ಮಡಿಕೇರಿ, ಜು. ೧: ಚೆಟ್ಟಳ್ಳಿ- ಸುಂಟಿಕೊಪ್ಪ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಚೆಟ್ಟಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ಗ್ರಾಮಸ್ಥರು ಕಳೆದ ಕೆಲವು ವರ್ಷಗಳಿಂದ ತೀರಾ ಹದಗೆಟ್ಟಿದ್ದ ರಸ್ತೆಯನ್ನು ಒಂದು ತಿಂಗಳ ಹಿಂದೆಯಷ್ಟೇ ಡಾಂಬರೀಕರಣ ಮಾಡಲಾಗಿತ್ತು. ಆದರೆ ನಿತ್ಯ ಮರಗಳ ಸಾಗಾಟದಿಂದ ಮತ್ತೆ ರಸ್ತೆ ಹಾಳಾಗಿದ್ದು, ಕೆಸರುಮಯವಾಗಿದೆ ಎಂದು ಆರೋಪಿಸಿದ್ದಾರೆ.

ದ್ವಿಚಕ್ರ ವಾಹನ, ಆಟೋರಿಕ್ಷಾ ಹಾಗೂ ಪಾದಚಾರಿಗಳ ಸಂಚಾರ ಅಪಾಯಕಾರಿಯಾಗಿದ್ದು, ಅನಾಹುತಗಳು ಸಂಭವಿಸುವ ಆತಂಕವಿದೆ. ಆದ್ದರಿಂದ ಮಳೆಗಾಲ ಕಳೆಯುವವರೆಗೆ ಈ ಮಾರ್ಗದಲ್ಲಿ ಮರಗಳ ಸಾಗಾಟ ಮತ್ತು ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ ನೀಡಬಾರದೆಂದು ಒತ್ತಾಯಿಸಿದ್ದಾರೆ.