ಬಿಜೆಪಿ ನಾಯಕಿ ನೂಪುರ್ ಶರ್ಮಾಗೆ ಸಕ್ರ್ಯುಲರ್!
ಕೋಲ್ಕತಾ, ಜು. 2: ಪ್ರವಾದಿ ಮಹಮದ್ ಕುರಿತಂತೆ ಹೇಳಿಕೆ ನೀಡಿದ್ದ ಬಿಜೆಪಿ ನಾಯಕಿ ನೂಪುರ್ ಶರ್ಮಾಗೆ ಕೋಲ್ಕತಾ ಪೆÇಲೀಸರು ಲುಕೌಟ್ ಸಕ್ರ್ಯುಲರ್ ಜಾರಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಪ್ರವಾದಿ ಮಹಮದ್ ಕುರಿತು ಹೇಳಿಕೆ ನೀಡಿ ವ್ಯಾಪಕ ಟೀಕೆಗೆ ಗುರಿಯಾಗಿ ಅಮಾನತುಗೊಂಡ ಬಿಜೆಪಿ ನಾಯಕ ನೂಪುರ್ ಶರ್ಮಾ ವಿರುದ್ಧ ಕೋಲ್ಕತ್ತಾ ಪೆÇಲೀಸರು ಲುಕ್ ಔಟ್ ಸುತ್ತೋಲೆ ಹೊರಡಿಸಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ಕತಾದ ಅಮ್ಹೆಸ್ರ್ಟ್ ಮತ್ತು ನರ್ಕೆಲ್ದಂಗ ಪೆÇಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ದೂರಿಗೆ ಸಂಬಂಧಿಸಿದಂತೆ ಈ ಹಿಂದೆ ಪೆÇಲೀಸರು 2 ಬಾರಿ ವಿಚಾರಣೆಗೆ ಕರೆದಿದ್ದರು. ಆದರೆ ನೂಪುರ್ ಶರ್ಮಾ ವಿಚಾರಣೆಗೆ ಗೈರಾದಿದ್ದರು. ಈ ಸಂಬಂಧ ಪೆÇಲೀಸರು ವಿವರ ಕೋರಿದ್ದರೂ ಕಾರಣಾಂತರಗಳಿಂದ ತಾವು ವಿಚಾರಣೆಗೆ ಹಾಜರಾಗಿರಲಿಲ್ಲ. ಅಲ್ಲದೆ ವಿಚಾರಣೆಗೆ ಹೆಚ್ಚಿನ ಸಮಯ ಕೋರಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಇದೀಗ ಕೋಲ್ಕತಾ ಪೆÇಲೀಸರು ನೂಪುರ್ ಶರ್ಮಾ ವಿರುದ್ಧ ಲುಕೌಟ್ ಸಕ್ರ್ಯುಲರ್ ಹೊರಡಿಸಿದ್ದಾರೆ. ತನ್ನ ಹೇಳಿಕೆ ವಿರೋಧಿಸಿ ದೇಶಾದ್ಯಂತ ದಾಖಲಾಗಿರುವ ದೂರುಗಳನ್ನು ಮತ್ತು ವಿಚಾರಣೆಯನ್ನು ದೆಹಲಿಗೆ ವರ್ಗಾವಣೆ ಮಾಡುವಂತೆ ನೂಪುರ್ ಶರ್ಮಾ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ನೂಪುರ್ ಶರ್ಮಾ ಅವರಿಗೆ ಛೀಮಾರಿ ಹಾಕಿತ್ತು.
