ವೀರಾಜಪೇಟೆ, ಜು. 2: ವೀರಾಜಪೇಟೆ ವಂಡರ್ ವಲ್ರ್ಡ್ ಸ್ಟೂಡಿಯೋದಲ್ಲಿ ಸುಮಾರು ಮೂರು ದಶಕಗಳಿಂದ ಛಾಯಾಚಿತ್ರಗಾರರಾಗಿ ಕೆಲಸ ನಿರ್ವಹಿಸುತ್ತಿರುವ ಎಂ.ಕೆ. ರವಿಕುಮಾರ್ ಅವರಿಗೆ ಪ್ರಸಕ್ತ ವರ್ಷದ ಛಾಯಾ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿ ಮಂಟಪದಲ್ಲಿ ಕರ್ನಾಟಕ ರಾಜ್ಯದ ಛಾಯಾಚಿತ್ರಗಾರರ ಸಂಘದ ವತಿಯಿಂದ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಧ್ಯಕ್ಷ ಎಸ್. ಪರಮೇಶ ಮತ್ತು ಇತರ ಗಣ್ಯರು ಸಾಧಕರುಗಳನ್ನು ಸನ್ಮಾನಿಸಿದರು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಿಲ್ಲಾ ಅಧ್ಯಕ್ಷ ಸುರೇಶ್ ಮಾವಟ್ಕರ್, ಜಿಲ್ಲಾ ಸಮಿತಿಯ ಸದಸ್ಯರು, ಕೊಡಗಿನ ವಿವಿಧ ತಾಲೂಕಿನ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯ ಸದಸ್ಯರು ಹಾಗೂ ಸದಸ್ಯರು ಭಾಗವಹಿಸಿದ್ದರು.

ಈ ಸಂದರ್ಭ ಕೊಡಗಿನ ಉತ್ತಮ ಛಾಯಾಚಿತ್ರಗಾರರಾದ ಮಡಿಕೇರಿಯ ರೋಷನ್, ವಿಘ್ನೇಶ್, ಸುರೇಶ್, ಮುನಿರ್, ಸೋಮವಾರ ಪೇಟೆ ತಾಲೂಕಿನಲ್ಲಿರುವ ವಾಣಿಜ್ಯ, ಜನಾರ್ಧನ, ವಸಂತ್, ವಿನಯ್, ಡೇವಿಡ್, ವೀರಾಜಪೇಟೆ ಹಾಗೂ ಪೆÇನ್ನಪೇಂಟೆ ತಾಲೂಕಿನ ಸತೀಶ್, ಆನಂದ, ರಾಜ, ಸುರೇಶ್, ನಾಸಿರ್, ಡಾಡು ಜೋಸೆಫ್, ದೀಪಕ್, ರಾಮದಾಸ್, ಅವರನ್ನು ಉತ್ತಮ ಛಾಯಾಚಿತ್ರಗಾರರಾಗಿ ಗುರುತಿಸಿ ಸನ್ಮಾನ ಮಾಡಲಾಯಿತು.