ಗೋಣಿಕೊಪ್ಪಲು, ಜು.೧: ಪ್ಲಾಸ್ಟಿಕ್ ಬಳಕೆ ನಿಷೇಧವಿದ್ದರೂ ನಗರದಲ್ಲಿ ಅನೇಕ ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದು ಕಂಡು ಬಂದ ಹಿನ್ನಲೆಯಲ್ಲಿ ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಚೈತ್ರರವರ ಮುಂದಾಳತ್ವದಲ್ಲಿ ನಗರದ ಅಂಗಡಿ ಮುಂಗಟ್ಟುಗಳಿಗೆ ತೆರಳಿ ಪ್ಲಾಸ್ಟಿಕ್ ಬಳಸದಂತೆ ಸೂಚನೆ ನೀಡಲಾಗಿದೆ.
ಪ್ಲಾಸ್ಟಿಕ್ ಪದಾರ್ಥಗಳಾದ ಕ್ಯಾರಿ ಬ್ಯಾಗ್,ಪ್ಲಾಸ್ಟಿಕ್ ಬ್ಯಾನರ್ಗಳು,ಪ್ಲಾಸ್ಟಿಕ್ ಸ್ಪೂನ್ಗಳು ಪ್ಲಾಸ್ಟಿಕ್ ಪ್ಲೇಟ್ಸ್ಗಳು.ಪ್ಲಾಸ್ಟಿಕ್ ಧ್ವಜಗಳು,ಪ್ಲಾಸ್ಟಿಕ್ ಕಪ್ಗಳು, ಡೈನಿಂಗ್ ಟೇಬಲ್ನಲ್ಲಿ ಹಾಸುವ ಪ್ಲಾಸ್ಟಿಕ್ ಹಾಳೆಗಳು, ಸ್ಟಾçಗಳು, ಥರ್ಮಕೋಲ್ ಮತ್ತು ಪ್ಲಾಸ್ಟಿಕ್ ಮೈಕ್ರೋ ಮಣಿಗಳಿಂದ ಮಾಡಿದ ವಸ್ತುಗಳನ್ನು ನಿಷೇಧಿಸಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ ಹೊರಡಿಸಿದೆ. ಈ ಆದೇಶವನ್ನು ಪಂಚಾಯಿತಿಯು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ. ಈ ನಿಟ್ಟಿನಲ್ಲಿ ನಗರದ ವರ್ತಕರು ಇಂತಹ ವಸ್ತುಗಳನ್ನು ಮಾರಾಟ ಮಾಡದಂತೆ ಸೂಚಿಸಲಾಗಿದೆ. ಹೀಗಾಗಿ ಅಂಗಡಿ ಮಳಿಗೆಗಳಿಗೆ ತೆರಳಿ ಮಾಲೀಕರಿಗೆ, ವರ್ತಕರಿಗೆ ಎಚ್ಚರಿಕೆ ನೀಡಿರುವುದಾಗಿ ಅಧ್ಯಕ್ಷರು ತಿಳಿಸಿದರು.
ಪಂಚಾಯಿತಿಯ ಸಿಬ್ಬಂದಿಗಳು ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್ ನಿಷೇಧವನ್ನು ಕಡ್ಡಾಯಗೊಳಿಸಲು ದಿಢೀರನೆ ಅಂಗಡಿ ಮುಂಗಟ್ಟುಗಳಿಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಪ್ಲಾಸ್ಟಿಕ್ಗಳು ಕಂಡು ಬಂದಲ್ಲಿ ಅಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಭಿಕ್ಷಾಟನೆ ನಿಷೇಧವಿದ್ದರೂ ನಗರದಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ ಇನ್ನಿತರರು ಭಿಕ್ಷಾಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿರುವುದು ಕಂಡು ಬಂದಿದೆ. ನಗರದ ಬಸ್ ನಿಲ್ದಾಣದಲ್ಲಿರುವ ತಂಗುದಾಣದಲ್ಲಿ ಭಿಕ್ಷÄಕರು,ಮಧ್ಯವ್ಯಸನಿಗಳು,ಹೆಚ್ಚಾಗಿ ಇರುವುದರಿಂದ ಇಲ್ಲಿಯ ಶುಚಿತ್ವ ಹಾಳಾಗುತ್ತಿದೆ. ಇದರಿಂದ ನಿಲ್ದಾಣದಲ್ಲಿ ಪ್ರಯಾಣಿಕರು ನಿಲ್ಲಲು ಸಾಧ್ಯವಾಗುತ್ತಿಲ್ಲ. ಭಿಕ್ಷÄಕರು ನಗರದಲ್ಲಿ ಭಿಕ್ಷಾಟನೆ ಮಾಡುವುದನ್ನು ನಿಷೇಧಿಸಲಾಗಿದೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಪೊಲೀಸರು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.ನಗರದ ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿಕೊಂಡು ತರಕಾರಿ, ಹಣ್ಣು ಹಂಪಲು, ಟೋಮೆಟೋ, ಕಡಲೆಕಾಯಿ ವ್ಯಾಪಾರ ಮಾಡುತ್ತಿದ್ದಾರೆ. ಇಂತಹ
ವ್ಯಾಪಾರದಿAದ ಮುಖ್ಯ ರಸ್ತೆಯಲ್ಲಿ ದಿನನಿತ್ಯ ಟ್ರಾಫಿಕ್ ಸಮಸ್ಯೆ ಎದುರಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಇಂತಹ ರಸ್ತೆ ಬದಿಯ ವ್ಯಾಪಾರವನ್ನು ನಿಷೇಧಿಸಲಾಗಿದೆ. ಪಂಚಾಯಿತಿಯ ನಿಯಮ ಮೀರಿ ಈ ರೀತಿಯ ವ್ಯಾಪಾರ ನಡೆಸುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪೊಲೀಸರು ಇಂತಹ ವ್ಯಾಪಾರಸ್ಥರಿಗೆ ದಂಡ ವಿಧಿಸಿ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಈ ವೇಳೆ ಪಂಚಾಯಿತಿ ಸದಸ್ಯರಾದ ಬಿ.ಎನ್.ಪ್ರಕಾಶ್, ರಾಮಕೃಷ್ಣ, ಕೆ.ರಾಜೇಶ್, ಕೊಣಿಯಂಡ ಬೋಜಮ್ಮ,ಜಿ.ಕೆ.ಗೀತಾ, ಮನ್ನಕ್ಕಮನೆ ಸೌಮ್ಯಬಾಲು, ನೂರೆರ ರತಿಅಚ್ಚಪ್ಪ, ಪುಷ್ಪ ಮನೋಜ್, ವಿವೇಕ್, ಹಕೀಮ್, ಪಂಚಾಯಿತಿ ಸಿಬ್ಬಂದಿ ಗಳಾದ ಸುಭಾಶ್, ಗುರುಶ್ರೀ, ಸತೀಶ್ ಹಾಜರಿದ್ದರು
-ಹೆಚ್.ಕೆ.ಜಗದೀಶ್