ಮಡಿಕೇರಿ, ಜು. ೩: ತಾಲೂಕು ವ್ಯಾಪ್ತಿಯಲ್ಲಿ ಹೋಬಳಿವಾರು ಪೌತಿ/ ವಾರಸುದಾರಿಕೆಯ ಖಾತೆ ಆಂದೋಲನವು ತಾಲೂಕಿನ ವಿವಿಧ ದಿನದಂದು ವಿವಿಧ ಕಡೆಗಳಲ್ಲಿ ನಡೆಯಲಿದೆ ಎಂದು ತಹಶೀಲ್ದಾರ್ ಪಿ.ಎಸ್. ಮಹೇಶ್ ತಿಳಿಸಿದ್ದಾರೆ. ತಾ. ೪ ರಂದು (ಇಂದು) ಭಾಗಮಂಡಲ, ತಾ. ೭ ರಂದು ನಾಪೋಕ್ಲು, ತಾ. ೧೧ ರಂದು ಸಂಪಾಜೆ ಮತ್ತು ತಾ. ೧೪ ರಂದು ಮಡಿಕೇರಿಯಲ್ಲಿ ಪೌತಿ ಖಾತೆ ಆಂದೋಲನ ನಡೆಯಲಿದೆ.
ಪೌತಿ ಖಾತೆ ವರ್ಗಾವಣೆ ಮಾಡಲು ಖಾತೆದಾರರ ಮರಣ ದೃಢೀಕರಣ ಪತ್ರ, ಮರಣ ದೃಢೀಕರಣ ಪತ್ರ ಲಭ್ಯ ಇಲ್ಲದಿದ್ದಲ್ಲಿ ಆಧಾರ್ ಮತ್ತು ಪಡಿತರ ಚೀಟಿ ದಾಖಲೆಯನ್ನು ಸಂಬAಧಪಟ್ಟ ವಾರಸುದಾರರಿಂದ ಅಫಿಡವಿಟ್ ಪಡೆದುಕೊಳ್ಳುವುದು, ಆರ್ಡಿ ಸಂಖ್ಯೆಯುಳ್ಳ ವಂಶವೃಕ್ಷ ದೃಢೀಕರಣ ಪತ್ರ, ಚಾಲ್ತಿ ಸಾಲಿನ ಪಹಣಿ ಹಾಗೆಯೇ ಚಾಲ್ತಿ ಸಾಲಿನ ಪಹಣೆ ಕಾಲಂ ೧೦ ರಲ್ಲಿ ದಾಖಲಿರುವ ಮ್ಯೂಟೇಷನ್ ಪ್ರತಿ/ ಜಮಾಬಂದಿ ಹಾಗೂ ಆಧಾರ್ ಪ್ರತಿ ಮತ್ತು ದೂರವಾಣಿ ಸಂಖ್ಯೆಯನ್ನು ಸಲ್ಲಿಸಬೇಕು ಎಂದು ತಹಶೀಲ್ದಾರರು ತಿಳಿಸಿದ್ದಾರೆ. ಪೌತಿ ವಾರಸುದಾರಿಕೆಯ ಖಾತೆ ಸಂಬAಧ ದಾಖಲಾತಿಗಳೊಂದಿಗೆ (ಪಟ್ಟೆದಾರರು ಮರಣ ಹೊಂದಿದ್ದರೆ ಪಟ್ಟೆದಾರರ ನೇರ ವಾರಸುದಾರರಲ್ಲದೇ ಇತರೆ ಸಂಬAಧಿಗಳಿಗೆ ನೇರ ಖಾತೆ ಮಾಡುವ ಪ್ರಕ್ರಿಯೆ ಹೊರತುಪಡಿಸಿ) ನಮೂನೆ-೧ ರಲ್ಲಿ ಮನವಿ ಸಲ್ಲಿಸಬಹುದು ಎಂದು ತಹಶೀಲ್ದಾರ್ ತಿಳಿಸಿದ್ದಾರೆ.
