರಣಗಳು, ವಿದ್ಯುತ್ ಕಂಬಗಳಿಗೆ ಹಾನಿಯಾಗುತ್ತಿರುವ ಕುರಿತು ವರದಿಯಾಗಿದೆ. ಸಂಬಂಧಿಸಿದ ಇಲಾಖೆಗಳು ಸಮಸ್ಯೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.

ಕರಿಕೆ : ಚೆತ್ತುಕಾಯ ಕಾಲೋನಿ ಶಾಲೆಯ ಎದುರು ಹಾಗೂ ಹಿಂಬದಿ ದೊಡ್ಡ ಪ್ರಮಾಣದಲ್ಲಿ ಬರೆ ಕುಸಿದಿದ್ದು, ಸಮೀಪದಲ್ಲಿರುವ ವಾಲ್ಮೀಕಿ ಆಶ್ರಮ ಶಾಲೆಯ ತಡೆಗೋಡೆ ಕುಸಿದಿದ್ದು, ಶಾಲೆಯ ಕಟ್ಟಡಕ್ಕೆ ಹಾನಿಯಾಗುವ ಸಾಧ್ಯತೆಗಳಿವೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಣಪತಿ ಹಾಗೂ ಪಂಚಾಯಿತಿ ಸದಸ್ಯ ನಾರಾಯಣ ಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದು ಈ ಸಂದರ್ಭ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೃಷ್ಣ್ಣ, ಮುಖ್ಯ ಶಿಕ್ಷಕರುಗಳಾದ ಮಹಾಲಕ್ಷ್ಮಿ, ಬರಮಪ್ಪ ಪಾಷಾಗಾರ್ ಹಾಜರಿದ್ದರು.

ಇದಲ್ಲದೆ ಕುಂಡತ್ತಿಕಾನದ ನಿಡ್ಯಮಲೆ ಜೋಯಪ್ಪ ಹಾಗೂ ಗಂಗಾಧರ ಕೆ.ಎ. ಮನೆ ಹಿಂಬದಿ ಯಲ್ಲಿ ಬೃಹತ್ ಪ್ರಮಾಣದಲ್ಲಿ ಗುಡ್ಡ ಕುಸಿದು ಮನೆಯ ಗೋಡೆಗೆ ಅಪ್ಪಳಿಸಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು

(ಮೊದಲ ಪುಟದಿಂದ) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ಕಾರಣದಿಂದ ಗ್ರಾಮದ ಹಲವೆಡೆ ರಸ್ತೆ, ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ಗ್ರಾಮಸ್ಥರು ಸಂಕಷ್ಟಕ್ಕೀಡಾಗಿದ್ದಾರೆ.ರಾಜ್ಯ ಹೆದ್ದಾರಿ ಮಂಗಳೂರು ರಸ್ತೆಯ ಎರಡನೇ ಮೊಣ್ಣಂಗೇರಿ ಬಳಿ ರಸ್ತೆ ಬದಿ ಮಣ್ಣು ಕುಸಿದಿದ್ದು, ಕೂಡಲೇ ತೆರವುಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.

