ಮಡಿಕೇರಿ, ಜು. ೧: ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖಾ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮಹಿಳಾ ಪದವೀಧರರಿಗೆ ಉದ್ಯಮ ಸ್ಥಾಪಿಸಲು ಪೂರಕವಾಗುವಂತೆ ಪ್ರತಿಷ್ಠಿತ ಬೆಂಗಳೂರಿನ ಐಐಎಂನಲ್ಲಿ ಉಚಿತ ಉದ್ಯಮಶೀಲತಾ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಯನ್ನು ಇಲಾಖೆಯ ಅಧಿಕೃತ ಜಾಲತಾಣ ತಿತಿತಿ.sತಿ.ಞಚಿಡಿ.ಟಿiಛಿ.iಟಿ ರಲ್ಲಿ ಆನ್ಲೈನ್ ಮೂಲಕ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ತಾ. ೧೮ ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಉಪ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಕೊಡಗು ಜಿಲ್ಲೆ, ಮಡಿಕೇರಿ ೦೮೨೭೨-೨೨೫೫೩೧, ಸಹಾಯಕ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಮಡಿಕೇರಿ ೦೮೨೭೨-೨೨೩೫೫೨, ಸಹಾಯಕ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಸೋಮವಾರಪೇಟೆ ೦೮೨೭೬-೨೮೧೧೧೫ ಹಾಗೂ ಸಹಾಯಕ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಪೊನ್ನಂಪೇಟೆ ೦೮೨೭೪-೨೪೯೪೭೬ನ್ನು ಸಂಪರ್ಕಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶೇಖರ್ ತಿಳಿಸಿದ್ದಾರೆ.
ಅಭ್ಯರ್ಥಿಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳಾ ಪದವೀಧರರಾಗಿರಬೇಕು ಮತ್ತು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. ಗರಿಷ್ಠ ವಯೋಮಿತಿ ೪೫ ವರ್ಷ, ತರಬೇತಿಯು ಆನ್ಲೈನ್ (ಸ್ವಯಂ ಗತಿಯ) ಮತ್ತು ಆಫ್ಲೈನ್ ತರಬೇತಿಯು ಐಐಎಂ-ಬೆAಗಳೂರು ರವರ ಕ್ಯಾಂಪಸ್ನಲ್ಲಿ ನೀಡಲಾಗುತ್ತದೆ. ಆಫ್ಲೈನ್ ತರಬೇತಿ ಇರುವ ಸಮಯದಲ್ಲಿ ಊಟ ಮತ್ತು ವಸತಿ ಸೌಲಭ್ಯವನ್ನು ಐಐಎಂ-ಬೆAಗಳೂರು ರವರ ವತಿಯಿಂದ ಒದಗಿಸಲಾಗುತ್ತದೆ. ಪ್ರತಿ ಅಭ್ಯರ್ಥಿಗೆ ತಗಲುವ ತರಬೇತಿ ಶುಲ್ಕವನ್ನು ಐಐಎಂ-ಬೆAಗಳೂರು ಸಂಸ್ಥೆಗೆ ಸಮಾಜ ಕಲ್ಯಾಣ ಇಲಾಖೆ/ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಪಾವತಿಸಲಾಗುತ್ತದೆ. ಬೆಂಗಳೂರು, ಐಐಎಂ ಅವರು ನಡೆಸುವ ಆನ್ಲೈನ್ ಯೋಗ್ಯತಾ ಪರೀಕ್ಷೆ ಮುಖಾಂತರ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ. ಯೋಗ್ಯತಾ ಪರೀಕ್ಷೆಗಾಗಿ ಅಭ್ಯರ್ಥಿಯು ಸ್ಮಾರ್ಟ್ ಮೊಬೈಲ್ ಫೋನ್ ಅನ್ನು ಹೊಂದಿರಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶೇಖರ್ ತಿಳಿಸಿದ್ದಾರೆ.