*ಗೋಣಿಕೊಪ್ಪ: ಪೊನ್ನಂಪೇಟೆ ಹೋಬಳಿ ಗೋಣಿಕೊಪ್ಪ, ಪೊನ್ನಂಪೇಟೆ ಮತ್ತು ಅರುವತ್ತೊಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಂತೆ ಪೌತಿ ಖಾತೆ ಆಂದೋಲನವನ್ನು ತಾ. ೧೧ ರಂದು ಪೊನ್ನಂಪೇಟೆ ತಾಲೂಕು ಕಚೇರಿಯಲ್ಲಿ ನಡೆಸಲಾಗುವುದು ಎಂದು ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಎನ್.ಎಸ್. ಪ್ರಶಾಂತ್ ಮಾಹಿತಿ ನೀಡಿದ್ದಾರೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸಂಬAಧಿಸಿದವರು ಪೌತಿ ಖಾತಾ ಆಂದೋಲನದಲ್ಲಿ ಭಾಗಿಯಾಗಿ ಕೃಷಿ ಜಮೀನಿನ ಭೂಮಾಲೀಕರು ಮರಣ ಹೊಂದಿದ ನಂತರದ ಭೂಮಾಲೀಕತ್ವದ ಹೆಸರು ಬದಲಾವಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅಂದು ಪೊನ್ನಂಪೇಟೆ ಹೋಬಳಿ ಉಪತಹಶೀಲ್ದಾರ್, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು, ಸಹಾಯಕರು ಹಾಜರಿರುತ್ತಾರೆ. ಅಗತ್ಯ ದಾಖಲೆಗಳಾದ ಪಹಣಿ, ವಂಶವೃಕ್ಷ, ಮರಣ ಪ್ರಮಾಣ ಪತ್ರ, ಆಧಾರ್, ಕುಟುಂಬ ಒಪ್ಪಿಗೆ ಪತ್ರಗಳೊಂದಿಗೆ ಹಾಜರಾಗುವಂತೆ ತಹಶೀಲ್ದಾರ್ ಮನವಿ ಮಾಡಿದ್ದಾರೆ.
ಕೂಡಿಗೆ: ಕುಶಾಲನಗರ ತಾಲೂಕು ಕುಶಾಲನಗರ ಹೋಬಳಿ ವ್ಯಾಪ್ತಿಯ ಪೌತಿ ಖಾತೆ ಆಂದೋಲನ ಕಾರ್ಯಕ್ರಮವು ತಾ ೬. ರಂದು ಕುಶಾಲನಗರದ ನಾಡ ಕಚೇರಿಯ ಸಭಾಂಗಣದಲ್ಲಿ ನಡೆಯಲಿದೆ. ಆಂದೋಲನ ಕಾರ್ಯಕ್ರಮದ ಅಡಿಯಲ್ಲಿ ವರ್ಗಾವಣೆ ಸಂಬAಧ ಅರ್ಜಿ ಸ್ವೀಕಾರ ಬೆಳಿಗ್ಗೆ ೧೧ ರಿಂದ ಮಧ್ಯಾಹ್ನ ೧ ಗಂಟೆಯವರೆಗೆ ನಾಡಕಚೇರಿ ಸಭಾಂಗಣದಲ್ಲಿ ತಹಶೀಲ್ದಾರ್ ಟಿ.ಎಂ. ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆಯಲಿದೆ ಸಾರ್ವಜನಿಕರು, ರೈತ ವರ್ಗದವರು ಪೌತಿ ಖಾತೆ ವರ್ಗಾವಣೆಗಾಗಿ ಪಹಣಿ ಕುಟುಂಬ ವಂಶವೃಕ್ಷ ದೃಢೀಕೃತ ಮರಣ ಪ್ರಮಾಣ ಪತ್ರ ಆಧಾರ್ ಕಾರ್ಡ್ ಪ್ರತಿಗಳೊಂದಿಗೆ ಅರ್ಜಿ ಸಲ್ಲಿಸಿ ಕಾರ್ಯಕ್ರಮ ಸದುಪಯೋಗ ಪಡಿಸಿಕೊಳ್ಳಬೇಕಾಗಿ ಉಪ ತಹಶೀಲ್ದಾರ್ ಕೆ.ಜೆ. ಮಧುಸೂದನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.