ಮಡಿಕೇರಿ, ಜೂ. ೩೦: ಅಖಿಲ ಭಾರತ ರಾಷ್ಟಿçÃಯ ಕಾಂಗ್ರೆಸ್ನ ಚುನಾವಣಾ ವೀಕ್ಷಕ (ಎಪಿಆರ್ಒ) ಕಾಂಗ್ರೆಸ್ ಪಕ್ಷದ ಆಂತರಿಕ ಚುನಾವಣೆಗೆ ಸಂಬAಧಿಸಿದAತೆ ಪರಿಶೀಲನೆಗಾಗಿ ಕೊಡಗು ಜಿಲ್ಲೆಗೆ ಬುಧವಾರ ಭೇಟಿ ನೀಡಿ ಜಿಲ್ಲಾ ಕಾಂಗ್ರೆಸ್ ಮುಖಂಡರೊAದಿಗೆ ಚರ್ಚಿಸಿದರು.
ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳ ಆಯ್ಕೆ ಆಂತರಿಕ ಚುನಾವಣೆ ಮೂಲಕ ನಡೆಯಲಿದ್ದು, ಪ್ರತಿ ಬೂತ್ನಿಂದ ಒಬ್ಬರು ಬೂತ್ ಅಧ್ಯಕ್ಷರು ಮತ್ತು ಒಬ್ಬ ಬೂತ್ ಪ್ರತಿನಿಧಿ, ಒಟ್ಟು ಪ್ರತಿ ಬೂತ್ನಿಂದ ಇಬ್ಬರು ಸಕ್ರಿಯ ಸದಸ್ಯರನ್ನು ನಿಯೋಜಿಸುವಂತೆ ಹಾಗೂ ಸದರಿ ಪ್ರತಿನಿಧಿಗಳು ಕಡ್ಡಾಯವಾಗಿ ಅದೇ ಬೂತ್ನಲ್ಲಿ ಮತದಾರರಾಗಿದ್ದು ಕಾಂಗ್ರೆಸ್ ಪಕ್ಷದ ಡಿಜಿಟಲ್ ಸದಸ್ಯತ್ವ ನೋಂದಾಯಿತರಾಗಿರಬೇಕು ಎಂದು ಜಾನ್ಸನ್ ಅಬ್ರಹಾಂ ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ದರ್ಮಜ ಉತ್ತಪ್ಪ ಅವರು, ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ೨೬೯ ಬೂತ್ಗಳು ಮತ್ತು ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ೨೭೩ ಬೂತ್ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು ೫೪೨ ಬೂತ್ಗಳಿದ್ದು ಈಗಾಗಲೇ ಶೇ. ೯೦ ರಷ್ಟು ಅಧ್ಯಕ್ಷರು ಮತ್ತು ಪ್ರತಿನಿಧಿಗಳ ನೇಮಕವಾಗಿದ್ದು ಜುಲೈ ೩ ರೊಳಗಾಗಿ ಸಂಪೂರ್ಣ ಪಟ್ಟಿಯನ್ನು ಎಐಸಿಸಿಗೆ ಒಪ್ಪಿಸುವುದಾಗಿ ತಿಳಿಸಿದರು. ಈ ನಿಟ್ಟಿನಲ್ಲಿ ಬ್ಲಾಕ್ ಅಧ್ಯಕ್ಷರುಗಳ ಸಕ್ರಿಯ ಕಾರ್ಯಚಟುವಟಿಕೆಗಳ ಬಗ್ಗೆ ಧರ್ಮಜ ಅವರು ವಿವರಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಅವರು ಬೂತ್ ಪ್ರತಿನಿಧಿಗಳ ನೇಮಕಾತಿಯಿಂದ ಜಿಲ್ಲೆಯಲ್ಲಿ ಪಕ್ಷಕ್ಕೆ ಮತ್ತಷ್ಟು ಬಲ ಬರಲಿದ್ದು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕೊಡಗಿನ ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಆಯ್ಕೆಯಾಗಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಹಿರಿಯ ಮುಖಂಡ ಟಿ.ಪಿ. ರಮೇಶ್, ಡಿಸಿಸಿ ಉಪಾಧ್ಯಕ್ಷ ಕೊಕ್ಕಲೆರ ಸುಜು ತಿಮ್ಮಯ್ಯ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್, ಬ್ಲಾಕ್ ಅಧ್ಯಕ್ಷ ಬಿ.ಬಿ. ಸತೀಶ್, ಮೀದೇರಿರ ನವೀನ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎಂ.ಎ. ಉಸ್ಮಾನ್, ಸೇವಾದಳದ ಅಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ, ಕಾಂಗ್ರೆಸ್ ವಕ್ತಾರ ಹಾಗೂ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರಾ ಮೈನಾ, ಎನ್ಎಸ್ಯುಐ ಅಧ್ಯಕ್ಷ ರೋಶನ್ ಗಣಪತಿ, ಸಾಮಾಜಿಕ ಜಾಲತಾಣದ ಅಧ್ಯಕ್ಷ ಸೂರಜ್ ಹೊಸೂರ್, ನಗರ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮದ್, ಗೌರವ ಕಾರ್ಯದರ್ಶಿ ವಿ.ಪಿ. ಸುರೇಶ್, ಕೆ.ಎ. ಯಾಕುಬ್, ಬ್ಲಾಕ್ ಉಪಾಧ್ಯಕ್ಷ ಪ್ರಭು ರೈ, ಪ್ರಧಾನ ಕಾರ್ಯದರ್ಶಿ ದೋಲ್ಪಾಡಿ ಯಶ್, ಸಂಘಟನಾ ಕಾರ್ಯದರ್ಶಿ ರವೂಫ್ ಶೇಖ್, ಆರ್.ಪಿ. ಚಂದ್ರಶೇಖರ್, ಪೊನ್ನಂಪೇಟೆ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಎ.ಜೆ. ಬಾಬು, ಪ್ರಮುಖರಾದ ಪ್ರಕಾಶ್ ಆಚಾರ್ಯ, ಯಾಕುಬ್, ಜಿ.ಸಿ. ಜಗದೀಶ್, ಪೆರುಮಾಳ್ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.