ವೀರಾಜಪೇಟೆ, ಜೂ. ೩೦: ಸುದೀರ್ಘ ೯೬ ವರ್ಷದ ನಿಸ್ವಾರ್ಥ ಸೇವೆಯಲ್ಲಿರುವ ಸಮಸ್ತಾದ ಸ್ಥಾಪಕ ದಿನವನ್ನು ಕಲ್ಲುಬಾಣೆ ಶಾಖೆಯಲ್ಲಿ ಆಚರಿಸಲಾಯಿತು.

ಕಾರ್ಯಕ್ರಮಕ್ಕೆ ಪ್ರಾರ್ಥನೆಯ ಮೂಲಕ ಮದರಸದ ಮುಖ್ಯೋಪಾಧ್ಯಾಯರಾದ ಅಲಿ ಮುಸ್ಲಿಯಾರ್ ಚಾಲನೆ ನೀಡಿದರು. ಧ್ವಜಾರೋಹಣವನ್ನು ಜಮಾಅತ್ ಅಧÀ್ಯಕ್ಷ ಅಬ್ದುಲ್ ಖಾದರ್ ಹಾಗೂ ಉಪಾಧ್ಯಕ್ಷ ಅಫ್ಸಲ್ ನೆರೆವೇರಿಸಿದರು.

ಕಾರ್ಯಕ್ರಮದಲ್ಲಿ ಉದ್ಘಾಟನೆ ಭಾಷಣ ಸುಲೈಮಾನ್ ನೆರವೇರಿಸಿದರೆ, ದಾರಿಮಿ ಸಂದೇಶ ಭಾಷಣ ಶಫೀಕ್ ನೀಡಿದರು.

ಕಲ್ಲುಬಾಣೆಯ ಎಸ್‌ವೈಎಸ್ ಅಧ್ಯಕ್ಷ ಅಝಿಸ್, ಎಸ್‌ಕೆಎಸ್‌ಎಸ್‌ಎಫ್ ಖಜಾಂಚಿ ಶಿಹಾಬ್, ಎಸ್‌ಕೆಎಸ್‌ಬಿ.ವಿ ಅಧÀ್ಯಕ್ಷ ಸಫ್ವಾನ್, ಸಹ ಅಧ್ಯಾಪಕ ನೌಶಾದ್ ದಾರಿಮಿ ಶಫೀಕ್ ಮುಸ್ಲಿಯಾರ್, ಇಸ್ಮಾಯಿಲ್ ಮುಸ್ಲಿಯಾರ್ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮದರಸದ ವಿದ್ಯಾರ್ಥಿಗಳು ಹಾಜರಿದ್ದರು.