ಮಡಿಕೇರಿ- ಭಾಗಮಂಡಲ ರಸ್ತೆಯ ಬೆಟ್ಟಗೇರಿ-ಬಕ್ಕ ಬಳಿ ರಸ್ತೆಗಡ್ಡಲಾಗಿ ಬಿದ್ದಿದ್ದ ಮರವನ್ನು ಹಾಗೂ ಮಡಿಕೇರಿ-ಭಾಗಮಂಡಲ- ಕರಿಕೆ ರಸ್ತೆ ಮೇಲೆ ಭೂಕುಸಿತವಾಗಿದ್ದ ಮಣ್ಣನ್ನು ಮಡಿಕೇರಿ ವಲಯ ಅರಣ್ಯ ಇಲಾಖಾ ಸಿಬ್ಬಂದಿಗಳು ತೆರವುಗೊಳಿಸಿದರು.ಸಂಪಾಜೆ ಹೋಬಳಿ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಪೆರಾಜೆ ಮೂಲಕ ಹರಿಯುತ್ತಿರುವ ಪಯಸ್ವಿನಿ ನದಿ ತುಂಬಿ ಹರಿಯುತ್ತಿದೆ. ಹೆದ್ದಾರಿ ಬದಿಯಲ್ಲಿ ನದಿ ಹರಿಯುತ್ತಿದ್ದು, ನದಿ ನೀರು ರಸ್ತೆಗೆ ಬಂದ ಪರಿಣಾಮ ನೀರಿನೊಂದಿಗೆ ಮೀನುಗಳು ಕೂಡ ಬಂದು ರಸ್ತೆ ಬದಿಯ ಚರಂಡಿಯಲ್ಲಿ ಸೇರಿಕೊಂಡಿದ್ದವು. ಇದನ್ನು ಗಮನಿಸಿದ ಗ್ರಾಮಸ್ಥರು ಹಾಗೂ ದಾರಿಹೋಕರು ಚರಂಡಿಗೆ ಇಳಿದು ಮೀನು ಹಿಡಿಯುತ್ತಿದ್ದ ದೃಶ್ಯ ಹೆದ್ದಾರಿ ಬದಿಯಲ್ಲಿ ಕಂಡು ಬಂದಿತು..!

ರಾಜ್ಯ ಹೆದ್ದಾರಿ ಮಂಗಳೂರು ರಸ್ತೆಯ ಮದೆ ಗ್ರಾ.ಪಂ. ವ್ಯಾಪ್ತಿಯ ಕರ್ತೋಜಿ ಎಂಬಲ್ಲಿ ರಸ್ತೆಯಲ್ಲಿ ಮತ್ತೆ ಉಬ್ಬು ಕಾಣಿಸಿಕೊಂಡಿದೆ. ಮಳೆಯ ಪ್ರಮಾಣ ತೀವ್ರಗೊಳ್ಳುತ್ತಿದ್ದಂತೆ ರಸ್ತೆ ಭೂಮಿಯೊಳಗಿನಿಂದ ಉಬ್ಬಿಕೊಂಡು ಮೇಲಕ್ಕೆ ಬರುತ್ತಿದೆ. ಕಳೆದ ಬಾರಿಯ ಮಳೆಗಾಲದಲ್ಲೂ ಕೂಡ ಇದೇ ರೀತಿ ಉಬ್ಬು ಕಾಣಿಸಿಕೊಂಡು ವಾಹನಗಳು ಸಂಚರಿಸಲು ಸಾಧ್ಯವಾಗದೆ ನಂತರ ಕಲ್ಲು, ಸಿಮೆಂಟ್‍ಗಳನ್ನು ಬಳಸಿ ದುರಸ್ತಿಪಡಿಸಲಾಗಿತ್ತು. ಇದೀಗ ಮತ್ತೆ ಉಬ್ಬು ಕಾಣಿಸಿಕೊಂಡಿದ್ದು, ಒಂದು ವೇಳೆ ವಾಹನಗಳ ಚಕ್ರ ಹಾದು ಹೋದರೆ ಹುದುಗಿಕೊಳ್ಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಕರ್ತೋಜಿಯ ಈ ಭಾಗ 2018ರಲ್ಲಿ ಭೂಕುಸಿತಕ್ಕೆ ತುತ್ತಾಗಿದ್ದು, ನಂತರದಲ್ಲಿ ಹೊಸದಾಗಿ ರಸ್ತೆ ಮಾಡಲಾಗಿತ್ತು.ಭಾರೀ ಗಾಳಿ ಮಳೆಗೆ ಕರಿಕೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಭೂಕುಸಿತವುಂಟಾಗಿದ್ದು, ಇದರಿಂದಾಗಿ ವಿದ್ಯುತ್ ಕಂಬಗಳು ಧರೆಗುರುಳಿವೆ. ಗ್ರಾಮದಲ್ಲಿ ವಿದ್ಯುತ್ ಕಡಿತವುಂಟಾಗಿ ಕತ್ತಲಾವರಿಸಿದೆ.

