ಸೋಮವಾರಪೇಟೆ, ಜೂ. ೩೦: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಹನಗಳ ನಿಲುಗಡೆ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದೀಗ ಮಳೆಗಾಲವಾಗಿರುವ ಹಿನ್ನೆಲೆ ಬಹಳಷ್ಟು ಮಂದಿ ನಾಲ್ಕು ಚಕ್ರದ ವಾಹನಗಳ ಮೊರೆ ಹೋಗಿದ್ದು, ಪಟ್ಟಣದ ತುಂಬೆಲ್ಲಾ ಕಾರು, ಜೀಪುಗಳೇ ನಿಲುಗಡೆಯಾಗುತ್ತಿವೆ.

ಇಲ್ಲಿನ ತಾಲೂಕು ಕಚೇರಿ, ಪೊಲೀಸ್ ಠಾಣೆ ಸೇರಿದಂತೆ ಪಟ್ಟಣದ ಹಲವಷ್ಟು ಅಂಗಡಿ ಮುಂಗಟ್ಟುಗಳಿಗೆ ಬರುವ ಮಂದಿ ಪತ್ರಿಕಾ ಭವನದ ಮುಂಭಾಗ ವಾಹನಗಳನ್ನು ನಿಲುಗಡೆಗೊಳಿಸುತ್ತಾರೆ. ಸುಮಾರು ೩೦ಕ್ಕೂ ಅಧಿಕ ವಾಹನಗಳನ್ನು ನಿಲುಗಡೆಗೊಳಿಸಲು ಇಲ್ಲಿ ಸ್ಥಳಾವಕಾಶವಿದೆ.

ಈ ನಡುವೆ ತಾಲೂಕು ಕಚೇರಿಯ ಮುಂಭಾಗ ಅಳವಡಿಸಿದ್ದ ಬೃಹತ್ ಫಲಕವೊಂದನ್ನು ಕಾಮಗಾರಿ ಸಂದರ್ಭ ತೆರವುಗೊಳಿಸಿ ಕುಡಿಯುವ ನೀರಿನ ಟ್ಯಾಂಕ್‌ನ ಕಾಂಪೌAಡ್‌ಗೆ ಒರಗಿಸಿ ಇಡಲಾಗಿತ್ತು. ಈ ಫಲಕ ಕಳೆದ ಒಂದು ತಿಂಗಳಿನಿAದ ರಸ್ತೆಯ ಬದಿಗೆ ಬಿದ್ದಿದ್ದು, ಅದನ್ನು ಈವರೆಗೆ ತೆರವುಗೊಳಿಸಿಲ್ಲ.

ಬೃಹತ್ ಫಲಕವು ವಾಹನ ನಿಲುಗಡೆಯ ಸ್ಥಳದಲ್ಲಿಯೇ ಬಿದ್ದಿರುವುದರಿಂದ ಈ ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ಇದನ್ನು ತೆರವುಗೊಳಿಸಿದರೆ ಕನಿಷ್ಟ ೩ ರಿಂದ ೪ ವಾಹನಗಳನ್ನು ನಿಲ್ಲಿಸ ಬಹುದಾಗಿದೆ. ಆದರೆ ಈ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಪಟ್ಟಣ ಪಂಚಾಯಿತಿ ಈ ಬಗ್ಗೆ ಗಮನಹರಿಸಿ ಫಲಕವನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.