ಅರಿವು ಯೋಜನೆಯಡಿ ಶೈಕ್ಷಣಿಕ ಸಾಲಕ್ಕೆ
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಇಂಜಿನಿಯರಿAಗ್, ವೈದ್ಯಕೀಯ, ದಂತ ವೈದ್ಯಕೀಯ, ಬಿ.ಆಯುಷ್, ಬಿ.ಆರ್ಕ್ ಮತ್ತು ಬ್ಯಾಚುಲರ್ ಆಫ್ ಟೆಕ್ನಾಲಜಿ ವ್ಯಾಸಂಗಕ್ಕಾಗಿ ಸಿಇಟಿ/ನೀಟ್ ಮೂಲಕ ಪ್ರವೇಶ ಪಡೆಯ ಬಯಸುವ ವಿದ್ಯಾರ್ಥಿಗಳಿಗೆ “ಅರಿವು’ ಯೋಜನೆಯಡಿ ಶೈಕ್ಷಣಿಕ ಸಾಲವನ್ನು ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ನಿಗಮದ ವೆಬ್ಸೈಟ್ ತಿತಿತಿ.ಞmಜಛಿoಟಿಟiಟಿe.ಞಚಿಡಿಟಿಚಿಣಚಿಞಚಿ.gov.iಟಿ/ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಿಗದಿಪಡಿಸುವ ಶುಲ್ಕದನ್ವಯ ನಿಗಮವು ವಿದ್ಯಾಭ್ಯಾಸ ಸಾಲವನ್ನು ಮುಂಚಿತವಾಗಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಮಂಜೂರು ಮಾಡಿ ನಂತರ ಮಂಜೂರಾದ ಹಣವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡ ಕಾಲೇಜಿಗೆ ನೇರವಾಗಿ ಪಾವತಿಸುತ್ತದೆ.
ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಭರ್ತಿ ಮಾಡಿದ ಅರ್ಜಿಯನ್ನು ಪ್ರಿಂಟ್ಔಟ್ ಪಡೆದು ಕ್ಯೂಆರ್ ಕೋಡ್ ಹೊಂದಿದ ಅರ್ಜಿಯೊಂದಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಎಸ್ಎಸ್ಎಲ್ಸಿ ಅಂಕಪಟ್ಟಿ, ಪಿಯುಸಿ ಅಂಕಪಟ್ಟಿ, ಆಧಾರ್ ಕಾರ್ಡ್, ಫೋಟೋ ೪, ಸಿಇಟಿ ಹಾಲ್ ಟಿಕೆಟ್ ಪ್ರತಿಗಳು ಮತ್ತು ನೋಟರಿ ಮಾಡಿಸಿದ ಇಂಡೆಮ್ನಿಟಿ ಬಾಂಡ್ ಈ ಎಲ್ಲಾ ದಾಖಲಾತಿಗಳನ್ನು ತಾ. ೨೦ ರೊಳಗೆ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಮೌಲಾನ ಆಜಾದ್ ಭವನ, ಎಫ್ಎಂಸಿ. ಕಾಲೇಜು ಹತ್ತಿರ, ಮಡಿಕೇರಿ. ಈ ಕಚೇರಿಗೆ ಸಲ್ಲಿಸಲು ಸೂಚಿಸಿದೆ. ಹೆಚ್ಚಿನ ಮಾಹಿತಿಗೆ ಕಚೇರಿಯ ದೂ. ೦೮೨೭೨-೨೨೦೪೪೯ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಬಿ.ಎನ್. ನಾಗೇಂದ್ರ ತಿಳಿಸಿದ್ದಾರೆ.
ಕೆ.ಎಂ.ಎ. ಪ್ರತಿಭಾ ಪುರಸ್ಕಾರಕ್ಕೆ
ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ಪರೀಕ್ಷೆಯ ಫಲಿತಾಂಶದಲ್ಲಿ ಅತೀ ಹೆಚ್ಚಿನ ಅಂಕ ಪಡೆದು ತೇರ್ಗಡೆ ಹೊಂದಿ ವಿದ್ಯಾಭ್ಯಾಸ ಮುಂದುವರಿಸುತ್ತಿರುವ ಕೊಡವ ಮುಸ್ಲಿಂ ಅಸೋಸಿಯೇಷನ್ ಸದಸ್ಯರ ಮಕ್ಕಳಿಂದ ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಎರಡೂ ವಿಭಾಗದಲ್ಲೂ ಶೇ. ೭೫ಕ್ಕಿಂತ ಮೇಲ್ಪಟ್ಟು ಅಂಕ ಪಡೆದ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಪೋಷಕರ ಪೈಕಿ ಒಬ್ಬರು (ತಂದೆ ಅಥವಾ ತಾಯಿ) ಕೆ.ಎಂ.ಎ. ಸದಸ್ಯರಾಗಿರಬೇಕಾಗಿರುವುದು ಕಡ್ಡಾಯವಾಗಿರುತ್ತದೆ.