-ಸುಧೀರ್, ಕಿರಣ್, ಸುನಿಲ್, ಇಬ್ರಾಹಿಂ, ಕೆ.ಕೆ.ಎನ್. ಶೆಟ್ಟಿಶನಿವಾರಸಂತೆ: ಪಟ್ಟಣದಲ್ಲಿ ಶನಿವಾರ ವಾರದ ಸಂತೆಯ ದಿನವಾಗಿದ್ದು, ನಾಲ್ಕೈದು ದಿನಗಳಿಂದ ಸುರಿದ ಮಳೆಗೆ ಮಾರುಕಟ್ಟೆ ರಸ್ತೆಗಳೆಲ್ಲ ಕೆಸರುಮಯವಾಗಿತ್ತು. ಹೆಜ್ಜೆ ಇಟ್ಟಲ್ಲಿ ಜಾರುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಜಿನುಗುತ್ತಿದ್ದ ಮಳೆ 2 ಗಂಟೆಯ ನಂತರ ಬಿಡುವು ನೀಡಿತ್ತು. ಬಿಸಿಲಿನ ವಾತಾವರಣವಿತ್ತು. ಮಳೆಯ ಕಾರಣ ಸಂತೆಯಲ್ಲಿ ಗ್ರಾಹಕರ ಸಂಖ್ಯೆ ಕಡಿಮೆಯಾಗಿತ್ತು. ನೆರೆ ಜಿಲ್ಲೆಯಿಂದ ಬಂದಿದ್ದ ವ್ಯಾಪಾರಿಗಳು ಮಾತ್ರ ಗ್ರಾಹಕರ ನಿರೀಕ್ಷೆಯಲ್ಲಿ ಸಂಜೆಯವರೆಗೂ ಕಾಯ್ದು ಮರಳಿದರು. ತರಕಾರಿ ಬೆಲೆಯೂ ಕೊಂಚ ಕಡಿಮೆಯಾಗಿತ್ತು. ಟೊಮೆಟೊ 1 ಕೆ.ಜಿ.ಗೆ ರೂ. 25, ಈರುಳ್ಳಿ ಕೆ.ಜಿ.ಗೆ ರೂ. 20 ದರವಿದ್ದು, ಗ್ರಾಹಕರು ಮುಗಿಬಿದ್ದು ಖರೀದಿಸಿದರು.

