ಚೆಯ್ಯಂಡಾಣೆ, ಜು. 2 : ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಬೆಳಿಯಂಡ್ರ, ಪೆÇಕ್ಕುಳಂಡ್ರ, ಮಂಞಪುರ, ಎಡಪಾಲ ಪೈಸಾರಿಗಳಲ್ಲಿ ಕಾಡಾನೆ ಹಾವಳಿ ಹೆಚ್ಚಿದ್ದು, ನಿರಂತರ ದಾಳಿ ನಡೆಸಿ ಪಸಲನ್ನು ನಾಶ ಪಡಿಸಿದೆ. ಮನೆಯ ಗೇಟ್ಗಳನ್ನು ತುಳಿದು ನಾಶಪಡಿಸಿದ್ದು. ಕಾಡಾನೆ ಹಾವಳಿಯನ್ನು ಶಾಶ್ವತವಾಗಿ ತಡೆಗಟ್ಟಲು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಬೆಳಿಯಂಡ್ರ ಸೋಮಣ್ಣ, ಹರಿಪ್ರಶಾದ್, ವೇಣುಗೋಪಾಲ್ ಮಾಲೀಕತ್ವದ ತೋಟಗಳನ್ನು ಹಾಗೂ ಮನೆಯ ಗೇಟಗೆ ಹಾನಿಪಡಿಸಿದ್ದು. ಪೆÇಕ್ಕುಳಂಡ್ರ ದನೋಜ್, ಪ್ರವೀಣ್, ಸೂರಜ್, ಗಿರಿ, ನಿಶಾಂತ್, ಚಾಯಪ್ರಕಾಶ್ ಎಡಪಾಲದ ಪೆÇಲೀಸ್ ಹಂಝ, ಬಶೀರ್ ಅವರ ತೋಟಗಳಲ್ಲಿ ಕಾಫಿ, ಅಡಿಕೆ, ಬಾಳೆ ಗಿಡಗಳನ್ನು ತುಳಿದು ನಾಶಪಡಿಸಿವೆ. ಕೂಡಲೇ ಸಂಬಂಧಪಟ್ಟ ಅರಣ್ಯಾಧಿಕಾರಿಗಳು ಕ್ರಮ ಕೈಗೊಂಡು ನಷ್ಟ ಅನುಭವಿಸಿದ ಗ್ರಾಮಸ್ಥರಿಗೆ ಪರಿಹಾರ ನೀಡಬೇಕೆಂದು ಮತ್ತು ಕಾಡಾನೆ ನುಸುಳದ ರೀತಿಯಲ್ಲಿ ಶಾಶ್ವತ ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.