ಮಡಿಕೇರಿ, ಜು. ೧: ಐಗೂರು, ಯಸಳೂರು ಮತ್ತು ಬಿಳಿಗೇರಿಯಲ್ಲಿರುವ ಸಂಬಾರ ಮಂಡಳಿಯ ಇಲಾಖಾ ನರ್ಸರಿಗಳಲ್ಲಿ ಉತ್ತಮ ಗುಣಮಟ್ಟದ ಸಾಂಬಾರ ನಾಟಿ ಸಾಮಗ್ರಿಗಳು ಲಭ್ಯವಿದೆ. ಕೊಡಗು ಜಿಲ್ಲೆಯ ರೈತರು ಈ ಹಂಗಾಮಿನಲ್ಲಿ ನಾಟಿ ಮಾಡಲು ಸಸಿಗಳನ್ನು ಪಡೆಯಬಹುದು. ಪ್ರತಿ ಚಿಕ್ಕ ಏಲಕ್ಕಿ ಬೀಜ ರೂ. ೧೨, ಪ್ರತಿ ಏಲಕ್ಕಿ ಕ್ಲೋನಲ್ ಸಕ್ಕರ್ ರೂ. ೬೫, ಬ್ಲಾಕ್ ಪೆಪ್ಪರ್ ರೂಟೆಡ್ ಕಟಿಂಗ್ಸ್ ರೂ. ೭ ಮತ್ತು ಕರಿಮೆಣಸು ನ್ಯೂಕ್ಲಿಯಸ್ ಮೆಟಿರಿಯಲ್ ರೂ. ೧೫.
ಐಗೂರು ಸಾಂಬಾರ ಮಂಡಳಿ ಇಲಾಖಾ ನರ್ಸರಿಯ ಫಾರ್ಮ್ ಮ್ಯಾನೇಜರ್-೮೩೧೦೨೦೮೯೪೦/೯೪೪೯೦೪೯೨೨೭/ ೯೭೪೫೨೯೫೪೭೦, ಯಸಳೂರು ಸಾಂಬಾರ ಮಂಡಳಿ ಇಲಾಖಾ ನರ್ಸರಿಯ ಫಾರ್ಮ್ ಮ್ಯಾನೇಜರ್ ೮೩೧೦೨೦೮೯೪೦/ ೯೪೪೯೦೪೯೨೨೭ ಹಾಗೂ ಬಿಳಿಗೇರಿ ಸಾಂಬಾರ ಮಂಡಳಿ ಇಲಾಖೆಯ ನರ್ಸರಿಯ ಫಾರ್ಮ್ ಮ್ಯಾನೇಜರ್ ೯೪೮೦೨೪೯೪೯೭/ ೭೯೭೫೩೫೪೦೦೫ನ್ನು ಸಂಪರ್ಕಿಸಬಹುದು ಎಂದು ಸಾಂಬಾರ ಮಂಡಳಿ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.