ಸಂತೆ ಮಾರುಕಟ್ಟೆ ಅಭಿವೃದ್ಧಿ ನೈರ್ಮಲ್ಯದ ಬಗ್ಗೆ ಗ್ರಾಮ ಪಂಚಾಯಿತಿ ತಲೆಕೆಡಿಸಿಕೊಳ್ಳುತ್ತಿಲ್ಲ. ಪ್ರತಿ ವರ್ಷ ಮಳೆಗಾಲ ಬಂದಾಗ ಸೂರಿಲ್ಲದ ತರಕಾರಿ ವ್ಯಾಪಾರಿಗಳ ಗೋಳು ಕೇಳುವವರಿಲ್ಲ. ಅವೈಜ್ಞಾನಿಕ ರಸ್ತೆ, ಚರಂಡಿಗಳಿಂದ ಕೆಸರು ತುಂಬಿ ಜಾರಿ ಬೀಳುವ ಭಯದಿಂದ ಗ್ರಾಹಕರು ಸಂತೆಗೆ ಬರುವುದೇ ಇಲ್ಲ ಎಂದು ವ್ಯಾಪಾರಿ ಬಾಬು ಅಸಮಾಧಾನ ವ್ಯಕ್ತಪಡಿಸಿದರು.ಶನಿವಾರಸಂತೆ: ಪಟ್ಟಣದಲ್ಲಿ ಶನಿವಾರ ವಾರದ ಸಂತೆಯ ದಿನವಾಗಿದ್ದು, ನಾಲ್ಕೈದು ದಿನಗಳಿಂದ ಸುರಿದ ಮಳೆಗೆ ಮಾರುಕಟ್ಟೆ ರಸ್ತೆಗಳೆಲ್ಲ ಕೆಸರುಮಯವಾಗಿತ್ತು. ಹೆಜ್ಜೆ ಇಟ್ಟಲ್ಲಿ ಜಾರುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಜಿನುಗುತ್ತಿದ್ದ ಮಳೆ 2 ಗಂಟೆಯ ನಂತರ ಬಿಡುವು ನೀಡಿತ್ತು. ಬಿಸಿಲಿನ ವಾತಾವರಣವಿತ್ತು. ಮಳೆಯ ಕಾರಣ ಸಂತೆಯಲ್ಲಿ ಗ್ರಾಹಕರ ಸಂಖ್ಯೆ ಕಡಿಮೆಯಾಗಿತ್ತು. ನೆರೆ ಜಿಲ್ಲೆಯಿಂದ ಬಂದಿದ್ದ ವ್ಯಾಪಾರಿಗಳು ಮಾತ್ರ ಗ್ರಾಹಕರ ನಿರೀಕ್ಷೆಯಲ್ಲಿ ಸಂಜೆಯವರೆಗೂ ಕಾಯ್ದು ಮರಳಿದರು. ತರಕಾರಿ ಬೆಲೆಯೂ ಕೊಂಚ ಕಡಿಮೆಯಾಗಿತ್ತು. ಟೊಮೆಟೊ 1 ಕೆ.ಜಿ.ಗೆ ರೂ. 25, ಈರುಳ್ಳಿ ಕೆ.ಜಿ.ಗೆ ರೂ. 20 ದರವಿದ್ದು, ಗ್ರಾಹಕರು ಮುಗಿಬಿದ್ದು ಖರೀದಿಸಿದರು.

ಸಂತೆ ಮಾರುಕಟ್ಟೆ ಅಭಿವೃದ್ಧಿ ನೈರ್ಮಲ್ಯದ ಬಗ್ಗೆ ಗ್ರಾಮ ಪಂಚಾಯಿತಿ ತಲೆಕೆಡಿಸಿಕೊಳ್ಳುತ್ತಿಲ್ಲ. ಪ್ರತಿ ವರ್ಷ ಮಳೆಗಾಲ ಬಂದಾಗ ಸೂರಿಲ್ಲದ ತರಕಾರಿ ವ್ಯಾಪಾರಿಗಳ ಗೋಳು ಕೇಳುವವರಿಲ್ಲ. ಅವೈಜ್ಞಾನಿಕ ರಸ್ತೆ, ಚರಂಡಿಗಳಿಂದ ಕೆಸರು ತುಂಬಿ ಜಾರಿ ಬೀಳುವ ಭಯದಿಂದ ಗ್ರಾಹಕರು ಸಂತೆಗೆ ಬರುವುದೇ ಇಲ್ಲ ಎಂದು ವ್ಯಾಪಾರಿ ಬಾಬು ಅಸಮಾಧಾನ ವ್ಯಕ್ತಪಡಿಸಿದರು.ಎರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಲವು ಕಡೆ ರಸ್ತೆ ಬದಿ ಬರೆಕುಸಿತ ಸಂಭವಿಸಿದೆ.

ಪೆರಾಜೆ ನಿಡ್ಯಮಲೆ ರಸ್ತೆ, ಗಡಿಗುಡ್ಡೆ ಅಮೆಚೂರ್ ಕಾವೇರಿ ರಸ್ತೆಯ ಬದಿಗಳಲ್ಲಿ ಚಿಕ್ಕ ಪುಟ್ಟ ಬರೆಗಳು ಜರಿದು, ಚರಂಡಿಗಳಲ್ಲಿ ಹರಿಯುವ ನೀರು ರಸ್ತಗಳಲ್ಲಿ ಹರಿಯುತ್ತಿದೆ.