ಕನ್ಹಯ್ಯ ಲಾಲ್ ಹತ್ಯೆ: ಕೋರ್ಟ್ ಆವರಣದಲ್ಲಿ ಆರೋಪಿಗಳ ಮೇಲೆ ಹಲ್ಲೆ;
ಉದಯಪುರ, ಜು. 2: ಕನ್ಹಯ್ಯ ಲಾಲ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾದ ಮೊಹಮ್ಮದ್ ರಿಯಾಜ್ ಮತ್ತು ಗೌಸ್ ಮೊಹಮ್ಮದ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಜುಲೈ 12ರವರೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ ಕಸ್ಟಡಿಗೆ ಕಳುಹಿಸಲಾಗಿದೆ. ಇಂದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಸಂದರ್ಭದಲ್ಲಿ ಅಲ್ಲಿ ನೆರೆದಿದ್ದ ಲಾಯರ್ಗಳು ಹತ್ಯೆ ಆರೋಪಿಗಳ ಮೇಲೆ ಹಲ್ಲೆ ನಡೆಸಿದ್ದು, ಅಲ್ಲದೆ ಬಾಟಲಿಗಳನ್ನು ಅವರ ಮೇಲೆ ಎಸೆದಿದ್ದಾರೆ. ಜೂನ್ 28 ರಂದು ಹಾಡಹಗಲೇ ಆರೋಪಿಗಳು ಹಿಂದೂ ವ್ಯಕ್ತಿ ಕನ್ಹಯ್ಯಾ ಲಾಲ್ ಅವರ ಶಿರಚ್ಛೇದ ಮಾಡಿದ್ದರು. ಉದಯಪುರ ಹತ್ಯೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಬಿಜೆಪಿ ನಾಯಕ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮ ಪೆÇೀಸ್ಟ್ ಮಾಡಿದ್ದಕ್ಕೆ ಟೈಲರ್ ಅವರನ್ನು ಹತ್ಯೆ ಮಾಡಲಾಗಿತ್ತು. ಇಬ್ಬರು ಪ್ರಮುಖ ಆರೋಪಿಗಳು ಬೈಕ್ ನಲ್ಲಿ ಪರಾರಿಯಾಗುತ್ತಿದ್ದಾಗ ರಾಜಸ್ತಾನ ಪೆÇಲೀಸರು ಬೆನ್ನಟ್ಟಿ ಬಂಧಿಸಿದ್ದರು. ಏತನ್ಮಧ್ಯೆ, ಗುಪ್ತಚರ ಮೂಲಗಳು, ಪ್ರಮುಖ ಆರೋಪಿಯನ್ನು ಪಾಕಿಸ್ತಾನ ಮೂಲದ ಹ್ಯಾಂಡ್ಲರ್ಗಳು ಸಲ್ಮಾನ್ ಹೈದರ್ ಮತ್ತು ಅಬು ಇಬ್ರಾಹಿಂ ಎಂದು ಗುರುತಿಸಿದ್ದಾರೆ..
ಮಹಾರಾಷ್ಟ್ರ ವ್ಯಾಪಾರಿ ಹತ್ಯೆ ಪ್ರಕರಣ ಎನ್ಐಎ ತನಿಖೆಗೆ
ನವದೆಹಲಿ, ಜು. 2: ಬಿಜೆಪಿ ನಾಯಕಿ ನೂಪುರ್ ಶರ್ಮಾ ಬೆಂಬಲಿಸಿ ಪೆÇೀಸ್ಟ್ ಹಾಕಿದ್ದಕ್ಕೆ ಹತ್ಯೆಗೀಡಾದ ಮಹಾರಾಷ್ಟ್ರ ಮೆಡಿಕಲ್ ಸ್ಟೋರ್ ವ್ಯಾಪಾರಿ ಹತ್ಯೆ ಪ್ರಕರಣ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಲಾಗಿದೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಮರಾವತಿ ಮೂಲದ ಔಷಧ ಅಂಗಡಿ ಮಾಲೀಕ ಉಮೇಶ್ ಕೋಲ್ಹೆ ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸುವಂತೆ ಆದೇಶಿಸಿದ್ದಾರೆ ಎಂದು