ಸುಂಟಿಕೊಪ್ಪ, ಜೂ. ೩೦: ಇಲ್ಲಿಗೆ ಸಮೀಪದ ೭ನೇ ಹೊಸಕೋಟೆ ಗ್ರಾಮ ಪಂಚಾಯಿತಿಗೆ ಸೇರಿದ ಮಾಗ್ಡೂರ್‌ವಿನ ಗೀತಾ ಎಂಬವರ ತೋಟದಲ್ಲಿ ಕಾಡಾನೆಗಳು ಕಾರ್ ಹಾಗೂ ಬೆಳೆಯನ್ನು ನಾಶಪಡಿಸಿವೆ.

ತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡು ಬಾಳೆ, ತೆಂಗು, ಮಾವು, ಪಪ್ಪಾಯಿ ಕಾಫಿ, ಮೆಣಸು ಗಿಡಗಳನ್ನು ಧ್ವಂಸಗೊಳಿಸಿ ನಂತರ ಮನೆಯತ್ತ ಬಂದು ಮನೆ ಮುಂಭಾಗದಲ್ಲಿ ನಿಲ್ಲಿಸಿದ್ದ ಕಾರಿಗೆ ತಿವಿದು, ಮನೆ ಸಮೀಪದಲ್ಲಿದ್ದ ಹಣ್ಣಿನ ಗಿಡಗಳನ್ನು ನಾಶಪಡಿಸಿವೆ. ಅರಣ್ಯ ಇಲಾಖೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಕಳೆದ ೧ ತಿಂಗಳಿAದ ಕಾಡಾನೆಗಳು ಈ ಭಾಗದ ಅನೇಕ ತೋಟಗಳಲ್ಲಿ ಬೀಡುಬಿಟ್ಟಿದ್ದು, ಕಾಫಿ ಗಿಡಗಳನ್ನು ಧ್ವಂಸಗೊಳಿಸಿವೆೆ ಎಂದು ಮಾಲೀಕರು ತಿಳಿಸಿದ್ದಾರೆ. ಅರಣ್ಯ ಇಲಾಖೆ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.