ಎರಡೂ ವಿಭಾಗಗಳಲ್ಲಿ ಸಲ್ಲಿಕೆಯಾದ ಅರ್ಜಿಗಳ ಪೈಕಿ ಅತೀ ಹೆಚ್ಚು ಅಂಕ ಪಡೆದ ತಲಾ ೧೩ ಅರ್ಜಿಗಳನ್ನು ಅಂತಿಮವಾಗಿ ಪರಿಗಣಿಸಲಾಗುವುದು. ಇದರಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆಯುವ ವಿದ್ಯಾರ್ಥಿಗಳಿಗೆ ಕ್ರಮವಾಗಿ ರೂ. ೧೦ ಸಾವಿರ, ರೂ. ೭ ಸಾವಿರ ಮತ್ತು ರೂ. ೬ ಸಾವಿರ ನಗದು ಬಹುಮಾನದೊಂದಿಗೆ ಆಕರ್ಷಕ ಟ್ರೋಫಿ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.
ಉಳಿದ ೧೦ ವಿದ್ಯಾರ್ಥಿಗಳಿಗೆ ತಲಾ ರೂ. ೫ ಸಾವಿರ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಗುವುದು. ಈಗಾಗಲೇ ಘೋಷಣೆಯಾಗಿರುವ ೨೦೨೧-೨೨ನೇ ಸಾಲಿನ ೫ನೇ, ೭ನೇ, ೧೦ನೇ ಮತ್ತು ೧೨ನೇ ತರಗತಿಯ ಮದ್ರಸಾ ಪಬ್ಲಿಕ್ ಪರೀಕ್ಷೆಯ ಫಲಿತಾಂಶದಲ್ಲಿ ಹೆಚ್ಚಿನ ಅಂಕಗಳಿಸುವ ಕೆ.ಎಂ.ಎ. ಸದಸ್ಯರ ಮಕ್ಕಳು ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಈ ವಿಭಾಗದಲ್ಲಿ ಅರ್ಜಿ ಸಲ್ಲಿಸಲು ಕನಿಷ್ಟ ಶೇ.೭೦ ಕ್ಕಿಂತ ಮೇಲ್ಪಟ್ಟು ಅಂಕ ಗಳಿಸಿರುವ ವಿದ್ಯಾರ್ಥಿಗಳು ಮಾತ್ರ ಅರ್ಹರಾಗಿರುತ್ತಾರೆ.
ಶಾಲಾ ಮುಖ್ಯೋಪಾಧ್ಯಾಯರಿಂದ ಅಥವಾ ಕಾಲೇಜಿನ ಪ್ರಾಂಶುಪಾಲರಿAದ ದೃಢೀಕೃತಗೊಂಡ ಅಂಕಪಟ್ಟಿ, ವಿದ್ಯಾಭ್ಯಾಸ ಮುಂದುವರಿಸುತ್ತಿರುವ ಬಗ್ಗೆ ಹಾಲಿ ವ್ಯಾಸಂಗ ದೃಢೀಕರಣ ಪತ್ರ ಸೇರಿದಂತೆ ತಮ್ಮ ಮನೆತನದ ಮತ್ತು ಪೋಷಕರ ಪೂರ್ಣ ವಿವರ, ದೂರವಾಣಿ ಸಂಖ್ಯೆ ಹಾಗೂ ಇತ್ತೀಚಿನ ೩ ಭಾವಚಿತ್ರದೊಂದಿಗೆ ಅರ್ಜಿ ಸಲ್ಲಿಸಲು ತಾ. ೧೫ ಕೊನೆಯ ದಿನವಾಗಿರುತ್ತದೆ. ಭಾವಚಿತ್ರ ಮತ್ತು ದೂರವಾಣಿ ಸಂಖ್ಯೆ ಇಲ್ಲದ ಅರ್ಜಿಗಳನ್ನು ಮೊದಲ ಹಂತದಲ್ಲೆ ತಿರಸ್ಕರಿಸಲಾಗುವುದು.
ಅಧ್ಯಕ್ಷರು, ಕೊಡವ ಮುಸ್ಲಿಂ ಅಸೋಸಿಯೇಷನ್, ಪ್ರಧಾನ ಕಚೇರಿ, ಡಿ.ಹೆಚ್.ಎಸ್. ಕಟ್ಟಡ, ಮುಖ್ಯ ರಸ್ತೆ, ವೀರಾಜಪೇಟೆ ಈ ವಿಳಾಸಕ್ಕೆ ಅರ್ಜಿಗಳನ್ನು ಕಳುಹಿಸಬಹುದಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: ೯೮೮೬೦೬೦೩೪೨ನ್ನು ಸಂಪರ್ಕಿಸಬಹುದಾಗಿದೆ ಎಂದು ಕೆ.ಎಂ.ಎ. ಪ್ರಕಟಣೆ ತಿಳಿಸಿದೆ.