ತಿಳಿದುಬಂದಿದೆ. ನೂಪುರ್ ಶರ್ಮಾ ಅವರ ಹೇಳಿಕೆಗಳನ್ನು ಬೆಂಬಲಿಸಿ ಔಷಧ ಅಂಗಡಿ ಮಾಲೀಕ ಉಮೇಶ್ ಕೋಲ್ಹೆ ಸಾಮಾಜಿಕ ಜಾಲತಾಣದಲ್ಲಿ ಪೆÇೀಸ್ಟ್ ಹಾಕಿದ್ದರು. ಆದರೆ ಈ ಪೆÇೀಸ್ಟ್ ಮುಸ್ಲಿಮರು ಸದಸ್ಯರಾಗಿದ್ದ ವಾಟ್ಸಪ್ ಗ್ರೂಪ್ನಲ್ಲೂ ಷೇರ್ ಆಗಿತ್ತು. ಇದರ ಬೆನ್ನಲ್ಲೇ ಅವರ ಹತ್ಯೆಯಾಗಿದೆ. ಅವರ ಅಂಗಡಿ ಗ್ರಾಹಕನೇ ಆಗಿದ್ದ ಪ್ರಕರಣದ ಪ್ರಮುಖ ಆರೋಪಿ ಇರ್ಫಾನ್ ಖಾನ್ ಮತ್ತು ಅಮರಾವತಿ ಸ್ಥಳೀಯ ನಿವಾಸಿಗಳು ಕೋಲ್ಹೆ ಅವರನ್ನು ಜೂನ್ 21ರಂದು ಹತ್ಯೆ ಮಾಡಿದ್ದರು. ಅಂದು ರಾತ್ರಿ ಅಂಗಡಿ ಬಾಗಿಲು ಮುಚ್ಚಿ ಮನೆಗೆ ತೆರಳುತ್ತಿದ್ದ ಅವರ ಮೇಲೆ ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅಡ್ಡಗಟ್ಟಿ ಚಾಕುವಿನಿಂದ ಹಲ್ಲೆ ಮಾಡಿದ್ದರು.
ಏಕನಾಥ್ ಶಿಂಧೆಯನ್ನು ಶಿವಸೇನೆಯಿಂದ ವಜಾ
ಮುಂಬೈ, ಜು. 2: ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ತಮ್ಮ ವಿರುದ್ಧ ಬಂಡಾಯವೆದ್ದಿದ್ದ ಏಕನಾಥ್ ಶಿಂಧೆ ಅವರನ್ನು ಶಿವಸೇನಾ ನಾಯಕನ ಸ್ಥಾನದಿಂದ ವಜಾಗೊಳಿಸಿದ್ದಾರೆ. ಶಿಂಧೆ ನೇತೃತ್ವದ ಶಿವಸೇನೆಯ ಬಂಡಾಯ ಶಾಸಕರಿಂದ ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿ ಆಗಿತ್ತು. ಅವರು ಬೆಂಬಲಿತ ಇತರ ಶಾಸಕರೊಂದಿಗೆ ಗುವಾಹಟಿಯಲ್ಲಿ ಉಳಿದಿದ್ದರು. ಇದರ ಬೆನ್ನಲ್ಲೆ ಉದ್ಧವ್ ಠಾಕ್ರೆ ಬುಧವಾರ ರಾಜೀನಾಮೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಕ್ಕಾಗಿ ಶಿಂಧೆ ಅವರನ್ನು ತೆಗೆದುಹಾಕಲಾಗಿದೆ ಎಂದು ಶಿವಸೇನೆ ಮಾಹಿತಿ ನೀಡಿದೆ. ಮಹಾರಾಷ್ಟ್ರದ ಮಾಜಿಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಂಡಾಯ ಶಿವಸೇನೆ ನಾಯಕ ಏಕನಾಥ್ ಶಿಂಧೆ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಿದ್ದಕ್ಕೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿತ್ತು. ಎರಡೂವರೆ ವರ್ಷಗಳ ಹಿಂದೆಯೇ ಶಿವಸೇನಾ ನಾಯಕನಿಗೆ ಸಿಎಂ ಸ್ಥಾನ ಬಿಟ್ಟುಕೊಡಲು ಬಿಜೆಪಿ ತೀರ್ಮಾನಿಸಿದ್ದರೆ, ಮಹಾ ವಿಕಾಸ್ ಅಘಾಡಿ (ಎಂವಿಎ) ಸೃಷ್ಟಿಯಾಗುತ್ತಿರಲೇ ಇಲ್ಲ ಎಂದು ಹೇಳಿತ್ತು.