ಪೆರಾಜೆ, ಜು. ೧: ಪದೇ ಪದೇ ಭೂಕಂಪ ಅದರಲ್ಲೂ ಭೂಕಂಪನದ ಕೇಂದ್ರಬಿAದು ಪೆರಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆಗುತ್ತಿರುವ ಕಂಪನದ ಬಗ್ಗೆ ಆತಂಕಗೊAಡ ಗ್ರಾಮಸ್ಥರು ಭೂಕಂಪ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ತಮ್ಮಲ್ಲಾದ ಭೂಕಂಪದ ಅನುಭವಗಳನ್ನು ಹಂಚಿಕೊAಡರು. ಪೆರಾಜೆಯ ಬೆಟ್ಟದಪುರ ಎಂಬಲ್ಲಿ ಹಲವು ವರ್ಷಗಳಿಂದ ನಡೆಯುತ್ತಿರುವ ಕಲ್ಲುಕೋರೆ ಕಾರಣವಿರಬಹುದೇ ಎಂದು ಪ್ರಶ್ನಿಸಿದರು.

ಭೂಕಂಪನ ಸಂಭವಿಸಿದ ಹಿನ್ನೆಲೆಯಲ್ಲಿ ಇಂದು ಗಣಿ ಮತ್ತು ಭೂವಿಜ್ಞಾನ,

(ಮೊದಲ ಪುಟದಿಂದ) ವಿಪತ್ತು ನಿರ್ವಹಣಾ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ ಸಂದರ್ಭ ಗ್ರಾಮಸ್ಥರು ತಮ್ಮ ಆತಂಕ ಹೊರಹಾಕಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಭೂಕಂಪ ತಜ್ಞರು ಈಗಿನ ಭೂಕಂಪವು ಪಶ್ಚಿಮಘÀಟ್ಟ ಪ್ರದೇಶದಲ್ಲಿ ನೈಸರ್ಗಿಕವಾಗಿ ನಡೆಯುತ್ತದೆ. ಭೂಮಿ ತನ್ನ ಸಮತೋಲನ ಕಾಪಾಡಿಕೊಳ್ಳಲು ಈ ರೀತಿಯ ಪ್ರಕ್ರಿಯೆಗಳು ನಡೆಯುತ್ತವೆ, ನಿರ್ದಿಷ್ಟವಾಗಿ ಕಲ್ಲುಕೋರೆಗಳಿಂದ ಸಂಭವಿಸುತ್ತದೆ ಎಂದು ಹೇಳಲಾಗುವುದಿಲ್ಲ ಹಾಗೇ ಆಗುವುದಿದ್ದರೆ ಅದು ಬ್ಲಾಸ್ಟಿಂಗ್ ಮಾಡಿದ ತಕ್ಷಣವೇ ಆಗುತ್ತದೆ ಎಂದು ತಿಳಿಸಿದರು. ಭೂಕಂಪದ ಬಗ್ಗೆ ಜನರು ಆತಂಕಕ್ಕೆ ಒಳಗಾಗದೆ ಧೈರ್ಯವಾಗಿ ಇರಲು ತಿಳಿಸಿದರು.

ಕಲ್ಲುಕೋರೆಗೆ ಭೇಟಿ

ಬೆಟ್ಟದಪುರ ಕಲ್ಲುಕೋರೆಗೆ ಗಣಿವಿಜ್ಞಾನಿ ಅಧಿಕಾರಿಗಳು ಭೇಟಿ ಕೊಟ್ಟ ಸಂದರ್ಭದಲ್ಲಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು, ಕೋರೆಯಲ್ಲಿ ಡೈನಾಮಿಕ್ ಬ್ಲಾಸ್ಟಿಂಗ್ ಸಂದರ್ಭದಲ್ಲಿ ಮನೆಗಳ ಕಿಟಕಿಗಳು ಅಲುಗಾಡುವುದು, ಭೂಕಂಪದ ಅನುಭವ, ಗೋಡೆಗಳಲ್ಲಿನ ಬಿರುಕುಗಳು ಕಾಣುವ ಬಗ್ಗೆ ಹೇಳಿಕೊಂಡರು. ಅಲ್ಲದೆ ಗಣಿಗಾರಿಕೆಯಿಂದ ಅಲ್ಲಿನ ಕಲುಷಿತ ನೀರು ಸಣ್ಣ ಸಣ್ಣ ತೋಡುಗಳ ಮೂಲಕ ನದಿಗೆ ಸೇರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.ಗ್ರಾಮಸ್ಥರಲ್ಲಿ ಆತಂಕ

