ಪೆÇನ್ನಂಪೇಟೆ, ಜು. 2: ಕೊಡಗು ಫಾರ್ ಟುಮಾರೋ ಸ್ವಯಂ ಸೇವಾ ಸಂಸ್ಥೆಯ ವತಿಯಿಂದ ಪೆÇನ್ನಂಪೇಟೆ ಪ್ರಶಾಂತಿ ನಿಲಯ ಸಾಯಿ ಶಂಕರ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಪ್ಲಾಂಟೇಶನ್ ಡ್ರೈವ್ -5 ಕಾರ್ಯಕ್ರಮದಲ್ಲಿ ವಿಭಿನ್ನ ತಳಿಯ 450 ಫಲ - ಪುಷ್ಪ ಗಿಡಗಳನ್ನು ವಿದ್ಯಾಸಂಸ್ಥೆಯ ಆವರಣದಲ್ಲಿ ನೆಡಲಾಯಿತು. ಸಾಯಿ ಶಂಕರ ವಿದ್ಯಾಸಂಸ್ಥೆಯ ಅಧ್ಯಕ್ಷ ಝರು ಗಣಪತಿ, ಕೊಡಗು ಫಾರ್ ಟುಮಾರೊ ಸಂಸ್ಥೆಯ ಅಧ್ಯಕ್ಷ ಪೆÇನ್ನೋಳತಂಡ ಕಾವೇರಪ್ಪ ಹಾಗೂ ಪ್ರಾಯೋಜಕರಾದ ಪ್ರಾರ್ಥನ್ ಚಿಟ್ಟಿಯಪ್ಪ ಗಿಡ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೊಡಗು ಫಾರ್ ಟುಮಾರೋ ಸಂಸ್ಥೆಯ ಸ್ವಯಂಸೇವಕರಾದ ಪೂರ್ಣ, ಕಾರ್ಯಕ್ರಮದ ಮಹತ್ವದ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಕೊಡಗು ಫಾರ್ ಟುಮಾರೋ ಸಂಸ್ಥೆ ಸಲಹೆಗಾರರಾದ ಚರಿತಾ ಕಾರ್ಯಪ್ಪ, ಸ್ವಯಂಸೇವಕರುಗಳು, ಸಾಯಿ ಶಂಕರ ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ರಮ್ಯಾ, ಶಾಲಾ ಮುಖ್ಯೋಪಾಧ್ಯಾಯರಾದ ನಿವ್ಯ, ರೀನಾ, ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಾಂಶುಪಾಲೆ ಗೀತಾ ನಾಯ್ಡು ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.