ಶನಿವಾರಸಂತೆ, ಜೂ. ೩೦: ಪಟ್ಟಣದ ಶ್ರೀ ವಿಘ್ನೇಶ್ವರ ಬಾಲಕಿಯರ ಸಂಯುಕ್ತ ಪಿ.ಯು. ಕಾಲೇಜಿನಲ್ಲಿ ಸರಸ್ವತಿ ವಿದ್ಯಾರ್ಥಿನಿಯರ ಸಂಘದ ಚುನಾವಣೆ ನಡೆಯಿತು.
ಚುನಾವಣೆಯಲ್ಲಿ ಕಾಲೇಜು ನಾಯಕಿಯಾಗಿ ವಿ.ಸಿ. ಗೌತಮಿ, ಉಪನಾಯಕಿಯಾಗಿ ಕೆ.ಆರ್. ನಿತ್ಯ, ಕಾರ್ಯದರ್ಶಿಯಾಗಿ ಎಸ್.ಎಂ. ಅಂಕಿತಾ, ಕ್ರೀಡಾ ಮಂತ್ರಿಯಾಗಿ ಧನ್ಯಶ್ರೀ, ಸಾಂಸ್ಕೃತಿಕ ಮಂತ್ರಿಯಾಗಿ ಹಂಪನಾ, ಆರೋಗ್ಯ ಮಂತ್ರಿಯಾಗಿ ನಿಸರ್ಗ, ವಾರ್ತಾ ಮಂತ್ರಿಯಾಗಿ ದಾಕ್ಷಾಯಿಣಿ ಆಯ್ಕೆಯಾಗಿದ್ದಾರೆ.
ಪ್ರೌಢಶಾಲಾ ವಿಭಾಗದಲ್ಲಿ ಉಪ ಮಂತ್ರಿಗಳಾಗಿ ಆಯ್ಕೆ ಮಾಡಲಾಗಿದ್ದು, ವಾರ್ತಾ ಮಂತ್ರಿಗಳಾಗಿ ನಮಿತಾ, ವಿನುತಾ, ಸಾಂಸ್ಕೃತಿಕ ಮಂತ್ರಿಯಾಗಿ ಮೌಲ್ಯಾ, ಆರೋಗ್ಯ ಮಂತ್ರಿ ಮೌನಶ್ರೀ, ಆಹಾರ ಮತ್ತು ತೋಟಗಾರಿಕಾ ಮಂತ್ರಿಯಾಗಿ ಯಾಸ್ಮಿನ್ ಬಾನು ಆಯ್ಕೆಯಾಗಿದ್ದಾರೆ.
ವಿದ್ಯಾಸಂಸ್ಥೆ ಕಾರ್ಯದರ್ಶಿ ಬೆಳ್ಯಪ್ಪ, ನಿರ್ದೇಶಕರಾಗಿ ನಿತ್ಯಾನಿಧಿ, ಗೋವಿಂದೇಗೌಡ, ದೇವರಾಜೇಗೌಡ ಉಪಸ್ಥಿತರಿದ್ದರು. ಪ್ರಾಂಶುಪಾಲ ಟಿ.ಪಿ. ಶಿವಪ್ರಕಾಶ್, ಉಪನ್ಯಾಸಕರಾದ ಅಂಜನಪ್ಪ, ಮೊಹಮ್ಮದ್ ಸರ್ಪ್ರಾಜ್, ಶಿಕ್ಷಕರಾದ ಕೆ.ಪಿ. ಜಯಕುಮಾರ್, ಕೆ.ಎಸ್. ಸಂದೇಶ್ ಚುನಾವಣಾ ಪ್ರಕ್ರಿಯೆಯಲ್ಲಿ ಕಾರ್ಯ ನಿರ್ವಹಿಸಿದರು.