ಇಷ್ಟರವರೆಗೆ ನಡೆದ ಭೂಕಂಪವು ಕಂಪನದ ಕೇಂದ್ರ ಬಿಂದು ಎಂದು ಗುರುತಿಸಿದ ಕರಿಕೆ ಮತ್ತು ಚೆಂಬು ಪ್ರದೇಶದಿಂದ ಇಷ್ಟು ಕಿಲೋಮೀಟರ್ ಅಂತರದಲ್ಲಿ ಪೆರಾಜೆ ಗ್ರಾಮಪಂಚಾಯತ್ ವ್ಯಾಪ್ತಿಯೇ ಆಗಿದ್ದು ಇದು ಇಲ್ಲಿಯೇ ಯಾಕೆ ನಡೆದಿದ್ದು ಮತ್ತು ಇದಕ್ಕೆ ಕಾರಣ ಮತ್ತು ಪರಿಹಾರ ನೀಡಬೇಕೆಂದು ಗ್ರಾಮಸ್ಥರ ಪರವಾಗಿ ಮನು ಪೆರುಮುಂಡ ಕೇಳಿಕೊಂಡರು. ಇದಕ್ಕೆ ಅಧಿಕಾರಿಗಳು ಪಂಚಾಯತ್ ವ್ಯಾಪ್ತಿಯ ಕೆಲವು ಐoಛಿಚಿಣioಟಿ (ನಿರ್ದಿಷ್ಟ ಜಾಗದ ಗುರುತು) ತೆಗೆದುಕೊಂಡು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರಕ್ಕೆ ಕಳುಹಿಸಿ ಅಲ್ಲಿಂದ ನಿರ್ದಿಷ್ಟವಾದ ಕೇಂದ್ರ ಬಿಂದು ಯಾವುದು ಎಂದು ಸಮಗ್ರವಾಗಿ ಪರಿಶೀಲನೆ ನಡೆಸಿ ತಿಳಿಸಿ ಕೊಡುವುದಾಗಿ ಭರವಸೆ ನೀಡಿದರು.

ಗಂಭೀರ ಪರಿಗಣಿಸಲು ಒತ್ತಾಯ

ಪದೇ ಪದೇ ಭೂಕಂಪನವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಇದರ ಬಗ್ಗೆ ಸಂಬAಧಿಸಿದ ಅಧಿಕಾರಿಗಳಿಗೆ ತಿಳಿಸಿ ಸಮಗ್ರವಾಗಿ ಪರಿಶೀಲನೆ ನಡೆಸಿ ಕಾರಣ ಪತ್ತೆ ಹಚ್ಚಲು ಮತ್ತು ಮುಂದೆ ನಡೆಯಬಹುದಾದ ಅವಘಡಗಳನ್ನು ತಪ್ಪಿಸುವಂತೆ ಗ್ರಾಮಸ್ಥರು ಕೋರಿಕೊಂಡರು.

ಈ ಸಂದರ್ಭ ವಿಪತ್ತು ನಿರ್ವಹಣಾ ಪರಿಣಿತರಾದ ಅನನ್ಯ ವಾಸುದೇವ್, ಗಣಿ ಮತ್ತು ಭೂ ವಿಜ್ಞಾನಿಗಳಾದ ಲಾಯಲ್, ಸಂಪಾಜೆ ಕಂದಾಯ ನಿರೀಕ್ಷಕ ವೆಂಕಟೇಶ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಪ್ರಭು.ಕೆ., ಪಂಚಾಯತ್ ಅಧ್ಯಕ್ಷೆ ಚಂದ್ರಕಲಾ ಬಳ್ಳಡ್ಕ, ಪಂಚಾಯತ್ ಸದಸ್ಯರಾದ ನಂಜಪ್ಪ ನಿಡ್ಯಮಲೆ, ಸುಭಾಷ್ ಚಂದ್ರ ಬಂಗಾರಕೋಡಿ, ಸುರೇಶ್ ಪೆರುಮುಂಡ ಸೇರಿದಂತೆ ಗ್ರಾಮಸ್ಥರು ಇದ್ದರು. - ಕಿರಣ್