ಮಡಿಕೇರಿ, ಜೂ. ೩೦: ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿರುವ ಸರಕಾರಿ ಭೂಮಿಯನ್ನು ಸರ್ವೆ ನಡೆಸುವಂತೆ ಸರಕಾರಿ ಜಮೀನು ಸಂರಕ್ಷಣಾ ಸಮಿತಿಗೆ ಪತ್ರ ಬರೆಯಲು ನಗರಸಭಾ ವ್ಯಾಪ್ತಿಯಲ್ಲಿ ಸರಕಾರಿ ಭೂಮಿ ಒತ್ತುವರಿಯಾಗಿರುವ ಬಗ್ಗೆ ದಾಖಲೆ ಯಲ್ಲಿರುವ ಭೂಮಿಗಿಂತ ಹೆಚ್ಚುವರಿ ಭೂಮಿ ಕಬಳಿಕೆಯಾಗಿರುವುದು ಹಾಗೂ ದಾಖಲೆ ರಹಿತವಾಗಿ ಭೂಮಿ ಯನ್ನು ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಗಂಭೀರ ಚರ್ಚೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ನಾಮನಿರ್ದೇಶಿತ ಸದಸ್ಯ ಕವನ್, ನಗರಸಭೆ ವ್ಯಾಪ್ತಿಯಲ್ಲಿ ನಡೆದಿರುವ ಒತ್ತುವರಿಯನ್ನು ಸರ್ವೆ ನಡೆಸಿ ತೆರವುಗೊಳಿಸಬೇಕೆಂದು ಆಗ್ರಹಿಸಿದರು. ಗದ್ದಿಗೆ ವ್ಯಾಪ್ತಿಯಲ್ಲೂ

(ಮೊದಲ ಪುಟದಿಂದ) ಒತ್ತುವರಿ ನಡೆದಿದೆ ಎಂದರು. ಈ ವೇಳೆ ಮಾತನಾಡಿದ ಸದಸ್ಯ ಅಮಿನ್ ಮೊಯ್ಸಿನ್ ಗದ್ದಿಗೆ ನಗರಸಭೆ ಅಧೀನಕ್ಕೆ ಬರುವುದಿಲ್ಲ ಎಂದರು. ಆದರೆ ಆ ವ್ಯಾಪ್ತಿಯಲ್ಲಿ ನಗರಸಭೆಯಿಂದ ಕೆಲ ಮನೆಗಳಿಗೆ ದಾಖಲಾತಿ ನೀಡಲಾಗಿದೆ ಎಂದು ಕವನ್ ತಿಳಿಸಿದರು.

ರಾಜಕಾಲುವೆಗಳು ಕೂಡ ಒತ್ತುವರಿಯಾಗಿದ್ದು, ತೆರವು ಮಾಡಿ ಎಂದು ಸದಸ್ಯ ಅಪ್ಪಣ್ಣ ಒತ್ತಾಯಿಸಿದರು. ಈ ಬಗ್ಗೆ ಕೆಲಕಾಲ ಚರ್ಚೆ-ವಿಚರ್ಚೆ ನಡೆದ ಬಳಿಕ ಮಾತನಾಡಿದ ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ್ ಸುಬ್ರಮಣಿ, ಸರಕಾರಿ ಭೂಮಿ ಒತ್ತುವರಿ ಸಂಬAಧ ಶಾಸಕ ಕೆ.ಜಿ. ಬೋಪಯ್ಯ ಅವರು ಅಧ್ಯಕ್ಷರಾಗಿರುವ ಸರಕಾರಿ ಜಮೀನು ಸಂರಕ್ಷಣಾ ಸಮಿತಿಗೆ ಪತ್ರ ಬರೆದು ನಗರಸಭೆ ವ್ಯಾಪ್ತಿಯ ಸರಕಾರಿ ಭೂಮಿಯನ್ನು ಸರ್ವೆ ನಡೆಸಲು ಮನವಿ ಸಲ್ಲಿಸುವಂತೆ ಸಲಹೆ ನೀಡಿದರು. ಈ ಸಂಬAಧ ಕ್ರಮಕೈಗೊಳ್ಳುವುದಾಗಿ ಅಧ್ಯಕ್ಷೆ ಅನಿತಾ ಪೂವಯ್ಯ ಹೇಳಿದರು. ಸಭೆ ಇದಕ್ಕೆ ಒಪ್ಪಿಗೆ ಸೂಚಿಸಿತು.

ಕಾಂಗ್ರೆಸ್ ಸದಸ್ಯ ರಾಜೇಶ್ ಯಲ್ಲಪ್ಪ ಮಾತನಾಡಿ, ಸಭೆಯಲ್ಲಿ ಚರ್ಚೆಯಾಗುವ ವಿಷಯಗಳು ಸಭಾ ನಡಾವಳಿಯಲ್ಲಿ ಚಾಚೂ ತಪ್ಪದೆ ದಾಖಲಾಗಬೇಕು ಎಂದು ಹೇಳಿದರು. ಉಮೇಶ್ ಸುಬ್ರಮಣಿ ಮಾತನಾಡಿ, ಅಭಿವೃದ್ಧಿ ಕಾರ್ಯಗಳಿಗೆ ಸಂಬAಧಿಸಿದAತೆ ಅಧಿಕಾರಿಗಳು ಆಡಳಿತ ನಡೆಸುವವರ ಜೊತೆಗೆ ಸಹಕಾರ ನೀಡಿದರೆ ಮಾತ್ರ ಅಭಿವೃದ್ಧಿ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಗಮನ ಹರಿಸಬೇಕೆಂದು ಹೇಳಿದರು.

ಸದಸ್ಯ ಅಪ್ಪಣ್ಣ ಮಾತನಾಡಿ, ಮಡಿಕೇರಿ ವ್ಯಾಪ್ತಿಯಲ್ಲಿ ಕೆಟ್ಟು ನಿಂತಿರುವ ನೀರಿನ ಮೋಟಾರುಗಳನ್ನು ಇದುವರೆಗೂ ಸರಿ ಮಾಡಲು ಸಾಧ್ಯವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಭೆಯಲ್ಲಿ ನಗರಸಭೆಯಿಂದ ಕೈಗೊಳ್ಳಬೇಕಾಗಿರುವ ಕಾರ್ಯಗಳ ಕ್ರಿಯಾಯೋಜನೆಗೆ ಸದಸ್ಯರೊಂದಿಗೆ ಚರ್ಚಿಸಿ ಅನುಮತಿ ನೀಡಲಾಯಿತು.

ನಗರಸಭಾ ಉಪಾಧ್ಯಕ್ಷೆ ಸವಿತಾ ರಾಕೇಶ್, ಆಯುಕ್ತ ರಾಮದಾಸ್ ಉಪಸ್ಥಿತರಿದ್ದರು.